ಅರಕಲಗೂಡು : ತಾಲೂಕಿನ 18 ಮಕ್ಕಳ ಮನೆ (LKG/UKG) ಕೇಂದ್ರಗಳ ಎರಡನೇ ವರ್ಷದ ವಾರ್ಷಿಕೋತ್ಸವವು ಸಂಭ್ರಮದಿಂದ ನೆರವೇರಿತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಧ್ರುವಂತ್ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳ ಮನೆ ಯೋಜನೆಯನ್ನು ಶ್ಲಾಘಿಸಿದರು.

“ಮಕ್ಕಳ ಮನೆ ಒಂದು ಅತ್ಯುತ್ತಮ ಶೈಕ್ಷಣಿಕ ಪರಿಕಲ್ಪನೆ. ಇದು ಕೇವಲ ಅರಕಲಗೂಡಿಗೆ ಮಾತ್ರವಲ್ಲ, ರಾಜ್ಯದ ಮಟ್ಟದಲ್ಲಿಯೇ ಮಾದರಿ ಶಿಕ್ಷಣ ವ್ಯವಸ್ಥೆಯಾಗಿದೆ. ಪೋಷಕರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸಬೇಕು,” ಎಂದು ಅವರು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಅವರು ಸರ್ಕಾರಿ ಶಾಲೆಗಳ ಮಹತ್ವವನ್ನು ಒತ್ತಿಹೇಳಿ, “ಪ್ರತಿ ಗ್ರಾಮದಲ್ಲಿಯೂ ಮಕ್ಕಳ ಮನೆ ಸ್ಥಾಪನೆಯಾದರೆ, ಖಾಸಗಿ ಶಾಲೆಗಳ ಅವಶ್ಯಕತೆ ಕಡಿಮೆಯಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ,” ಎಂದು ಹೇಳಿದರು. ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ದಿಕ್ಕಿನಲ್ಲಿ ಪೋಷಕರು ಹೆಚ್ಚು ಗಮನ ಹರಿಸಬೇಕು ಎಂದು ಕರೆ ನೀಡಿದರು.

🌟 ಮಕ್ಕಳ ಮನೆ – ಅರಕಲಗೂಡಿನ ಹೆಮ್ಮೆ, ಶಿಕ್ಷಣದ ಹೊಸ ದಿಕ್ಕು 🌟
ಒಮ್ಮೆ ಖಾಸಗಿ ಕಾನ್ವೆಂಟ್ ಶಾಲೆಗಳತ್ತ ಮುಖಮಾಡುತ್ತಿದ್ದ ಪೋಷಕರು, ಇಂದು ಸರ್ಕಾರಿ ಶಾಲೆಗಳತ್ತ ವಿಶ್ವಾಸದಿಂದ ಮರಳುತ್ತಿರುವುದು ಈ ಯೋಜನೆಯ ಮಹತ್ವದ ಸಾಧನೆಯಾಗಿದೆ. “ಮಕ್ಕಳ ಮನೆ (LKG/UKG)” ಮೂಲಕ ಗ್ರಾಮೀಣ ಮಕ್ಕಳಿಗೆ ಕಾನ್ವೆಂಟ್ ಮಟ್ಟದ ಗುಣಮಟ್ಟದ ಶಿಕ್ಷಣವನ್ನು ಒದಗಿಸಲಾಗುತ್ತಿದೆ.
ಈ ಶಿಕ್ಷಣ ಚಳವಳಿಗೆ ದಿಕ್ಕು ತೋರಿದವರು ಮಾಜಿ ಸಚಿವರು ಹಾಗೂ ಅರಕಲಗೂಡು ಶಾಸಕರಾದ ಎ. ಮಂಜು.ಅವರ ದೃಷ್ಟಿ – “ಪ್ರತಿಯೊಬ್ಬ ಮಗುವಿಗೂ ಗುಣಮಟ್ಟದ ಶಿಕ್ಷಣ” – ಈ ಯೋಜನೆಯ ಬುನಾದಿಯಾಗಿದೆ.ಈ ಕನಸನ್ನು ಕಾರ್ಯರೂಪಕ್ಕೆ ತಂದವರು ತಾರಾ ಎ. ಮಂಜು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಸನ ಅವರು ಹಿರಿಯ ವಿದ್ಯಾರ್ಥಿಗಳ ತಂಡದೊಂದಿಗೆ ಮಕ್ಕಳಿಗೆ ಪ್ರೀತಿ, ಶಿಸ್ತು ಮತ್ತು ಮೌಲ್ಯಾಧಾರಿತ ಕಲಿಕಾ ವಾತಾವರಣವನ್ನು ನಿರ್ಮಿಸುತ್ತಿದ್ದಾರೆ.
ಈ ಯೋಜನೆಗೆ ಬುನಾದಿ ಹಾಕಿದವರು ಡಾ. ಅಶೋಕ್ ಹನ್ಯಾಳ್, ನಿಕಟಪೂರ್ವ ಕಾರ್ಯ ನಿರ್ವಾಹಕ ಅಧಿಕಾರಿಗಳು( Executive officer) ತಾಲೂಕ್ ಪಂಚಾಯತ್. ಅರಕಲಗೂಡು, ಹನ್ಯಾಳು ಗ್ರಾಮದಲ್ಲಿ ಪ್ರಥಮ ಮಕ್ಕಳ ಮನೆ ಪ್ರಾರಂಭಿಸಿ, ಇಂದು 18 ಗ್ರಾಮ ಪಂಚಾಯತ್ ವ್ಯಾಪ್ತಿಗೆ ವಿಸ್ತರಿಸಿದ ಪ್ರೇರಕ ಶಕ್ತಿಯಾಗಿದ್ದಾರೆ.
ಪ್ರಸ್ತುತ ಸುಮಾರು 450ಕ್ಕೂ ಹೆಚ್ಚು ಮಕ್ಕಳು ಈ ಯೋಜನೆಯಡಿ ಶಿಕ್ಷಣ ಪಡೆಯುತ್ತಿದ್ದು, ಮಕ್ಕಳ ಸ್ನೇಹಿ ವಾತಾವರಣ, Activity-Based Learning ಮತ್ತು ಮೌಲ್ಯಾಧಾರಿತ ಶಿಕ್ಷಣದಿಂದ ಪೋಷಕರ ವಿಶ್ವಾಸವನ್ನು ಗಳಿಸಿದೆ.ಈ ಕಾರ್ಯಕ್ರಮವು ಕೇವಲ ಒಂದು ವಾರ್ಷಿಕೋತ್ಸವವಲ್ಲ, ಸರ್ಕಾರಿ ಶಿಕ್ಷಣ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಬಲಪಡಿಸುವ ಒಂದು ಮಹತ್ವದ ಹೆಜ್ಜೆಯಾಗಿದೆ.
ಇದೇ ಮಾದರಿಯ ಕಾರ್ಯವನ್ನು ಎಲ್ಲಾ ಚುನಾಯಿತ ಪ್ರತಿನಿಧಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅನುಷ್ಠಾನಗೊಳಿಸಿ, ಬಡ ಹಾಗೂ ಹಿಂದುಳಿದ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ದೃಢವಾದ ಬುನಾದಿ ಹಾಕುವಂತೆ ನಾನು ಮನವಿ ಮಾಡುತ್ತೇನೆ.
ವರದಿ – ಎಂ.ಎ. ಕುಮಾರಸ್ವಾಮಿ, ರಾಮನಾಥಪುರ.
