ಕನ್ನಡ ಭಾಷೆ ವಿರೋಧಿ ಹೇಳಿಕೆ: ಮೊದಲು ಕ್ಷಮೆ ಕೇಳಿ, ನಂತರ ಅರ್ಜಿ ವಿಚಾರಣೆ — ಹೈಕೋರ್ಟ್‌ ಕಮಲ್‌ ಹಾಸನ್‌ಗೆ ತರಾಟೆ

ಕಮಲ್‌ ಹಾಸನ್‌ ನೀಡಿದ ವಿವಾದಾಸ್ಪದ ಭಾಷಾ ಹೇಳಿಕೆಗೆ ಸಂಬಂಧಿಸಿದಂತೆ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಅಡ್ಡಿ ನಿವಾರಣೆ ಕುರಿತ ಅರ್ಜಿ ವಿಚಾರಣೆಯಲ್ಲಿ ಹೈಕೋರ್ಟ್‌ ಕಠಿಣ ನಿಲುವು ಪಡೆದಿದೆ. ಮೊದಲು ಕನ್ನಡಿಗರ ಕ್ಷಮೆ ಕೇಳಿ, ನಂತರ ಅರ್ಜಿ ಪರಿಗಣನೆ ಮಾಡುತ್ತೇವೆ ಎಂದು ನ್ಯಾಯಮೂರ್ತಿ ಸ್ಪಷ್ಟಪಡಿಸಿದರು.