ಆಯುರ್ವೇದದಲ್ಲಿ ಎಲ್ಲ ರೋಗಗಳಿಗೂ ಔಷಧ ಇದೆ
ಬಾಗಲಕೋಟೆ(ಬಾದಾಮಿ) : ಭಾರತೀಯ ವೈದ್ಯಕೀಯ ಪದ್ಧತಿಗೆ ದೊಡ್ಡ ಪರಂಪರೆ ಇದ್ದು, ಆಯುರ್ವೇದದಲ್ಲಿ ಎಲ್ಲ ರೋಗಗಳಿಗೂ ಔಷಧ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ಬಾದಾಮಿಯ ವೀರ ಪುಲಕೇಶಿ ಗ್ರಾಮೀಣ ಆಯುರ್ವೇದಿಕ ವೈದ್ಯಕೀಯ ಮಹಾವಿದ್ಯಾಲಯದ ದೀಕ್ಷಾಂತ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು
ವೈದ್ಯ ವೃತ್ತಿ ಅಂದರೆ ನೋಬಲ್ ಪೊಫೆಷನ್. ನೀವು ಎಂಜನೀಯರ್, ಬಿಜಿನೆಸ್ ಮ್ಯಾನ್. ಪೊಲಿಟಿಷಿಯನ್ ಆಗಬಹುದಿತ್ತು. ಆದರೆ, ನೀವು ವೈದ್ಯರಾಗಲು ಆಶೀರ್ವಾದ ಪಡೆದುಕೊಂಡಿದ್ದೀರಿ. ಇದು ಗೌರವದ ವೃತ್ತಿ ಎಂದರೆ, ಗೌರವದ ಜೀವನ, ಯಾರು ಮನುಷ್ಯರಷ್ಟೇ ಅಲ್ಲ, ಪಾಣಿಗಳ ನೋವನ್ನು ದೂರ ಮಾಡುತ್ತಾರೊ ಅವರು ವೈದ್ಯರು ಎಂದು ಹೇಳಿದರು.
ಬಸವಣ್ಣನವರು ದಯವೇ ಧರ್ಮದ ಮೂಲವಯ್ಯ ಎಂದು ಹೇಳಿದರು. ಸಕಲ ಜೀವಾತ್ಮರಿಗೆ ಲೇಸನ್ನು ಬಯಸಯ್ಯ ಎಂದು ಹೇಳಿದ್ದಾರೆ. ವೈದ್ಯರು ಖುಷಿಯಾಗಿದ್ದರೆ ಎಲ್ಲರೂ ಖುಷಿಯಾಗಿರುತ್ತಾರೆ. ವೈದ್ಯರು ತಮ್ಮ ಮನೆಯ ಜಗಳವನ್ನು ತಂದು ರೋಗಿಯ ಮೇಲೆ ಹಾಕಿದರೆ ರೋಗಿಯ ಪರಿಸ್ಥಿತಿ ಏನಾಗುತ್ತದೆ. ಹೀಗಾಗಿ ವೈದ್ಯರು ಯಾವಾಗಲೂ ನಗುನಗುತ್ತ ಇರಬೇಕು. ನಗುವು ಮನಸ್ಸಿನ ಆರೋಗ್ಯದ ಸಂಕೇತ, ಮನಸ್ಸು ಆರೋಗ್ಯವಾಗಿದ್ದರೆ ಮುಖದಲ್ಲಿ ಅದರ ಪ್ರತಿಬಿಂಬ ಕಾಣಿಸುತ್ತದೆ ಎಂದು ಹೇಳಿದರು.
ನೀವು ಜ್ಞಾನ ಹೊಂದಿರಬೇಕು. ಮನುಷ್ಯ ಮತ್ತು ಪ್ರಾಣಿಗಳ ನಡುವೆ ಇರುವ ವ್ಯತ್ಯಾಸವೇ ಜ್ಞಾನ, ಜ್ಞಾನದಿಂದ ವಿಜ್ಞಾನ, ಅದರಿಂದ ತಂತಜ್ಞಾನ, ತಂತಜ್ಞಾನದಿಂದ ತಂತ್ರಾಂಶಜ್ಞಾನ, ಇದನ್ನು ಪಡೆದರೆ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ಯಶಸ್ಸನ್ನು ನೀವು ಹೇಗೆ ಅಳತೆ ಮಾಡುತ್ತೀರಿ. ಎಲ್ಲ ರೋಗಿಗಳು ಆಸ್ಪತ್ರೆಯಿಂದ ಹೊರ ಹೋಗುವಾಗ ಅವರ ರೋಗ ಗುಣವಾದರೆ ನಗುತ್ತ ಹೋಗುತ್ತಾರೆ. ಅವರು ನಗುತ್ತ ಹೋಗುವಂತೆ ಮಾಡುವ ಕೆಲಸ ವೈದ್ಯರು ಮಾಡುತ್ತಾರೆ. ವೈದ್ಯರು ಅಂದರೆ ದೇವರು ಇದ್ದಂತೆ, ಅವರು ಎಲ್ಲ ಸಮಸ್ಯೆಗಳನ್ನು ಬಗೆ ಹರಿಸುತ್ತಾರೆ ಎಂದರು.
