ಕೆ.ಆರ್.ಪೇಟೆ: ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಚಿಕ್ಕಳಲೆ ಗ್ರಾಮದ ರೈತ ಮೋಹನ್ ಎಂಬವರಿಗೆ ಸೇರಿದ ಎರಡು ಎಕರೆ ಜಮೀನಿನಲ್ಲಿ 200 ಅಡಿಕೆ ಗಿಡಗಳ ಪೈಕಿ ಸುಮಾರು 35 ಅಡಿಕೆ, 5 ತೆಂಗು ಗಿಡಗಳನ್ನು ವಿಕೃತಿ ಮನಸ್ಸಿನ ಕಿಡಿಗೇಡಿಗಳು ಭಾನುವಾರ ತಡರಾತ್ರಿ ಕಡಿದು ಹಾಕಿರುವ ಘಟನೆ ನಡೆದಿದೆ.
ಚಿಕ್ಕಳಲೆ ರೈತ ಮೋಹನ್ ಜಮೀನಿನಲ್ಲಿ ಎರಡು ವರ್ಷಗಳ ಹಿಂದೆ ಅಡಿಕೆ ಗಿಡಗಳನ್ನು ಹಾಕಿದ್ದರು ಎದೆಯೆತ್ತರಕ್ಕೆ ಬೆಳೆದಿದ್ದ ಗಿಡಗಳನ್ನ ಯಾರೋ ಕಿಡಿಗೇಡಿಗಳು ಉತ್ತಮ ಫಸಲು ನೀಡಲು ತಯಾರಾಗಿದ್ದ ಅಡಿಕೆ ಗಿಡಗಳನ್ನೇ ರಾತ್ರೋ ರಾತ್ರಿ ಕಡಿದು ಹಾಕಿದ್ದಾರೆ. ಬೆಳಗ್ಗೆ ಜಮೀನಿಗೆ ಆಗಮಿಸಿದ್ದ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ. ಮಕ್ಕಳಂತೆ ಸಾಕಿದ್ದ ಗಿಡಗಳು ನೆಲಕ್ಕುರುಳಿರುವುದನ್ನು ಕಂಡು ರೈತ ಮೋಹನ್ ಕಣ್ಣೀರು ಹಾಕಿದ್ದಾರೆ. ಕೂಡಲೇ ಅವರು ಸ್ಥಳೀಯ ಪೊಲೀಸರ ಗಮನಕ್ಕೆ ತಂದಿದ್ದಾರೆ.

ಬಳಿಕ ಗ್ರಾ.ಪಂ ಮಾಜಿ ಸದಸ್ಯ ಬದ್ರಿ ಮಾತನಾಡಿ ನಮ್ಮ ಗ್ರಾಮದ ರೈತ ರವರಿಗೆ ಸೇರಿದ ಎರಡು ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ ಅಡಿಕೆ ತೋಟದಲ್ಲಿ ಸುಮಾರು 35 ಕ್ಕೂ ಹೆಚ್ಚು ಅಡಿಕೆ ಹಾಗೂ 5 ತೆಂಗು ಗಿಡಗಳು ನಾಶ ಮಾಡಿದ್ದಾರೆ. ಮೋಹನ್ ಬೆಳೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು ಎರಡು ವರ್ಷದ ಅಡಿಕೆ ತೆಂಗು ಗಿಡಗಳು ನಾಶ ಮಾಡಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಇನ್ನು ಬೆಳೆ ನಾಶದ ಬಗ್ಗೆ ಮಾಹಿತಿ ನೀಡಿದರು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಸುಳಿಯದೇ ಇರುವುದು ಅವರಲ್ಲಿ ಮತ್ತಷ್ಟು ಬೇಸರ ಮೂಡಿಸಿದೆ. ಈ ಕೃತ್ಯದಿಂದ ಮನ ನೊಂದಿರುವ ರೈತ ಕುಟುಂಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷ ದೇವರಾಜು, ಹಿರಿಯ ಮುಖಂಡ ರಾಮೇಗೌಡ,ನೆಂಜರಾಜು,ಶಿವರಾಜೇಗೌಡ, ಪಟೇಲ್ ಶಿವಕುಮಾರ್,ಸಂದೇಶ್, ಪವಿತ್ರ, ಸೇರಿದಂತೆ ಇದರಲ್ಲಿದ್ದರು.
– ಮನು ಮಾಕವಳ್ಳಿ ಕೆ ಆರ್ ಪೇಟೆ
