ಕೊಲಂಬೋ,ಫೆ.14- ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಾಳೆ ನಡೆಯುವ ರಣರೋಚಕ ಪಂದ್ಯಕ್ಕೆ ಜಗ್ಗತಿನಾದ್ಯಂತ ಕ್ರಿಕೆಟ್ ಪ್ರೀಯರು ಕಾತರದಿಂದ ಕಾಯುತ್ತಿದ್ದಾರೆ. ಶ್ರೀಲಂಕಾದ ಕೊಲಂಬೋದಲ್ಲಿ ಭಾರತೀಯ ಕಾಲಮಾನ ಸಂಜೆ 7 ಆರಂಭವಾಗಲಿರುವ ಪಂದ್ಯಕ್ಕೆ ಎಲ್ಲರೂ ಕಾತುರರಾಗಿದ್ದು ಬದ್ದ ವೈರಿಗಳ ಸಮರ ಕ್ಷಣಕ್ಷಣದ ಕುತೂಹಲ ಹೆಚ್ಚಿಸಲಿದೆ.
ಎರಡೂ ತಂಡಗಳು ಈಗ ಕೊಲಂಬೋದಲ್ಲಿದ್ದು ಬಂಗಾಳಕೊಲ್ಲಿಯ ಆಗ್ನೇಯ ಭಾಗದ ಸಮುದ್ರದಲ್ಲಿ ವಾಯು ಭರ ಕುಸಿಯುವ ಸಾಧ್ಯತೆ ಇಂದ ಮೋಡ ಮುಸುಕಿದ ವಾತಾವರಣ ಸೃಷ್ಠಿಯಾಗಿದೆ. ನಾಳೆ ಸಂಜೆ ಮಳೆಸು ರಿಯಬಹುದು ಶ್ರೀಲಂಕಾದ ಹವಾಮಾನ ಇಲಾಖೆಯ ತಿಳಿಸಿದೆ.
ಪಂದ್ಯ ಪ್ರಾರಂಭವಾಗುವ ಎರಡು ಗಂಟೆಗಳ ಮೊದಲು ಸಂಜೆ 5 ಗಂಟೆಯ ಸುಮಾರಿಗೆ ಮಳೆಯಾಗುವ ಸಾಧ್ಯತೆಯಿದೆ. ಹೀಗಿದ್ದರೂ ಪಂದ್ಯ ನಡೆಯುವ ಮಳೆ ಬರುವ ಸಾಧ್ಯತೆ ಕಡಿಮೆ ಎಂದು ಹೇಳಿದೆ. ಇದರ ನಡುವೆ ಐಸಿಸಿ ಕೂಡ ಗಮನ ಹರಿಸಿದ್ದು ತಡವಾದರೂ ಪಂದ್ಯ ನಡೆಸುವ ಇರಾದೆಯಲ್ಲಿದೆ.
ಭಾರತ ಮತ್ತು ಪಾಕ್ ಲೀಗ್ನಲ್ಲಿ ಆಡಿರುವ ಎರಡೂ ಪಂದ್ಯವನ್ನು ಗೆದ್ದಿದೆ ಆದರೂ ರನ್ ರೇಟ್ಆಧಾರದ ಮೇಲೆ ಭಾರತ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮ ತಂಡಕ್ಕೆ ಮರಳುವ ಸಾಧ್ಯತೆ ಇದ್ದು ಇದರ ನಡುವೆ ಬಹಳ ದಿನದ ನಂತರ ಕೊಲಂಬೋದಲ್ಲಿ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ ಆಡುತ್ತಿದೆ.ಅಂಕಣ ಹೇಗದೆ ಮತ್ತು ಸ್ಪಿನರ್ಗಳಿಗೆ ನೆರವಾಗಲಿದೆಯೇ ಎಂಬುದನ್ನು ಅರಿಯಬೇಕಿದೆ.
ಭಾರತ ತಂಡ ನೆಟ್್ಸನಲ್ಲಿ ಅಭ್ಯಸ ನಡುಸುತ್ತಿದ್ದು ಪಾಕ್ಗೆ ಮತ್ತೆ ಸೋಲಿನ ರುಚಿ ತೋರಿಸಲು ಹಾತೊರೆಯುತ್ತಿದೆ. ಈಗಾಲೆ ಭಾತರದ ವಿರುದ್ದ ಆಡುವುದಲ್ಲಿ ಎಂದು ಹೈಡ್ರಾಮ ಮಾಡಿದ್ದ ಪಾಕ್ಗೆ ಐಸಿಸಿ ಭಾರಿ ದಂಡ ಮತ್ತು ನಿರ್ಬಂಧ ಎಚ್ಚರಿಕೆ ನಂತರ ಯೂಟರ್ನ್ ಹೊಡೆದಿದೆ.
ಪಾಕ್ ಆಟಗಾರರಿಗೆ ಈ ಎಲ್ಲಾ ಬೆಳವಣಿಗೆಯಿಂದ ಒತ್ತಡದಲ್ಲಿದ್ದು ಜಾಣಯ ಆಟಕ್ಕೆ ಮುಂದಾಲಿದೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ವಿಶ್ವಕಪ್ ಟಿ.20 ಕ್ರಿಕೆಟ್ನ ರೋಚಕ ಪಂದ್ಯಕ್ಕೆ ಸಿದ್ದತೆ ನಡೆದಿದ್ದು ಇಡೀ ಕ್ರೀಡಾಂಗಣದ ಆಸನದ ಟಿಕಿಟ್ಗಳು ಈಗಾಗಲೆ ದಾಖಲೆಯಂಬಂತೆ ಮಾರಾಟವಾಗಿದೆ