
ಹಾಸನ : ಪಿ.ಎಂ.ಕೆ.ಎಸ್.ವೈ ಸೂಕ್ಷ್ಮ ನೀರಾವರಿ (ಎಸ್.ಸಿ.ಪಿ) ಯೋಜನೆಯಡಿ 2024-25 ನೇ ಸಾಲಿನ ಭೂ ಹಿಡುವಳಿ ಹೊಂದಿರುವ ಪರಿಶಿಷ್ಟ ಜಾತಿ (ಎಸ್.ಸಿ.) ರೈತರಿಗೆ ತುಂತುರು ನೀರಾವರಿ ಘಟಕಗಳನ್ನು ವಿತರಿಸಲು ಕಾರ್ಯಕ್ರಮ ನಿಗದಿಯಾಗಿರುತ್ತದೆ. ನೀರಾವರಿ ಸೌಲಭ್ಯ ಹೊಂದಿರುವ ರೈತರಿಂದ ತುಂತುರು ನೀರಾವರಿ ಘಟಕಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಿದ ಎಲ್ಲಾ ರೈತರಿಗೆ ತುಂತುರು ನೀರಾವರಿ ಘಟಕಗಳನ್ನು ನೀಡಲಾಗುವುದು. ಪ್ರತಿ ತುಂತುರು ನೀರಾವರಿ ಘಟಕಕ್ಕೆ 15,429 /- ರೂಗಳ ಸಹಾಯಧನವಿದ್ದು, ರೈತರು 4,139 /- ರೂಗಳನ್ನು ರೈತರ ವಂತಿಕೆಯಾಗಿ ಬ್ಯಾಂಕ್ಗೆ ಪಾವತಿ ಮಾಡಬೇಕಾಗಿರುತ್ತದೆ.
ತುಂತುರು ನೀರಾವರಿ ಘಟಕಗಳನ್ನು ಪಡೆಯಲು ರೈತರು ಅರ್ಜಿ ನಮೂನೆ, ಆದಾರ್ ಕಾರ್ಡ್, ಪಹಣಿ, ಜಮೀನಿನ ಚಕ್ಕುಬಂದಿ, ನೀರಿನ ಲಭ್ಯತೆ ಪ್ರಮಾಣ ಪತ್ರ, ಪೋಟೋ, ಬ್ಯಾಂಕ್ ಪಾಸ್ ಬುಕ್, ಜಾತಿ ಪ್ರಮಾಣ ಪತ್ರ ದಾಖಲಾತಿಗಳನ್ನು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಿಗೆ ಸಲ್ಲಿಸಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಹಾಸನದ ಜಂಟಿ ಕೃಷಿ ನಿರ್ದೇಶಕರು ತಿಳಿಸಿರುತ್ತಾರೆ.