ಹಾಸನ : ಹಾಸನ ನಗರದ ಐತಿಹಾಸಿಕ ಹೆಸರಿನ ಕನ್ನಡೀಕರಣಕ್ಕಾಗಿ ಪ್ರಮುಖರು ಸರ್ಕಾರಕ್ಕೆ ಹಾಸನಾಂಬೆ ಜಾತ್ರಾ ಹಿತರಕ್ಷಣಾ ಸಮಿತಿವತಿಯಿಂದ ಅಧಿಕೃತ ಮುಖ್ಯಮಂತ್ರಿ ಸಿದ್ದರಾಮಯ್ಯ , ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಮನವಿಯನ್ನು ಸಲ್ಲಿಸಿದ್ದಾರೆ.
ನಗರದ ಪೌರಾಣಿಕ ಹಾಗೂ ಶಾಸನಬದ್ಧ ಹೆಸರನ್ನು ಸಂರಕ್ಷಿಸುವ ನಿಟ್ಟಿನಲ್ಲಿ, ಆಂಗ್ಲ ಭಾಷೆಯಲ್ಲಿ ಬಳಸಲಾಗುತ್ತಿರುವ “HASSAN” ಬದಲಿಗೆ “HAASANA” ಎಂದು ಘೋಷಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಸಲ್ಲಿಸಲಾದ ಮನವಿಯಲ್ಲಿ, ಹಾಸನದ ಹೆಸರು ಮೂಲತಃ “ಸಿಂಹಾಸನಪುರಿ” ಯಿಂದ ರೂಪಾಂತರಗೊಂಡಿದ್ದು, 1140ನೇ ಇಸವಿಯಲ್ಲಿ ಹೊಯ್ಸಳರ ರಾಜ ವಿಷ್ಣುವರ್ಧನ ಕಾಲದ ಶಾಸನಗಳಲ್ಲಿ “ಹಾಸನ” ಎಂಬ ಹೆಸರು ದಾಖಲಾಗಿರುವುದನ್ನು ಉಲ್ಲೇಖಿಸಲಾಗಿದೆ.
ಆದರೆ ಬ್ರಿಟಿಷರ ಆಳ್ವಿಕೆಯ ಬಳಿಕ ಹೆಸರು Transactions “HASSAN” ಎಂಬ ರೂಪಕ್ಕೆ ಬದಲಾಗಿದ್ದು, ಇದು ಕನ್ನಡದ ಮೂಲ ಉಚ್ಚಾರಣೆಗೂ, ಐತಿಹಾಸಿಕತೆ ಯಿಗೂ ಅನುಗುಣವಾಗಿಲ್ಲ ಎಂದು ಮನವಿ ಹೇಳಿದ್ದಾರೆ.
ಇದನ್ನು ಓದಿ: ಬೆಳಿಗ್ಗೆ ಟೀ, ಕಾಫೀ ಬೇಡ.. ಜಸ್ಟ್ ನೀರಿಗೆ ಇದನ್ನು ಬೆರಸಿ ಕುಡಿದ್ರೆ 5 ದಿನದಲ್ಲಿ “ಡೊಳ್ಳು ಹೊಟ್ಟೆ”ಯ ಕೊಬ್ಬು ಕರಗುತ್ತೆ..!
ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು, ಮಂಗಳೂರು, ಬೆಳಗಾವಿ, ಕೊಪ್ಪಳ, ವಿಜಯಪುರ, ಶಿವಮೊಗ್ಗ ಸೇರಿದಂತೆ ರಾಜ್ಯದ ಅನೇಕ ನಗರಗಳ ಹೆಸರುಗಳು ಆಂಗ್ಲ ರೂಪಾಂತರದಿಂದ ಕನ್ನಡೀಕೃತ ರೂಪಕ್ಕೆ ಬದಲಾಯಿಸಿದ್ದ ಉದಾಹರಣೆಗಳನ್ನು ನೀಡಿರುವ ಮನವಿದಾರರು, ಅದೇ ಮಾದರಿಯಲ್ಲಿ ಹಾಸನಕ್ಕೂ ನ್ಯಾಯ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತ ಮನವಿಯನ್ನು ಡಾ. ಎನ್. ರಮೇಶ್ (ಅಧ್ಯಕ್ಷರು) ಸಲ್ಲಿಸಿದ್ದು, ಶ್ರೀ ರಾಜು ವೆಂಕಟೇಶ್, ಶ್ರೀ ಚಂದ್ರಣ್ಣ, ಶ್ರೀ ಸಾಯಿ ಪ್ರಸಾದ್, ಶ್ರೀಮತಿ ರಾಧಾ ತಿವಾರಿ ಸಹಿ ಮಾಡಿದ್ದಾರೆ. ಹಾಸನದ ಹೆಸರಿನ ಗೌರವ ಮತ್ತು ಐತಿಹಾಸಿಕತೆ ಉಳಿಸಲು “HAASANA” ಎನ್ನುವ ಕನ್ನಡೀಕೃತ ರೂಪವೇ ಸೂಕ್ತ ಎಂದು ಮನವಿದಾರರು ತಿಳಿಸಿದ್ದಾರೆ.

