ಇಮ್ಫಾಲ್: ಮಣಿಪುರ ಜೂನಲ್ಲಿ ಏಷಿಯನ್ ಜೈಂಟ್ ಟೋರ್ಟಾಯಿಸ್ಗಳ (Asian Giant Tortoise) ಸಂವರ್ಧನೆ ಯಶಸ್ವಿಯಾಗಿ ಆರಂಭಗೊಂಡಿದ್ದು, ವನ್ಯಜೀವಿ ಸಂರಕ್ಷಣೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ. ಅಪರೂಪದ ಮತ್ತು ಅಪಾಯದಲ್ಲಿರುವ ಈ ಜಾತಿಯ ಆಮೆಗಳು ಮಣಿಪುರದ ಸಹಜ ಪರಿಸರದಲ್ಲಿ ಅತ್ಯಂತ ಅಪರೂಪವಾಗಿ ಕಾಣಸಿಗುತ್ತವೆ.
ಮಣಿಪುರ ಜೂ ಅಧಿಕಾರಿಗಳ ಪ್ರಕಾರ, ಇತ್ತೀಚೆಗೆ ಜೂನಲ್ಲಿ ಸಾಕಲಾಗುತ್ತಿದ್ದ ಜೈಂಟ್ ಟೋರ್ಟಾಯಿಸ್ಗಳು ಮೊಟ್ಟೆ ಇಟ್ಟಿದ್ದು, ಅದರಿಂದ ಚಿಕ್ಕ ಕಂದಮ್ಮಗಳು ಹೊರಬಂದಿವೆ. ಈ ಬೆಳವಣಿಗೆ, ರಾಜ್ಯದ ವನ್ಯಜೀವಿ ಸಂರಕ್ಷಣಾ ಚಟುವಟಿಕೆಗಳಿಗೆ ಹೊಸ ಉತ್ಸಾಹವನ್ನು ತಂದಿದೆ.
ಏಷಿಯನ್ ಜೈಂಟ್ ಟೋರ್ಟಾಯಿಸ್ ಪ್ರಭೇದವು ಅಂತರಾಷ್ಟ್ರೀಯ ವನ್ಯಜೀವಿ ಸಂರಕ್ಷಣಾ ಒಕ್ಕೂಟ (IUCN) ಪಟ್ಟಿಯಲ್ಲಿ ಅಪಾಯದಲ್ಲಿರುವ ಪ್ರಭೇದವಾಗಿ ದಾಖಲಿಸಲಾಗಿದೆ. ಈ ಆಮೆಗಳ ಸಂವರ್ಧನೆಯ ಮೂಲಕ ಭವಿಷ್ಯದಲ್ಲಿ ಅವುಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನ ನಡೆಯಲಿದೆ.
ಮಣಿಪುರ ಅರಣ್ಯ ಇಲಾಖೆ ಮತ್ತು ಜೂ ಅಧಿಕಾರಿಗಳು ಈ ಯಶಸ್ಸನ್ನು ಭವಿಷ್ಯದಲ್ಲಿ ದೊಡ್ಡ ಮಟ್ಟದ ಸಂರಕ್ಷಣಾ ಯೋಜನೆಗೆ ವಿಸ್ತರಿಸಲು ತೀರ್ಮಾನಿಸಿದ್ದಾರೆ.
