ಹಾಸನ: ಜಿಲ್ಲೆಯಲ್ಲಿ ಮತ್ತೊಂದು ಎಟಿಎಂ ಕಳವು ಯತ್ನ ನಡೆದಿದೆ. ಸಕಲೇಶಪುರ ತಾಲ್ಲೂಕಿನ ಶುಕ್ರವಾರಸಂತೆ ಗ್ರಾಮದಲ್ಲಿ ಎಟಿಎಂ ಒಡೆದು ಅದರಲ್ಲಿದ್ದ ಹಣ ದೋಚಲು ವಿಫಲ ಯತ್ನ ನಡೆದಿದೆ.
ಕೆನರಾಬ್ಯಾಂಕ್ಗೆ ಸೇರಿದ ಎಟಿಎಂನ ಮಾನಿಟರ್ನ ಗ್ಲಾಸ್ ಒಡೆದು ಹಣ ಕದಿಯಲು ಚೋರರು ಯತ್ನಿಸಿದ್ದಾರೆ. ಆದರೆ ಎಷ್ಟೇ ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಿಲ್ಲ. ಕಡೆಗೂ ಹಣ ಕಳ್ಳತನ ಮಾಡಲು ಸಾಧ್ಯವಾಗದೆ ವಾಪಸ್ ಆಗಿದ್ದಾರೆ. ನಂತರ ಬ್ಯಾಂಕ್ನ ಟೆಕ್ನಿಕಲ್ ಟೀಂ ಸ್ಥಳಕ್ಕೆ ದೌಡಾಯಿಸಿ ಎಟಿಎಂನಲ್ಲಿರುವ ಹಣ ಪರಿಶೀಲನೆ ಮಾಡಿತು. ಹಾಗೆಯೇ ಯಸಳೂರು ಪೊಲೀಸರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
