ಹಾಸನ-ಸರ್ಕಾರ-ಜನರ ಸೇತುವೆಯಾಗಿ, ಸರ್ಕಾರಿ ಸೌಲಭ್ಯಗಳನ್ನು ಜನರಿಗೆ ತಲುಪಿಸಲು ಪ್ರಾಮಾಣಿಕವಾಗಿ ಶ್ರಮಿಸುವೆ-ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ

ಹಾಸನ ಜಿಲ್ಲೆಯ ಬಗ್ಗೆ ತುಂಬಾ ಹೆಮ್ಮೆ ಇದೆ. ಹಳೇಬೀಡು, ಬೇಲೂರು ನನ್ನ ಅಚ್ಚುಮೆಚ್ಚು, ಶ್ರವಣಬೆಳಗೊಳ, ಸಕಲೇಶಪುರದ ಸೌಂದರ್ಯಕ್ಕೆ ಮಾರು ಹೋಗದವರಿಲ್ಲ. ಇಲ್ಲಿಗೆ ಡಿಸಿಯಾಗಿ ಬಂದಿರುವುದು ತುಂಬಾ ಖುಷಿ ನೀಡಿದೆ. ಜಿಲ್ಲೆಯ ಅಭಿವೃದ್ಧಿಗೆ ನನ್ನದೇ ಕಲ್ಪನೆಗಳಿದ್ದು ಹಂತ ಹಂತವಾಗಿ ಕಾರ್ಯಗತಗೊಳಿಸುವೆ. ಹಾಗೆಯೇ ಹೊಯ್ಸಳೋತ್ಸವಕ್ಕೆ ಮರು ಚಾಲನೆ ನೀಡಲು ಶ್ರಮಿಸುವೆ -ನೂತನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಭರವಸೆ.