ಬೆಂಗಳೂರು: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿರುವ ರಾಜ್ಯ ಮಟ್ಟದ ವೈಜ್ಞಾನಿಕ, ವೈಚಾರಿಕ ಕನ್ನಡ ಸಾಹಿತ್ಯ ಸಮಾವೇಶ ಆಗಸ್ಟ್ 3ರಂದು ಶೇಷಾದ್ರಿಪುರಂ ಕಾಲೇಜಿನಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಆರ್.ಎಸ್. ರವೀಂದ್ರ ವಹಿಸಲಿದ್ದು, ಡಾ. ಗೀತ ರಾಮಾನುಜಂ ಉದ್ಘಾಟನೆ ಮಾಡಲಿದ್ದಾರೆ.

ಸಾಹಿತಿ ಶಶಿಕಾಂತ್ ರಾವ್ ಅವರ ಪುನೀತ್ ರಾಜಕುಮಾರ್ ಸಾಹಿತ್ಯ ದತ್ತಿ ಪ್ರಶಸ್ತಿಗೆ ಡಾ. ರವೀಂದ್ರ ಹಾಗೂ ಕವಯಿತ್ರಿ ಆಶಾ ಶಿವುಗೌಡ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯನ್ನು ಡಾ. ಬೈರಮಂಗಲ ರಾಮೇಗೌಡ ಅವರು ಪ್ರದಾನ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಹಲವಾರು ಸಾಧಕರಿಗೆ ಶ್ರೀಗಂಧ ಪ್ರಶಸ್ತಿಗಳು, ವಿದ್ಯಾರ್ಥಿಗಳಿಗೆ ಪುರಸ್ಕಾರಗಳು ಲಭಿಸಲಿವೆ.
ಡಾ.ಹುಲಿಕಲ್ ನಟರಾಜ್ ಸಮಾರೋಪ ಭಾಷಣ ಮಾಡಲಿದ್ದು, ಇಂದಿರಾ ಕೃಷ್ಣಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಟ್ರಸ್ಟ್ ಕಾರ್ಯದರ್ಶಿ ಸಿ. ಹೇಮಾವತಿ ತಿಳಿಸಿದ್ದಾರೆ.
