
ಪೋರ್ಟ್ ಮಾರಿಷಸ್ – ಪ್ರಧಾನಿ ನವೀನ್ಚಂದ್ರ ರಾಮ್ಗೂಲಂ ಅವರು, ನರೇಂದ್ರ ಮೋದಿ ಅವರಿಗೆ ತಮ್ಮ ದೇಶದ ಅತ್ಯುನ್ನತ ನಾಗರಿಕ ಗೌರವವಾದ ‘ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಯಂಡ್ ಕೀ ಆಫ್ ದಿ ಇಂಡಿಯನ್ ಓಷನ್’ ಪ್ರಶಸ್ತಿಯನ್ನು ಘೋಷಿಸಿದ್ದಾರೆ.
ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆ ಮೋದಿ ಅವರದ್ದಾಗಿದೆ. ಈ ಗೌರವದೊಂದಿಗೆ, ಪ್ರಧಾನಿ ಮೋದಿ ಅವರು ಇದುವರೆಗೆ ಒಟ್ಟು 21 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ.
ಈ ವಿಶಿಷ್ಟ ಮನ್ನಣೆಯನ್ನು ಪಡೆದ ಐದನೇ ವಿದೇಶಿ ಪ್ರಜೆ ಮೋದಿ ಎಂದು ರಾಮ್ಗೂಲಂ ಹೇಳಿದರು. ಇನ್ನು ಈ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, “ಈ ನಿರ್ಧಾರವನ್ನು ನಾನು ವಿನಮ್ರವಾಗಿ ಬಹಳ ಗೌರವದಿಂದ ಸ್ವೀಕರಿಸುತ್ತೇನೆ. ಭಾರತ ಮತ್ತು ಮಾರಿಷಸ್ ನಡುವಿನ ಐತಿಹಾಸಿಕ ಬಾಂಧವ್ಯಕ್ಕೆ ಇದು ಗೌರವವಾಗಿದೆ” ಎಂದು ಹೇಳಿದರು.