ನನ್ನ ಸ್ನೇಹಿತನ ಹೆಸರು ‘ಆನಂದ’. ಹೆಸರಿಗೆ ತಕ್ಕಂತೆ ಆತನ ಮುಖದಲ್ಲಿ ಆನಂದ ಕಾಣುತ್ತಿರಲಿಲ್ಲ. ಯಾವಾಗಲೂ ಮುಖವನ್ನು ಗಂಟ್ಟಿಕ್ಕಿ ಗುರಾಯುಸುತಿದ್ದ. ಒಮ್ಮೆ ಕೇಳಿಯೇ ಬಿಟ್ಟೆ “ನಿನ್ನ ಹೆಸರು ಆನಂದ, ಯಾಕೆ ಮುಖ ಸಿಂಡ್ರೊಸ್ಕಿತಿಯಾ?”, ಈ ಪ್ರಶ್ನೆಗೆ ” ನಮ್ಮ ಅಪ್ಪನ ಹತ್ತಿರ ಕೇಳು” ಸಿಂಡ್ರೊಸ್ಕಂಡೇ ಉತ್ತರ ಕೊಟ್ಟ. ಅಲ್ಲಗೆ ಮುಗಿತು ನಮ್ಮ ಒಡನಾಟ. ನನಗೆ ಕಾಡಿದ್ದು, “ಆನಂದ”. ಅವನ ವ್ಯೆಕ್ತಿತ್ವ ಅಲ್ಲ. ಒಮ್ಮೆ ಸ್ನೇಹಿತರ ಜೊತೆ ಚರ್ಚೆ ಮಾಡುತ್ತಿದ್ದೆ. ಆಗ ಒಬ್ಬ ಸ್ನೇಹಿತ “ನಾನು ಆನಂದವಾಗಿ ಇದೀನಿ” ಎಂದ. ನೋಡಿ ಭಾಷೆ ಹೇಗಿದೆ ಅಂದರೆ ಪದನಾಮಗಳು ಬೇರೆ ಇದ್ದರೂ ಅಯಾ ಸಂದರ್ಭಕ್ಕೆ ತಕ್ಕಂತೆ ಉಪಯೋಗಿಸಿದಾಗ ಅರ್ಥ ಒಂದೇ ಇರುತ್ತದೆ. ನಾವು ಅನೇಕ ಬಾರಿ ಇಂತಹ ಪದಗಳನ್ನು ಉಪಯೋಗಿಸುತ್ತೇವೆ. ಅಂತಹ ಪದಗಳು ಎಲ್ಲಾ ಭಾಷೆಗಳಲ್ಲಿ ಕಾಣ ಸಿಗುವುದು. ಉದಾಹರಣೆಗೆ ಇಂಗ್ಲಿಷ್ನಲ್ಲಿ ‘ಬ್ಲಿಸ್’ ಮತ್ತು ‘ಹ್ಯಾಪಿನೆಸ್’. ಮೂಲತವಾಗಿ ಇವರೆಡರ ಕನ್ನಡದ ಅರ್ಥ ‘ಆನಂದ’. ಆದರೆ ಎರಡು ಮೂರು ಪದಗಳು ಏಕೇ? ಹೀಗಿದ್ದಾಗ ಬ್ಲಿಸ್ ಅತಿ ಆನಂದವೇ?
ಈ ‘ಬ್ಲಿಸ್’ ಪದವನ್ನು ಅಧ್ಯಾತ್ಮದಲ್ಲಿ, ಧ್ಯಾನಾವಸ್ತೆಯಲ್ಲಿ ಮತ್ತು ಮಾದಕದ್ರವ್ಯ ಸೇವನೆಯ ಸಮಯದಲ್ಲಿ ಬಹುವಾಗಿ ಉಪಯೋಗಿಸುವ ಪದ. ಮನೋವೈದ್ಯನಾದ್ದರಿಂದ ಈ ವಿಷಯ ಪ್ರಸ್ತಾಪಿಸುವ ಪ್ರಯತ್ನ ಮಾಡುವೆ.
ಆಂಗ್ಲ ಭಾಷೆಯ ಸೊಲೇಸ್, ಹ್ಯಾಪಿನೆಸ್ ಮತ್ತು ಬ್ಲಿಸ್ ಈ ಪದಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ನನ್ನದು. ನಮ್ಮಲ್ಲಿಗೆ ಬರುವ ಬಹುತೇಕ ರೋಗಿಗಳು ಖಿನ್ನತೆಗೆ ಒಳಗಾಗಿರುತ್ತಾರೆ. ಮನೋವೈದ್ಯರು ಇವರಿಗೆ ಔಷಧೋಪಚಾರದಿಂದ “ಸೊಲೇಸ್ (ನೆಮ್ಮದಿ)” ನೀಡಬಹುದು. “ಹ್ಯಾಪಿನೆಸ್” ನಾವು ಕೊಡುವ ಔಷಧದಿಂದ ಬರುವ ಸ್ಥಿತಿಯಲ್ಲ. ಈ ಹ್ಯಾಪಿನೆಸ್ (ಸಂತೋಷ) ಎಂಬುದು ಒಂದು ಮಾನಸಿಕ ಸ್ಥಿತಿಗತಿ. ಇದನ್ನು ಯಾರೂ ತುಂಬಲಾರರು. ಈ ಸ್ಥಿತಿ ತುಂಬ ವೈಯಕ್ತಿಕ. ಇದನ್ನು ವಿವರಿಸಲು ಅಸಾಧ್ಯ. ಕೆಲ ದೇಶಗಳು ಹ್ಯಾಪಿನೆಸ್ ಸೂಚ್ಯಂಕ ತಮ್ಮ ಪ್ರಜೆಗಳ ಮನಸ್ಸುಗಳ ನೆಮ್ಮದಿಯನ್ನು ಹೇಳಿಕೊಳ್ಳುತ್ತವೆ ಹೊರತು ಸಂತೋಷವನ್ನಲ್ಲ. ಸಂತೋಷ ಎಂಬುದು ನನ್ನಲ್ಲಿ ಇಲ್ಲ. ನನ್ನಲ್ಲಿ ಇರುವುದು ಸಂತೃಪ್ತಿ. ಸಂತೋಷವು ಮನಸ್ಥಿತಿ ಎಂಬುದಾದರೆ “ಬ್ಲಿಸ್” ಏನು? ಆನಂದವೇ ಅಥವ ಅತಿ ಆನಂದವೇ? ಸಂತೋಷವೇ ಇಲ್ಲದಿದ್ದಾಗ ಆನಂದವಾದರೂ ಏಲ್ಲಿಂದ ಬರಬೇಕು? ಈ ಆನಂದ ಸಿಗುವುದಾದರೆ ಯಾವ ಕ್ಷಣದಲ್ಲಿ ಸಿಗಬಹುದು? ಕೆಲವರಿಗೆ ಮಂದಿರಗಳಿಗೆ ಬೇಟಿ ನೀಡಿದಾಗ ಸಿಗುವುದು, ಮತ್ತೊಬ್ಬರಿಗೆ ಧ್ಯಾನಿಸುತ್ತಿದ್ದಾಗ ಸಿಗಬಹುದು ಮತ್ತು ಇಂತಹ ಸ್ಥಿತಿಯನ್ನು ಮಾದಕ ದ್ರವ್ಯ ಸೇವಿಸಿದಾಗ ಅನುಭೋಗಿಸಬಹುದು.
ನರ ವಿಜ್ಞಾನಿಗಳು ನಮ್ಮ ಮೆದುಳಿನ ಒಂದು ಕೇಂದ್ರವನ್ನು ಹುಡುಕಿದ್ದಾರೆ. ಈ ಕೇಂದ್ರಕ್ಕೆ ಲಘು ವಿದ್ಯುತ್ತನ್ನು ಹರಿಸಿದಾಗ ಅತಿಯಾದ ಆನಂದಕ್ಕೆ ಒಳಗಾಗುತ್ತಾರೆ ಎಂಬುದನ್ನು ವೈಜ್ಞಾನಿಕ ಲೇಖನಗಳಲ್ಲಿ ಓದಬಹುದು. ಈ ಕೇಂದ್ರವು ನಾನು ಮೇಲೆ ಹೇಳಿದ ಮೂರು ಕಾರಣಗಳಿಂದ ಉದ್ರಿಕ್ತಗೊಂಡು ಕಾರ್ಯಗೊಳ್ಳುತ್ತದೆ. ಇಂತಹ ಅವಸ್ಥೆಯನ್ನು ನಾವು “ಫಂಕ್ಷನಲ್ ಮ್ಯಾಗ್ನಟಿಕ್ ರೆಸೋನೆನ್ಸ ಇಮೇಜಿಂಗ್” ನಲ್ಲಿ ಕಾಣಬಹುದು. ಇಷ್ಟಲ್ಲದೆ ಇನ್ನು ಯಾವ ಯಾವ ಸಂದರ್ಭದಲ್ಲಿ ಆನಂದವನ್ನು ಕಾಣಬಹುದು?
ವಶೀಕರಣ, ನಕಲಿ ತನ ಮತ್ತು ಆತ್ಮ (Hypnotism, Bogus and Soul – ಸತ್ಯದ ಅನಾವರಣ)
ಸೃಷ್ಟಿಕರ್ತ ಮಾನವನಿಗೆ ಶರೀರದಲೆಲ್ಲಾ ನರ ಅಂತ್ಯ ಅಥವಾ ತುದಿಗಳನ್ನು ದಯಮಾಡಿದ್ದಾನೆ. ಈ ನರಗಳ ಸಂವೇದನೆಗಳು ಇಲ್ಲವಾದಲ್ಲಿ ನಮಗೆ ನೋವಿನ ಅರಿವಾಗುವುದಿಲ್ಲ. ನೈಸರ್ಗಿಕ ಮಿಥುನ ಕ್ರಿಯಾ ಅಂಗಾಂಗಗಳಿಗೆ ಈ ನರ ಅಂತ್ಯಗಳು ಹೇರಳವಾಗಿ ಇರುತ್ತವೆ. ಇವುಗಳನ್ನು ಉದ್ರೇಕಿಸಿದಾಗ ಕೆಲವು ಗ್ರಂಥಿಗಳಿಂದ ಹಾರ್ಮೋನ್ ಉತ್ಪತ್ತಿ ಮಾಡಿ ಮೆದುಳಿನ ಮೇಲೆ ತಿಳಿಸಿದ ಕೇಂದ್ರವನ್ನು ಉತ್ತೇಜಿಸಿ ಅತೀವ ಆನಂದವನ್ನು ಜೀವಿಗಳು ಪಡೆಯುತ್ತವೆ ಎಂದು ವಿಜ್ಞಾನ ಹೇಳುತ್ತದೆ. ಮಾನವನಿಗೆ ಈ ಮಿಥನೋತ್ಸವದ ಕ್ಷಣಾರ್ಧ ಸಮಯದಲ್ಲಿ ಮನಸ್ಸು ನಿರ್ಮಲವಾಗಿ ಅತೀವ ಆನಂದದಲ್ಲಿ ತೇಲುತ್ತಾನೆ ಎಂದು ತಂತ್ರ ವಿಜ್ಞಾನ ವಾಖ್ಯಾನಿಸಿದೆ. ಮನೋವಿಜ್ಞಾನ ಈ ಮಿಲನ ಉತ್ಸವದ ತುಟ್ಟ ತುದಿಯಲ್ಲಿ ಬಾಹ್ಯ ಮತ್ತು ವೈಯಕ್ತಿಕ ಅರಿವು ಇರುವುದಿಲ್ಲ ಎಂದು ಹೇಳುತ್ತೆ. ಜೀವಿಗೆ ತನ್ನ ಕುಲವನ್ನು ವೃದ್ಧಿಸಲು ಈ ತರಹದ ಆನಂದ ಅತ್ಯಮೂಲ್ಯ. ಈ ಕ್ಷಣಾರ್ಧ ಆನಂದವು ಮತ್ತೆಲ್ಲಾದರು ಸಿಗಬಹುದೇ?
ಪ್ರಭು ಬುದ್ದನಿಗೆ ಬೋಧಿ ಮರದ ಕೆಳಗೆ ಎಂದು ಜ್ಞಾನೋದಯವಾಯಿತೋ ಅಂದೇ ಅತೀ ಆನಂದ ಅವರಿಗೆ ಸಿಕ್ಕಿತ್ತು. ವಿಜ್ಞಾನಿ ಅಬ್ದುಲ್ ಕಲಾಂ ರಿಗೆ ಎಂದು ಮಿಸೈಲ್ ತಂತ್ರ ಜ್ಞಾನವನ್ನು ಆವಿಷ್ಕಾರ ಮಾಡಿದರೋ ಅಂದೇ ಆನಂದ ಸಿಕ್ಕಿತ್ತು. ಸರ್ ಸಿ ವಿ ರಾಮನ್ ಎಂದು ರಾಮನ್ ಎಫೆಕ್ಟ ಚಿಂತಸಿದರೋ ಅಂದೇ ಅವರಿಗೆ ಆನಂದ ಸಿಕ್ಕಿತ್ತು.
ಆಲ್ಬರ್ಟ ಇಯನಸ್ಟೀನ್ ವಿಜ್ಞಾನಿ ‘ಲಾ ಆಫ್ ರಿಲೇಟವೆಟಿ’ ಆವಿಷ್ಕಾರಿಸಿದ, ಅಂದೇ ಆವರಿಗೆ ಆನಂದ ಸಿಕ್ಕಿತ್ತು. ಆಲ್ಫ್ರೆಡ್ ನ್ಯೂಟನ್ ‘ಲಾ ಆಫ್ ಗ್ರಾವಿಟಿ’ ಆವಿಷ್ಕಾರಿಸಿದ, ಅಂದೇ ಇವರಿಗೆ ಆನಂದ ಸಿಕ್ಕಿತ್ತು. ಹೀಗೆ ಅನೇಕ ವಿಜ್ಞಾನಿಗಳು ತಮ್ಮ ತಮ್ಮ ಆವಿಷ್ಕಾರದೊಂದಿಗೆ ಆನಂದವನ್ನು ಪಟ್ಟಿದ್ದಾರೆ. ಇಲ್ಲಿಗೆ ಮುಗಿಯತೇ ಈ ಆನಂದ? ಇಲ್ಲ.
ಡಿಜಾವು ಮತ್ತು ಜಮೈಸಾವು ( Dejavu and Jamaisavo)
ಒಬ್ಬ ರೈತನು ತಾನು ತನ್ನ ಹೊಲದಲ್ಲಿ ಬೆವರು ಸುರಿಸಿ ಫಲವನ್ನು ಪಡೆದಾಗ ಆಗುವಂತಹ ಆನಂದ ಹೇಳತೀರದು. ಅವನು ಬೆಳೆದು ನಮಗೆ ಹಂಚುವನಲ್ಲವೇ, ಇದು ಆನಂದದ ಸಂಗತಿಯಲ್ಲವೇ? ಒಬ್ಬ ವೈದ್ಯ ತನ್ನ ಸಮಸ್ಯೆಯಗಳನ್ನು ಬದಿಗಿಟ್ಟು ತನ್ನ ರೋಗಿಯನ್ನು “ಯಮ”ನಿಂದ ದೂರ ಮಾಡುತ್ತಾನೋ ಆಗ ಆ ವೈದ್ಯನಿಗೆ ಆಗುವ ಆನಂದ ಅಥವ ಸಿಗುವ ಬ್ಲಿಸ್ ಎಣಿಸಲಾಗುವುದೇ? ಒಬ್ಬ ವೃತ್ತಿಪರನು ತಾನು ಕಷ್ಟಪಟ್ಟು ದುಡಿದಿದ್ದನ್ನು ಪರರಿಗೆ ಅವರ ಕಷ್ಟಕಾಲದಲ್ಲಿ ನೀಡುತ್ತಾನೋ, ಈ ಅನಂದಕ್ಕೆ ಬೆಲೆಯೇ ಇಲ್ಲ ಅಲ್ಲವೇ?
ಆದುದರಿಂದ ಈ ಆನಂದ ಅಥವ ಬ್ಲಿಸ್ ಪಡೆಯಬೇಕಾದರೇ ಪರಿಶ್ರಮ ಬೇಕು. ಇದನ್ನು ಯಾರು ಕೊಡಲಾರರು.
ಕೆಲವರು ಈ ಆನಂದವನ್ನು ಎಕ್ಟಸಿ, ಈಫೋರಿಯಾ ಮತ್ತು ಹೆವನ್ಲಿ ಫೀಲಿಂಗ್, ಇವುಗಳಿಗೆ ಹೋಲಿಸುತ್ತಾರೆ. ಮಾದಕ ದ್ರವ್ಯಗಳನ್ನು ಸೇವಿಸಿದಾಗ ಇಂತಹ ಭಾವಪರವಶತೆಗಳು, ಸುಖ ಅನುಭವ, ಸ್ವರ್ಗಾನುಭವ, ಮನೋ ಉತ್ಸಕಗಳನ್ನ ಅನುಭೋಗಿಸಬಹುದು. ಇವುಗಳ ಸೇವನೆಯಿಂದ ಮನುಷ್ಯರು ಮಾದಕದ್ರವ್ಯಗಳಿಗೆ ದಾಸರಾಗುತ್ತಾರೆ. ಆದಷ್ಟು ಈ ಚಟಗಳಿಂದ ದೂರ ಉಳಿದರೆ ಒಳಿತು. ಒಟ್ಟಾರೆ ನಮ್ಮ ಬಾಳ್ವೆಯೇ ಆನಂದಮಯ……
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

