
ಹಾಸನ ; ಸಕಲೇಶಪುರ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಏಪ್ರಿಲ್ ತಿಂಗಳಿನಲ್ಲಿ ಚುಟುಕು ಕವಿ ಕಾಜಾಣ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಾಲ್ಲೂಕು ಚುಸಾಪ ಅಧ್ಯಕ್ಷ ಮಲ್ಲೇಶ್.ಬಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಕ್ರಮ ಇಡೀ ದಿನ ನಡೆಯಲಿದ್ದು ಚುಟುಕು ವಿಚಾರ ಗೋಷ್ಠಿ ಹಾಗೂ ರಾಜ್ಯ ಮಟ್ಟದ ಚುಟುಕು ಕವಿ ಗೋಷ್ಠಿ ಏರ್ಪಡಿಸಲಾಗಿದೆ. ಕವಿಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲ ಕವಿಗಳನ್ನು ಪರಿಷತ್ ವತಿಯಿಂದ ಗೌರವಿಸಲಾಗುವುದು.
ಆಸಕ್ತರು ತಮ್ಮ ಭಾವಚಿತ್ರದೊಂದಿಗೆ ಸ್ವ ಪರಿಚಯ ಹಾಗೂ ಸ್ವ ರಚಿತ ಮೂರು ಚುಟುಕುಗಳನ್ನು ಮಾತ್ರ ಮಾ. ೧೫ರೊಳಗೆ 9008180219 ಹಾಗೂ 9663300228ಈ ವಾಟ್ಸಾಪ್ ಗೆ ಕಳುಹಿಸಬೇಕೆಂದು ತಿಳಿಸಿದ್ದಾರೆ.