ಕೆ.ಆರ್.ಪೇಟೆ,ಮಾ.13: ಚೆಸ್ಕಾಂ ವಿದ್ಯುತ್ ಇಲಾಖೆಯಲ್ಲಿ ಅಧಿಕೃತ ನಂಬರ್ ಮಾಡಿಸಿಕೊಂಡು ವಿದ್ಯುತ್ ಸಂಪರ್ಕ ಪಡೆದುಕೊಂಡಿರುವ ವಿದ್ಯುತ್ ಲೈನ್ ಅನ್ನು ನಾಲ್ವರ ಗುಂಪೊಂದು ರಾತ್ರಿಯ ವೇಳೆ ಪದೇ ಪದೇ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವ ಕಾರಣ ರೈತನ ಬೆಳೆ ಒಣಗಿ ಹೋಗುವ ಸ್ಥಿತಿಗೆ ತಲುಪಿದ್ದು ಕಿಡಿಗೇಡಿತನ ಮಾಡುತ್ತಿರುವ ನಾಲ್ಕು ಮಂದಿಯ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಚಿಕ್ಕಳಲೆ ಗ್ರಾಮದ ನೊಂದ ರೈತ ತಮ್ಮಯ್ಯಶೆಟ್ಟಿ ಪೋಲೀಸ್ ಅಧಿಕಾರಿಗಳು ಹಾಗೂ ತಾಲ್ಲೂಕು ತಹಸೀಲ್ದಾರ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಚಿಕ್ಕಳಲೆ ಗ್ರಾಮದ ಜಯಣ್ಣ ಬಿನ್ ಲೇಟ್ ಪಾಪೇಗೌಡ, ಯೋಗಾಚಾರಿ ಬಿನ್ ಗಿರಿಯಾಚಾರಿ, ಮಂಜು ಬಿನ್ ಮಲ್ಲೇಶ್ ಗೌಡ, ಮಲ್ಲ ಬಿನ್ ಮಂಜಮ್ಮ ಎಂಬುವವರೇ ತಮ್ಮಯ್ಯಶೆಟ್ಟಿ ಅವರ ಕೊಳವೆಬಾವಿ ಆಶ್ರಿತ ನೀರಾವರಿ ಯೋಜನೆಗೆ ಪಡೆದುಕೊಂಡಿರುವ ವಿದ್ಯುತ್ ಸಂಪರ್ಕವನ್ನು ಪದೇ ಪದೇ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವ ಮೂಲಕ ಪುಂಡಾಟಿಕೆ ಮೆರೆಯುತ್ತಿದ್ದಾರೆ. ಇದರಿಂದಾ ಕುಂಬಳಕಾಯಿ ಬೆಳೆ ಒಣಗುತ್ತಿದ್ದು, ಲಕ್ಷಾಂತರ ಆಧಾಯ ಬರುವ ಕುಂಬಳ ಬೆಳೆ ಒಣಗಿ ಹೋಗುವ ಆತಂಕ ಎದುರಾಗಿದೆ. ಇದೂ ಅಲ್ಲದೇ ತಮ್ಮಯ್ಯಶೆಟ್ಟಿ ಅವರಿಂದ ಹಾಗಾಗ ಹಣ ನೀಡುವಂತೆ ಪೀಡಿಸುತ್ತಾ ತೀವ್ರ ಕಿರುಕುಳ ನೀಡುತ್ತಿದ್ದಾರೆ.

ಈ ಬಗ್ಗೆ ಹಲವು ಗ್ರಾಮಸ್ಥರಿಗೂ ತಿಳಿಸಿ ತಿಳುವಳಿಕೆ ಹೇಳಿಸಿದರೂ ಸಹ ಜಯಣ್ಣ, ಯೋಗಾಚಾರಿ, ಮಂಜು, ಹಾಗೂ ಮಲ್ಲ ಎಂಬುವರು ಪದೇ ಪದೇ ನಮ್ಮ ಕೊಳವೆ ಬಾವಿಯ ವಿದ್ಯುತ್ ಸಂಪರ್ಕವನ್ನು ಕಂಬಕ್ಕೆ ಹತ್ತಿ ಕಂಬದಲ್ಲೇ ಮೇನ್ಸ್ ತಂತಿಗಳನ್ನು ಕಟ್ ಮಾಡಿ ನಮ್ಮ ಕೊಳವೆಬಾವಿಯ ಮೋಟಾರ್ ಚಾಲನೆಯಾಗದಂತೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವ ಮೂಲಕ ತೀವ್ರ ತೊಂದರೆ ನೀಡುತ್ತಿದ್ದಾರೆ ಹಾಗಾಗಿ ನಾಲ್ಕೂ ಮಂದಿಯ ವಿರುದ್ದ ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಚೆಸ್ಕಾಂ ಅಧಿಕಾರಿಗಳಿಗೆ, ಕಿಕ್ಕೇರಿ ಪೋಲೀಸರಿಗೆ ಹಾಗೂ ತಾಲ್ಲೂಕು ತಹಸೀಲ್ದಾರ್ ಅವರಿಗೆ ಮಾಧ್ಯಮಗಳ ನೊಂದ ರೈತ ತಮ್ಮಯ್ಯಶೆಟ್ಟಿ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಅಭಿಪ್ರಾಯ:
ರೈತರು ಬೆಳೆ ನಷ್ಟ ಉಂಟಾಗಿ ಆತ್ಮಹತ್ಯೆ ಮಾಡಿಕೊಂಡಾಗ ಪರಿಹಾರ ನೀಡುವ ಬದಲು ಚಿಕ್ಕಳಲೆ ಗ್ರಾಮದಲ್ಲಿ ರೈತ ತಮ್ಮಯ್ಯಶೆಟ್ಟಿ ಬೆಳೆ ನೀರಿಲ್ಲದೆ ಒಣಗುತ್ತಿದ್ದು, ವಿದ್ಯುತ್ ಸಂಪರ್ಕ ಒದಗಿಸಿಕೊಡಲು ಮುಂದಾಗಬೇಕು. ಕೃಷ್ಣಾಪುರ ಗ್ರಾಮದಲ್ಲಿ ರೈತ ತಮ್ಮಯ್ಯಶೆಟ್ಟಿ ಅವರ ಕೊಳವೆಬಾವಿಗೆ ಹಾಕಿರುವ ವಿದ್ಯುತ್ ಸಂಪರ್ಕವನ್ನು ಪದೇ ಪದೇ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡು ರೈತ ತಮ್ಮಯ್ಯಶೆಟ್ಟಿ ಅವರ ಜಮೀನಿನಲ್ಲಿ ಒಣಗುತ್ತಿರುವ ಕುಂಬಳಕಾಯಿ ಬೆಳೆಯನ್ನು ಸಂರಕ್ಷಣೆ ಮಾಡಬೇಕು. ಇಲ್ಲದಿದ್ದರೆ ಚೆಸ್ಕಾಂ ಕಚೇರಿಯ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ-
– ಕೆ.ಆರ್.ಪೇಟೆ ಡಿ.ಎಸ್.ವೇಣು, ಮಂಡ್ಯ ಜಿಲ್ಲಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ
ವರದಿ- ಶ್ರೀನಿವಾಸ್ ಆರ್.
