ತುಮಕೂರು: ರಾಜ್ಯ ಕ್ರಿಕೆಟ್ ಗೆ 14ವರ್ಷದೊಳಗಿನ ಆಟಗಾರರಲ್ಲಿ ಈ ಬಾರಿ ತುಮಕೂರು ವಲಯದ ಆಶಿತ್ ಸಂಜಯ್ ಗಿರೀಶ್ ರವರು ತುಮಕೂರು ಪ್ರತಿನಿಧಿಯಾಗಿದ್ದು 14 ವರ್ಷದೊಳಗಿನ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
14 ವರ್ಷದೊಳಗಿನ ರಾಜ್ಯ ತಂಡಕ್ಕೆ ಆಯ್ಕೆಯಾದ ಆಶಿತ್ ಸಂಜಯ್ ಗಿರೀಶ್ ಅವರಿಗೆ ರಾಜ್ಯ ಕ್ರಿಕೆಟ್ ಸಂಸ್ಥೆಯ ತುಮಕೂರು ವಲಯದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಸಿ.ಆರ್.ಹರೀಶ್ ರವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.ನಿಮ್ಮ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಕ್ರಿಕೆಟ್ ಆಟದ ಮೇಲಿನ ಉತ್ಸಾಹವು ನಿಜವಾಗಿಯೂ ಫಲ ನೀಡಿದೆ. ಮುಂದಿನ ಯಶಸ್ವಿ ಮತ್ತು ಹೆಮ್ಮೆಯ ಪ್ರಯಾಣಕ್ಕಾಗಿ ನಿಮ್ಮೆಲ್ಲರಿಗೂ ಶುಭ ಹಾರೈಸುತ್ತೇನೆ ಎಂದು ಸಿ.ಆರ್.ಹರೀಶ್ ರವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
– ಕೆ.ಬಿ.ಚಂದ್ರಚೂಡ
