ಬೆಂಗಳೂರು: ಭಾರತವು 2015ರ ಸೆಪ್ಟೆಂಬರ್ 28ರಂದು ಉಡಾವಣೆ ಮಾಡಿದ Astrosat ಉಪಗ್ರಹ ಇಂದು 10ನೇ ವರ್ಷದ ಸಂಭ್ರಮವನ್ನು ಆಚರಿಸಿದೆ. 10 ವರ್ಷಗಳ ಬಳಿಕವೂ Astrosat ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ದೇಶದ ಖಗೋಳ ಅಧ್ಯಯನಕ್ಕೆ ಅಮೂಲ್ಯ ಮಾಹಿತಿ ಒದಗಿಸುತ್ತಿದೆ.
ಇಸ್ರೋ ತಿಳಿಸಿದಂತೆ, Astrosat ಮುಖ್ಯವಾಗಿ ಕೆಂಪು ದೈತ್ಯ ನಕ್ಷತ್ರಗಳ ರಹಸ್ಯ, ಅತ್ಯಂತ ವೇಗವಾಗಿ ತಿರುಗುವ ಕಪ್ಪುಕುಳಿಗಳು ಮತ್ತು ಕ್ಷೀರಪಥದಲ್ಲಿನ ಅವಳಿ ನಕ್ಷತ್ರಗಳ ಕ್ಷ-ಕಿರಣಗಳು ಕುರಿತಂತೆ ಕುತೂಹಲಕಾರಿ ಮಾಹಿತಿಯನ್ನು ಒದಗಿಸಿದೆ.
ಇದನ್ನು ಓದಿ: ನಿದ್ದೆ ಮಾಡುವಾಗ ಬೆನ್ನು ನೋವು ತಾಳಲಾಗುತ್ತಿದೆಯೆ? ಈ ಆಹಾರಗಳ ಸೇವನೆ ಮಾಡಬೇಡಿ
ಈ ಉಪಗ್ರಹಕ್ಕಾಗಿ ಇಸ್ರೋ ಜೊತೆಗೆ ಭಾರತದ ವಿವಿಧ ವಿಜ್ಞಾನ ಸಂಸ್ಥೆಗಳು, ಹಾಗೂ ಕೆನಡಾ ಮತ್ತು ಬ್ರಿಟನ್ ವಿಶ್ವವಿದ್ಯಾಲಯಗಳು ಮತ್ತು ಬಾಹ್ಯಾಕಾಶ ಸಂಸ್ಥೆಗಳು ಸಹಭಾಗಿಯಾಗಿದ್ದಾರೆ. ಪ್ರಪಂಚದ 57 ದೇಶಗಳ ಸುಮಾರು 3,400 ಸಂಸ್ಥೆಗಳು Astrosatದ ಮಾಹಿತಿಯನ್ನು ವೈಜ್ಞಾನಿಕ ಅಧ್ಯಯನಕ್ಕೆ ಬಳಸಿಕೊಳ್ಳುತ್ತಿವೆ.
Astrosatವು ಭಾರತಕ್ಕೆ ಖಗೋಳ ವಿಜ್ಞಾನದಲ್ಲಿ ಸಶಕ್ತ ಸ್ಥಾನ ಮತ್ತು ಜಾಗತಿಕ ವೈಜ್ಞಾನಿಕ ಸಹಭಾಗಿತ್ವದ ಹೊಸ ದಾರಿಯನ್ನು ಪ್ರಾರಂಭಿಸಿದೆ.

[…] ಇದನ್ನು ಓದಿ: ಭಾರತದ ಮೊದಲ ಖಗೋಳ ವೀಕ್ಷಣಾ ಉಪಗ್ರಹ Astrosatಗೆ 10… […]
Good news and information