ಹಾಸನ: ಹೋಳಿ ಆಚರಣೆ ವೇಳೆ ಯುವಕರ ನಡುವೆ ನಡೆದಿದ್ದ ಮಾರಾಮಾರಿ ಪ್ರಕರಣ ಸಂಬಂಧ, ಹಲ್ಲೆ ನಡೆಸಿದ್ದ ಮೂವರು ಯುವಕರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲೋಹಿತ್, ಋತ್ವಿಕ್ ಮತ್ತು ಆಕಾಶ್ ಬಂಧಿತ ಆರೋಪಿಗಳು, ಮಾ.8 ರಂದು ನಗರದ ಖಾಸಗಿ ಹೋಟೆಲ್ನಲ್ಲಿ ಹೋಳಿ ಹಬ್ಬದ ಆಚರಣೆ ಆಯೋಜನೆ ಮಾಡಲಾಗಿತ್ತು. ಈ ವೇಳೆ ಏಕಾಏಕಿ ಗಲಾಟೆ ಮಾಡಿಕೊಂಡು ಪ್ರಜ್ವಲ್ ಎಂಬಾತನ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ಕೂಡಲೇ ಪ್ರಜ್ವಲ್ನನ್ನು ನಗರದ ಹಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಈತನನ್ನು ನೋಡಲು ಬಂದಿದ್ದ ಚಂದನ್ ಎಂಬಾತನ ಮೇಲೂ ಇದೇ ಗುಂಪು ಮೃಗೀಯ ವರ್ತನೆ ತೋರಿತ್ತು. ಚಂದನ್ನನ್ನು ಅರೆ ಬೆತ್ತಲುಗೊಳಿಸಿ ಕೈಯಿಂದ ಥಳಿಸಿ, ಕಾಲಿನಿಂದ ಹೊದ್ದು ರೌಡಿ ವರ್ತನೆ ತೋರಿದ್ದರು. ಆತ ಬಿಟ್ಟುಬಿಡಿ ಎಂದು ಕೇಳಿಕೊಂಡರೂ ಬಿಡದೆ ಅಟ್ಟಹಾಸ ಪ್ರದರ್ಶನ ಮಾಡಿದ್ದರು. ಈ ದೃಶ್ಯಾವಳಿ ಎಲ್ಲೆಡೆ ವೈರಲ್ ಆಗಿತ್ತು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ನಗರ ಠಾಣೆ ಪೊಲೀಸರು, ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂದಿತರೆಲ್ಲರೂ ನಗರದ ಹೊರ ವಲಯದ ಚಿಕ್ಕಹೊನ್ನೇನಹಳ್ಳಿಯವರು ಎಂದು ತಿಳಿದು ಬಂದಿದೆ. ಯಾವ ಕಾಣಕ್ಕೆ ಹಲ್ಲೆ ನಡೆದಿದೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.
