ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಬಂಡಿಹೊಳೆ ಹೇಮಗಿರಿಯ ಪ್ರಾಥಮಿಕ ಕೃಷಿ ಸಹಕಾರ ಸಂಘದ (ವಿಎಸ್ಎಸ್ಎನ್) ನೂತನ ಅಧ್ಯಕ್ಷರಾಗಿ ಬಿ.ಗಣೇಶ, ಉಪಾಧ್ಯಕ್ಷರಾಗಿ ಸೋಮನಾಯಕ ಆಯ್ಕೆಯಾಗಿದ್ದಾರೆ.
12 ನಿರ್ದೇಶಕರ ಬಲ ಹೊಂದಿರುವ ಸಂಘದ ಮುಂದಿನ ಐದು ವರ್ಷದ ಆಡಳಿತ ಮಂಡಳಿಯ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಬಯಸಿ ಬಿ.ಗಣೇಶ್, ಶ್ರೀಧರ್, ಉಪಾಧ್ಯಕ್ಷ ಸ್ಥಾನ ಬಯಸಿ ಸೋಮನಾಯಕ ಶಂಕ್ರಯ್ಯ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಸೂಪರ್ವೈಸರ್ ಮತ ಒಳಗೊಂಡಂತೆ ಬಿ.ಗಣೇಶ 7 ಮತ ಪಡೆದರೆ, ಸೋಮನಾಯಕ 7 ಮತಗಳನ್ನು ಪಡೆದು ಪ್ರತಿ ಸ್ಪರ್ಧಿಗಳ ವಿರುದ್ಧ ಗೆಲುವು ಸಾಧಿಸಿದ್ದಾರೆ. ಚುನಾವಣಾಧಿಕಾರಿ ಕಾರ್ಯನಿರ್ವಹಿಸಿದ ಸಿ.ಡಿ.ಓ ಭರತ್ ಕುಮಾರ್, ಸಹ ಚುನಾವಣಾ ಅಧಿಕಾರಿಯಾಗಿ ಸಂಘದ ಕಾರ್ಯದರ್ಶಿಯ ಮಹದೇವ್ ಕಾರ್ಯನಿರ್ವಹಿಸಿದರು.
ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನ ಅಭಿನಂದಿಸಿ ಮಾತನಾಡಿದ ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್ ದೇವರಾಜು ಸಹಕಾರ ಸಂಘಗಳು ಗ್ರಾಮೀಣ ಭಾಗದ ರೈತರ ಜೀವನಾಡಿ ಇದ್ದಂತೆ ಇದರಲ್ಲಿ ಯಾರು ಸಹ ರಾಜಕೀಯ ಮಾಡಬಾರದು ಎಂದು ಹಾರಿತುಕೊಂಡು ಸಹಕಾರ ಮೌಲ್ಯವನ್ನು ಹೆಚ್ಚಿಸಿಕೊಳ್ಳಬೇಕು. ರಾಜಕೀಯ ದ್ವೇಷ ಚುನಾವಣೆಗೆ ಸೀಮಿತವಾಗಬೇಕು. ಗ್ರಾಮೀಣ ಭಾಗದ ರೈತರ ಸೇವೆ ಮಾಡಲು ಉತ್ತಮ ಜವಾಬ್ದಾರಿ ಹೆಚ್ಚಾಗಿದೆ, ಪಕ್ಷ ಬೇಧ ಮರೆತು ನಿರ್ದೇಶಕರುಗಳನ್ನು ಒಗ್ಗೂಡಿಸಿಕೊಂಡು ಸಂಘದ ಆರ್ಥಿಕತೆಯನ್ನು ಹೆಚ್ಚಿಸಿ ರೈತರಿಗೆ ಅನುಕೂಲವಾಗುವಂತ ಯೋಜನೆಗಳ ಬಗ್ಗೆ ಅರಿವು ಮೂಡಿಸಿ. ಸಹಕಾರ ಸಂಘದಲ್ಲಿ ರೈತರಿಗೆ ಹಾಗೂ ಸಂಘ ಸಂಸ್ಥೆಗಳಿಗೆ ನೆರವಾಗುವಂತಹ ಯೋಜನೆಯನ್ನು ಹೆಚ್ಚು ನೀಡಿದರೆ ಮಾತ್ರ ರೈತರು ಆರ್ಥಿಕವಾಗಿ ಸದೃಢರಾಗುವ ಜೊತೆಗೆ ಸಂಘವು ಅಭಿವೃದ್ಧಿಯಾಗಲು ಸಾಧ್ಯ, ನಿಮ್ಮ ಆಡಳಿತ ಅವಧಿಯಲ್ಲಿ ತಾಲೂಕಿಗೆ ಉತ್ತಮ ಸಂಘ ಎಂಬ ಹೆಸರು ಬರುವಂತಹ ಕೆಲಸವನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಬಳಿಕ ಮಾತನಾಡಿದ ನೂತನ ಅಧ್ಯಕ್ಷರಾಗಿ ಬಿ.ಗಣೇಶ್ ನಮ್ಮ ನಾಯಕರಾದ ಟಿಎಪಿಸಿಎಂಎಸ್ ಬಿ. ಎಲ್ ದೇವರಾಜು, ಮಾಜಿ ಶಾಸಕರಾದ ಕೆ.ಬಿ ಚಂದ್ರಶೇಖರ್, ಮನ್ ಮುಲ್ ನಿರ್ದೇಶಕ ಡಾಲು ರವಿ, ಎಂ.ಬಿ ಹರೀಶ್,ಕಾಂಗ್ರೆಸ್ ಮುಖಂಡ ಬೂಕನಕೆರೆ ವಿಜಯ್ ರಾಮೇಗೌಡ,ಜಿ. ಪಂ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಷ್, ಸಹಕಾರದಿಂದ ಅಧ್ಯಕ್ಷರಾಗಿ ಚುನಾವಣೆಯ ಮುಖಾಂತರ ಆಯ್ಕೆಯಾಗಿದ್ದೇನೆ. ನನ್ನ ಆಡಳಿತ ಅವಧಿಯಲ್ಲಿ ಪಕ್ಷಭೇದ ಮರೆತು ಸರ್ವ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೊಸೈಟಿ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳ ರೈತಾಪಿ ವರ್ಗದ ಏಳಿಗೆಗೆ ಶ್ರಮಿಸಿ,ಆಡಳಿತ ಮಂಡಳಿ ಹಾಗೂ ನೌಕರರು ಹಾಗೂ ಹಿರಿಯರ ಎಲ್ಲರ ಸಹಕಾರದಿಂದ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.
ನೂತನ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ ಘೋಷಣೆ ಹೊರಬೀಳುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ ವಿಜಯಮಾಲೆ ಹಾಕಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸೋಮ ನಾಯಕ ನಿರ್ದೇಶಕರಾದ ಜಗದೀಶ್, ಮಂಜುನಾಥ್, ಬಂಡಿಹೊಳೆ ಹರೀಶ್, ಮಂಜಮ್ಮ, ಶ್ರೀಧರ್, ದರ್ಶನ್,ಮುಖಂಡರಾದ ವಿಶ್ವನಾಥ್,ಮುರುಕನಹಳ್ಳಿ ಸೊಸೈಟಿ ನಿರ್ದೇಶಕ ವಡೆ ಶಿವಕುಮಾರ್, ಯುವ ಮುಖಂಡ ಪ್ರಮೋದ್,ಪ್ರವೀಣ್, ಸುರೇಶ್, ಮಂಜುನಾಥ್, ಬಂಡಿಹೊಳೆ ರಮೇಶ್, ಪ್ರಸಾದ್,ಸಣ್ಣ ಮಂಜೇಗೌಡ,ಕೆ.ಟಿ ಮಹೇಶ್,ಪಿ ಎಲ್ ಡಿ ಬ್ಯಾಂಕ್ ಸದಸ್ಯ ನಾಗೇಶ್,ಕೆ.ಬಿ ವಿಶ್ವನಾಥ್, ರಮೇಶ್,ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
