ಸರ್ಕಾರ ಪರಿಸರ ಸಂರಕ್ಷಣೆಗಾಗಿ ಏಕಕಾಲಿಕ ಬಳಕೆಯ ಪ್ಲಾಸ್ಟಿಕ್ ವಿರೋಧಿಸಿ ಸ್ಪಷ್ಟ ಆದೇಶಗಳನ್ನು ಹೊರಡಿಸಿದೆ ವಿಶೇಷವಾಗಿ ಸರ್ಕಾರಿ ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟೆಲ್ ಬಳಕೆಯನ್ನು ನಿಷೇಧಿಸಿ ಗ್ಲಾಸ್ ಸ್ಟೀಲ್ ಅಥವಾ ಇತರ ಪರ್ಯಾಯ ವ್ಯವಸ್ಥೆಯಲ್ಲಿ ನೀರು ಒದಗಿಸಬೇಕು ಎಂದು ತಿಳಿಸಿದೆ ಆದರೆ ಈ ನಿಯಮಗಳನ್ನು ಜಾರಿಗೊಳಿಸಬೇಕಾದವರೇ ಅದನ್ನು ಉಲ್ಲಂಘಿಸುತ್ತಿರುವುದು ವಿಷಾದಕರ ವಾಸ್ತವ
2026 ಮಾರ್ಚ್ 26ರಂದು ಶಿವಮೊಗ್ಗದ CCF ಕಚೇರಿಯಲ್ಲಿ ನಡೆದ ಮಾನವ ಹಾವು ಸಂಘರ್ಷ ನಿರ್ವಹಣೆ ಕಾರ್ಯಾಗಾರದಲ್ಲಿ ಪ್ಲಾಸ್ಟಿಕ್ ನೀರಿನ ಬಾಟೆಲ್ಗಳ ಬಳಕೆ ನಡೆದಿರುವುದು ಬೇಸರದ ಸಂಗತಿ ಈ ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ DCF ಡಾ ಅಜ್ಜಯ್ಯ ಜಿ ಆರ್ ಅವರ ಎದುರಲ್ಲೇ ಈ ನಿಯಮ ಉಲ್ಲಂಘನೆ ನಡೆದಿದೆ ಕಾರ್ಯಕ್ರಮದ ಬಳಿಕವೂ ಅಲ್ಲಲ್ಲಿ ಬಾಟೆಲ್ಗಳು ಬಿದ್ದಿರುವುದು ನಿರ್ಲಕ್ಷ್ಯದ ಸ್ಪಷ್ಟ.

ಉದಾಹರಣೆ:
ಪ್ಲಾಸ್ಟಿಕ್ ಕ್ಷಣಿಕ ಉಪಯೋಗ ಆದರೆ ಅದರ ಪರಿಣಾಮ ಶತಮಾನಗಳವರೆಗೆ ಪ್ರಕೃತಿಗೆ ಭಾರ ಮಣ್ಣು ನೀರು ಜೀವಜಾಲ ಎಲ್ಲಕ್ಕೂ ಇದು ಹಾನಿಕಾರಕ ಇಂತಹ ವಸ್ತುಗಳನ್ನು ತಡೆಯಲು ಸರ್ಕಾರವೇ ಆದೇಶ ಮಾಡಿದ್ದರೂ ಅದನ್ನು ಪಾಲಿಸಬೇಕಾದ ಅಧಿಕಾರಿಗಳೇ ಕಡೆಗಣಿಸಿದರೆ ಜನರಿಗೆ ಯಾವ ಸಂದೇಶ ಹೋಗುತ್ತದೆ
ಇದರ ಜೊತೆಗೆ ಸಾರ್ವಜನಿಕ ಹಣದ ವ್ಯರ್ಥವೂ ಇಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ ಅಗತ್ಯಕ್ಕಿಂತ ಹೆಚ್ಚು ಬಾಟೆಲ್ಗಳನ್ನು ಬಳಸುವುದು ನಂತರ ಅವನ್ನು ತ್ಯಜಿಸುವುದು ಸರ್ಕಾರದ ಹಣವನ್ನು ವ್ಯರ್ಥ ಮಾಡುವುದು ಇದೇ ಹಣವನ್ನು ಅರಣ್ಯ ಸಂರಕ್ಷಣೆ ಸಿಬ್ಬಂದಿ ಕಲ್ಯಾಣ ಅಥವಾ ತುರ್ತು ಸೇವೆಗಳಿಗೆ ಬಳಸಬಹುದಿತ್ತು

ಸಣ್ಣ ತಪ್ಪು ಮಾಡಿದ ರೈತನಿಗೆ ತಕ್ಷಣ ನೋಟೀಸ್ ಕೊಡುವ ವ್ಯವಸ್ಥೆ ಅಧಿಕಾರಿಗಳ ವಿಷಯದಲ್ಲಿ ಮೌನವಾಗಿರುವುದು ನ್ಯಾಯವಲ್ಲ ನಿಯಮಗಳು ಎಲ್ಲರಿಗೂ ಒಂದೇ ಆಗಬೇಕು ಅಧಿಕಾರಿಗಳಿಗೆ ಮಾತ್ರ ವಿನಾಯಿತಿ ಇರಬಾರದು
ಅರಣ್ಯ ಸಚಿವರಾದ Eshwar Khandre ಅವರು ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಮುಖ್ಯಮಂತ್ರಿಯಾದ Siddaramaiah ಅವರು ರಾಜ್ಯಾದ್ಯಂತ ಏಕಕಾಲಿಕ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲು ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು.

ಇದು ಸಣ್ಣ ವಿಷಯವಲ್ಲ ಇದು ಜವಾಬ್ದಾರಿತನದ ಪ್ರಶ್ನೆ ಇದು ಸಾರ್ವಜನಿಕ ಹಣದ ಪ್ರಶ್ನೆ ಇದು ನಮ್ಮ ಭೂಮಿಯ ಭವಿಷ್ಯದ ಪ್ರಶ್ನೆ.
ಬೇರು ಭೂಮಿ 🌱
