ಬೆಂಗಳೂರು : ಗ್ರಾಮಾಂತರ ಜಿಲ್ಲೆಯ ಇತಿಹಾಸ ಪ್ರಸಿದ್ಧ ದೇವರಹೊಸಹಳ್ಳಿ ಗ್ರಾಮದಲ್ಲಿ, ಶ್ರೀಭದ್ರಕಾಳಿಸಮೇತ ವೀರಭದ್ರಸ್ವಾಮಿ ರಥೋತ್ಸವ ಶೋಭಾಯಾತ್ರೆ ಅತ್ಯಂತ ವಿಜೃಂಭಣೆಯೊಂದಿಗೆ ನಡೆಯಿತು. ಸಹಸ್ರಾರು ಭಕ್ತಾದಿಗಳ ಸಮ್ಮಖದಲ್ಲಿ ನಡೆದ ಈ ಮಹೋತ್ಸವದಲ್ಲಿ, ನೆರೆದಿದ್ದ ಜನರಿಗೆ ಪಾನಕ, ಮಜ್ಜಿಗೆ, ಹೆಸರುಬೇಳೆ ಹಾಗೂ ಪ್ರಸಾದಗಳ ವಿನಿಯೋಗ ನಡೆದವು.
ಹೆಚ್ಚಿನ ಸಂಖ್ಯೆಯ ಭಕ್ತರು ರಥೋತ್ಸವವನ್ನು ಕಂಡು ಪ್ರೀತಿ ಮತ್ತು ಭಕ್ತಿ ತೋರುತ್ತಿದ್ದು, ನೂರಾರು ಜನ ಕೊಪ್ಪಲುಗಳನ್ನು ಧಾರಣೆ ಮಾಡುವ ಮೂಲಕ ಅನ್ನದಾಸೋಹವನ್ನು ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಹೊರದೇಶಗಳಿಂದ ಬಂದ ಭಕ್ತರು ಉಲ್ಲಾಸಭರಿತ ವಾತಾವರಣವನ್ನು ಸೃಷ್ಟಿಸಿದ್ದರು.
– ಕೆ.ಬಿ.ಚಂದ್ರಚೂಡ
