ಭಾರತದ ಅತಿವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾದ ಬೆಂಗಳೂರು ಕಳೆದ ದಶಕದಲ್ಲಿ ಶೇಖಡಾ 8.5%ರಷ್ಟು ಸರಾಸರಿ ಆರ್ಥಿಕ ಬೆಳವಣಿಗೆ ದರಕ್ಕೆ ಸಾಕ್ಷಿಯಾಗಿದೆ. ಪ್ರಮುಖ ಆರ್ಥಿಕ ಕೇಂದ್ರವಾಗಿ, ಇದು ತಂತ್ರಜ್ಞಾನ, ಬ್ಯಾಂಕಿಂಗ್, ಸಮಾಲೋಚನೆ, ರಕ್ಷಣೆ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿ ರೀತಿಯ ವೈವಿಧ್ಯಮಯ ವಲಯಗಳಿಗೆ ಸಾಕ್ಷಿಯಾಗಿದೆ. ಆದಾಗಿಯೂ, ಈ ತ್ವರಿತ ಅಭಿವೃದ್ಧಿಯು ದೊಡ್ಡ-ಪ್ರಮಾಣದ ನಗರೀಕರಣ ಮತ್ತು ಗಮನಾರ್ಹ ಜನಸಂಖ್ಯಾ ಏರಿಕೆಗೆ ಕಾರಣವಾಗಿದ್ದು, ಇದು ನಗರದ ನೈಸರ್ಗಿಕ ಪರಿಸರ ವ್ಯವಸ್ಥೆಯನ್ನು ತೀವ್ರವಾಗಿ ಒತ್ತಡಕ್ಕೆ ಸಿಲುಕಿಸಿದೆ- ಅದರಲ್ಲೂ ವಿಶೇಷವಾಗಿ ಇದರ ಮೂಲಚರಂಡಿ ಮೂಲಸೌಕರ್ಯ ಹದೆಗೆಡುತ್ತಿದೆ-ಇದರಿಂದ ಆಗಿಂದಾಗ್ಗೆ ನಗರದಲ್ಲಿ ಪ್ರವಾಹಗಳಿಗೆ ಕಾರಣವಾಗಿದೆ.
ಬೆಂಗಳೂರಿನ ರಾಜಕಾಲುವೆಗಳೆಂದು ಕರೆಯಲ್ಪಡುವ ಒಳಚರಂಡಿ ವ್ಯವಸ್ಥೆಗಳನ್ನು ಪ್ರಾಥಮಿಕವಾಗಿ ನಗರದ ಕೆರೆಗಳಿಗೆ ಸಂಪರ್ಕಿಸುವ ಮೂಲಕ ಒಳಚರಂಡಿ ನೀರನ್ನು ನಿರ್ವಹಣೆ ಮಾಡಲು ನಿರ್ಮಿಸಲಾಯಿತು. ಸಮಯ ಕಳೆದಂತೆ, ಅನಿರೀಕ್ಷಿತ ಅಭಿವೃದ್ಧಿಯು ಈ ಅನೇಕ ಒಳಚರಂಡಿಗಳನ್ನು ಹಾನಿ ಮಾಡಿತು. ಕೇಂದ್ರ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಎಂಜಿನಿಯರಿಂಗ್ ಸಂಸ್ಥೆ (CPHEEO) ಒಳಚರಂಡಿ ಮತ್ತು ಒಳಚರಂಡಿ ಸಂಸ್ಕರಣೆಯ ಕೈಪಿಡಿಯ ಪ್ರಕಾರ, ಭಾರತೀಯ ನಗರಗಳಲ್ಲಿನ ನಗರದ ಮಳೆನೀರಿನ ಒಳಚರಂಡಿಗಳನ್ನು ಗಂಟೆಗೆ ಕೇವಲ 12–20 ಮಿಮೀ ಮಳೆಯ ತೀವ್ರತೆಗಾಗಿ ಮಾತ್ರ ವಿನ್ಯಾಸಗೊಳಿಸಲಾಗಿದೆ. ಆದಾಗಿಯೂ, ಬೆಂಗಳೂರಿನಲ್ಲಿ ಇತ್ತೀಚಿಗೆ ಮಳೆಯ ಆವರ್ತನವು ಸಹ ಗಮನಾರ್ಹವಾಗಿ ಹೆಚ್ಚಾಗಿದೆ. ಉದಾಹರಣೆಗೆ, ಮೇ 18, 2025ರಂದು ಬೆಂಗಳೂರು ನಗರವು 100-135 ಮಿಮೀ ಮಳೆಯನ್ನು ಒಂದೇ ದಿನದಲ್ಲಿ ಕಂಡಿತು, ಇದು ವ್ಯವಸ್ಥೆಯ ವಿನ್ಯಾಸದ ಸಾಮರ್ಥ್ಯವನ್ನು ಮೀರಿದೆ.

ಬೆಂಗಳೂರು ನಗರ ವಿಸ್ತರಿಸುವುದನ್ನು ಮುಂದುವರೆಯುತ್ತಿದ್ದಂತೆ, ಸುಸ್ಥಿರ ನಗರ ಬೆಳವಣಿಗೆಯು ನಿರ್ಣಾಯಕ ಮೂಲಸೌಕರ್ಯಗಳಿಗೆ- ಅದರಲ್ಲೂ ವಿಶೇಷವಾಗಿ ಮಳೆನೀರಿನ ಒಳಚರಂಡಿಯ ಸದೃಢ ನವೀಕರಣಗಳನ್ನು ಬೇಡುತ್ತದೆ. ಇದು ಸಾಮಾಜಿಕ ಮತ್ತು ಆರ್ಥಿಕ ವೆಚ್ಚಗಳು ಹೆಚ್ಚಾಗುವುದನ್ನು ಸಹ ತಡೆಗಟ್ಟುತ್ತದೆ.
ನಗರದ ಒಳಚರಂಡಿ ವ್ಯವಸ್ಥೆಯನ್ನು ಸುಧಾರಿಸುವಲ್ಲಿರುವ ಒಂದು ಬಹುದೊಡ್ಡ ಸಮಸ್ಯೆಯೆಂದರೆ ನಿಖರ ಮತ್ತು ಸಮಗ್ರ ನಕ್ಷೆಯ ಕೊರತೆಯಾಗಿದೆ. ಇದು ಮೂಲಸೌಕರ್ಯಗಳನ್ನು ನವೀಕರಿಸುವುದಕ್ಕಾಗಿ ಪಾಲಿಕೆ ಅಧಿಕಾರಿಗಳಿಗೆ ಮೌಲ್ಯಮಾಪನ ಮಾಡಲು ಮತ್ತು ಯೋಜನೆ ರೂಪಿಸುವ ಸಾಮರ್ಥ್ಯವನ್ನು ಸೀಮಿತಗೊಳಿಸುತ್ತದೆ. ಇದರ ಪರಿಣಾಮವಾಗಿ, ರಿಯಲ್ ಎಸ್ಟೇಟ್ ಯೋಜನೆಗಳನ್ನು ಸಾಮಾನ್ಯವಾಗಿ ಒಳಚರಂಡಿ ಬಫರ್ ವಲಯಗಳೊಳಗೆ ಅನುಮೋದನೆಯಾಗುತ್ತವೆ ಮುಂದೆ ಇದು ನೀರಿನ ಹರಿವನ್ನು ನಿರ್ಬಂಧಿಸುತ್ತದೆ ಮತ್ತು ಪ್ರವಾಹ ಪರಿಸ್ಥಿತಿ ಎದುರಾಗುತ್ತದೆ.
ಈ ಸಮಸ್ಯೆಯನ್ನು ಪರಿಹರಿಸಲು, ಒಳಚರಂಡಿ ಮೂಲಸೌಕರ್ಯಕ್ಕಾಗಿ ನವೀನ ವಿಧಾನಗಳು ಬಹಳ ಅಗತ್ಯ. ಅತ್ಯುತ್ತಮವಾಗಿ-ವಿನ್ಯಾಸಗೊಳಿಸಿದ ವ್ಯವಸ್ಥೆಗಳು ಕೇವಲ ಪರಿಸರ ಪ್ರಯೋಜನಗಳನ್ನು ಮಾತ್ರವಲ್ಲ ಅದರೊಂದಿಗೆ ಆರ್ಥಿಕ ಮತ್ತು ಸಾಮಾಜಿಕ ಲಾಭಗಳನ್ನು ಸಹ ನೀಡುತ್ತದೆ ಎಂದು ಜಾಗತಿಕ ಉದಾಹರಣೆಗಳು ತೋರಿಸಿವೆ.
ಜಪಾನಿನ “ಭೂಗತ ದೇವಾಲಯ” ಅಧಿಕೃತವಾಗಿ ಮೆಟ್ರೋಪಾಲಿಟನ್ ಏರಿಯಾ ಔಟರ್ ಅಂಡರ್ ಗ್ರೌಂಡ್ ಡಿಸ್ಚಾರ್ಜ್ ಚಾನೆಲ್ ಆಗಿದ್ದು, ಇದು 2006 ರಲ್ಲಿ ಪೂರ್ಣಗೊಂಡಿತು ಮತ್ತು ಇದು ಕಸುಕಾಬೆ ನಗರದಿಂದ 50 ಮೀಟರ್ ಕೆಳಗೆ ಇದೆ. ಈ ಪ್ರವಾಹ ನಿರೋಧಕ ಜಾಲವು 6.4 ಕಿಮೀ ಸುರಂಗಗಳಿಂದ ಸಂಪರ್ಕ ಹೊಂದಿದ ಐದು ಬೃಹತ್ ಸಿಲೋಗಳನ್ನು ಒಳಗೊಂಡಿದೆ, ಇದು ಭಾರೀ ಮಳೆ ಮತ್ತು ಚಂಡಮಾರುತದ ಸಮಯದಲ್ಲಿ ಚಂಡಮಾರುತದ ನೀರನ್ನು ಸೆರೆಹಿಡಿದು ಹತ್ತಿರದ ನದಿಗೆ ಬಿಡುತ್ತದೆ. ಇದು ಪ್ರಸಿದ್ಧ ಪ್ರವಾಸಿ ತಾಣವೂ ಆಗಿದ್ದು, ಇದು ಇತರ ನಿರ್ವಹಣಾ ವೆಚ್ಚಗಳನ್ನು ತೂಗಿಸಲು ನಿರ್ದೇಶಿತ ಪ್ರವಾಸಗಳ ಮೂಲಕ ಆದಾಯವನ್ನು ಗಳಿಸುತ್ತದೆ.
ಇದೇ ರೀತಿಯಾಗಿ, 2003 ರಲ್ಲಿ ಪ್ರಾರಂಭಿಸಲಾದ ಸಿಯೋಲ್ನ ಚಿಯೊಂಗ್ಗೀಚಿಯಾನ್ ಹೊಳೆ ಪುನಃಸ್ಥಾಪನೆ ಯೋಜನೆಯು ಸಮಗ್ರ ನಗರ ನವೀಕರಣಕ್ಕೆ ಮಾನದಂಡವಾಗಿದೆ. ಈ ಉಪಕ್ರಮವು ಐತಿಹಾಸಿಕ ಹೊಳೆಯನ್ನು ಪುನಃಸ್ಥಾಪಿಸಲು ಎತ್ತರದ ಹೆದ್ದಾರಿಯನ್ನು ತೆಗೆದುಹಾಕುವುದನ್ನು ಒಳಗೊಂಡಿತ್ತು, ಇದು 2008 ರ ವೇಳೆಗೆ ಜೀವವೈವಿಧ್ಯದಲ್ಲಿ 639% ಹೆಚ್ಚಳಕ್ಕೆ ಕಾರಣವಾಯಿತು ಮತ್ತು ನಗರ ಉಷ್ಣ ದ್ವೀಪದ ಪರಿಣಾಮವನ್ನು 3.3°C ನಿಂದ 5.9°C ಗೆ ಇಳಿಸಿತು. ನವೀಕರಿಸಿದ ಪ್ರವಾಹ ರಕ್ಷಣಾ ವ್ಯವಸ್ಥೆಯು ಈಗ ಗಂಟೆಗೆ 118 ಮಿಮೀ ಮಳೆಯನ್ನು ನಿರ್ವಹಿಸಬಹುದು, ಇದು 200 ವರ್ಷಗಳ ಪ್ರವಾಹ ಸಮಸ್ಯೆಗಳಿಗೆ ಸಮಾನವಾಗಿದೆ. ಈ ಪುನರುಜ್ಜೀವನವು ಆಸ್ತಿ ಮೌಲ್ಯದಲ್ಲಿ ಏರಿಕೆ, ಪ್ರವಾಸೋದ್ಯಮ, ಸಾರ್ವಜನಿಕ ಸಾರಿಗೆ ಬಳಕೆ ಇತ್ಯಾದಿಗಳಲ್ಲಿ ಗಣನೀಯ ಏರಿಕೆ ಕಂಡುಬಂದು, ಸ್ಥಳೀಯ ಆರ್ಥಿಕತೆಯನ್ನು ಗಮನಾರ್ಹವಾಗಿ ಹೆಚ್ಚಿಸಿತು (ಮೂಲ: ಲ್ಯಾಂಡ್ಸ್ಕೇಪ್ ಆರ್ಕಿಟೆಕ್ಚರ್ ಫೌಂಡೇಶನ್).

ಮತ್ತೊಂದು ಮುಂದಾಲೋಚನೆ ವಿಧಾನವೆಂದರೆ “ಸ್ಪಾಂಜ್ ಸಿಟಿ” ಮಾಡೆಲ್, ಇದನ್ನು ಶಾಂಘೈ ಮತ್ತು ವುಹಾನ್ ರೀತಿಯ ಚೀನಾದ ನಗರಗಳಲ್ಲಿ ಗಮನಿಸಬಹುದಾಗಿದೆ. ಇದು ಮಳೆನೀರನ್ನು ಹೀರಿಕೊಳ್ಳಲು ಮತ್ತು ಅಂತರ್ಜಲವನ್ನು ಹೆಚ್ಚಿಸಲು ಮಳೆ ಉದ್ಯಾನಗಳು, ಪ್ರವೇಶಸಾಧ್ಯವಾದ ಪಾದಚಾರಿ ಮಾರ್ಗಗಳು, ಆರ್ದ್ರ ಭೂಮಿಗಳು ರೀತಿಯ ಹಸಿರು ಪರಿಹಾರಗಳೊಂದಿಗೆ ಸಾಂಪ್ರದಾಯಿಕ ಒಳಚರಂಡಿ ವ್ಯವಸ್ಥೆಯನ್ನು ಸಂಯೋಜಿಸುತ್ತದೆ. ರಾಷ್ಟೀಯ ನೀತಿಗಳು ಮತ್ತು ನಿಧಿಯ ಬೆಂಬಲದಿಂದ ಈ ಮಾದರಿಯು ಪ್ರವಾಹ, ನೀರಿನ ಅಭಾವ ಮತ್ತು ಪರಿಸರ ಅವನತಿ ರೀತಿಯ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ.
ಬೆಂಗಳೂರು ಸಹ ಇಂತಹದೇ ಕಾರ್ಯತಂತ್ರಗಳನ್ನು ಈಗ ಅಳವಡಿಸಿಕೊಳ್ಳಬೇಕಾಗಿದೆ. ಬೆಂಗಳೂರಿನಲ್ಲಿ ಅರ್ಬನ್ ಫ್ಲಡಿಂಗ್ ಮೇಲಿನ 2023ರ ನೈಟ್ ಫ್ರಾಂಕ್ ವರದಿಯ ಪ್ರಕಾರ, ನಗರದಲ್ಲಿ ಪ್ರಸ್ತುತ 842 ಕಿಮೀ ಪ್ರಾಥಮಿಕ ಮತ್ತು ದ್ವಿತೀಯ ಒಳಚರಂಡಿಗಳಿವೆ ಆದರೆ ಇನ್ನೂ 658 ಕಿಮೀ ಹೆಚ್ಚುವರಿ ಒಳಚರಂಡಿಗಳ ಅಗತ್ಯವಿದೆ. ಹೂಳು ತೆಗೆಯುವುದು, ಹೂಳೆತ್ತುವುದು ಮತ್ತು ಕಸವನ್ನು ಹೊರ ತೆಗೆಯುವುದರ ಮೂಲಕ ಪ್ರಸ್ತುತ ಜಾಲದ ಪುನರುಜ್ಜೀವನ ಸಹ ಬಹಳ ಅಗತ್ಯವಿದೆ. ಈ ವಿಸ್ತರಣೆ ಮತ್ತು ದುರಸ್ತಿ ಕಾರ್ಯಗಳಿಗೆ ಒಟ್ಟು 2,800 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ವಿಶ್ವ ಬ್ಯಾಂಕ್ ಮತ್ತು ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ADB) ರೀತಿಯ ಬಹುಪಕ್ಷೀಯ ಸಂಸ್ಥೆಗಳಿಂದ ನಿಧಿಯನ್ನು ಪಡೆಯಬಹುದಾಗಿದೆ. ದೀರ್ಘಾವಧಿಯ ನಿರ್ವಹಣೆಗಾಗಿ, ಮೌಲ್ಯ ಸೆರೆಹಿಡಿಯುವ ಹಣಕಾಸು (VCF) ಯುಎಲ್ಬಿಗಳು ಹೆಚ್ಚಿದ ಭೂ ಮೌಲ್ಯಗಳು ಮತ್ತು ಸಂರಕ್ಷಿತ ವಲಯಗಳಲ್ಲಿ ರಿಯಲ್ ಎಸ್ಟೇಟ್ ಅಭಿವೃದ್ಧಿಯ ಮೂಲಕ ವೆಚ್ಚವನ್ನು ಮರುಪಡೆಯಲು ಸಹಾಯ ಮಾಡುತ್ತದೆ.
ಪ್ರವಾಹದ ಬಿಕ್ಕಟ್ಟನ್ನು ಪರಿಹರಿಸುವ ಬೆಂಗಳೂರಿನ ಸಾಮರ್ಥ್ಯವು ತನ್ನ ಒಳಚರಂಡಿ ವ್ಯವಸ್ಥೆಗಳನ್ನು ಎಷ್ಟು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ನವೀಕರಿಸುತ್ತದೆ ಎನ್ನುವುದರ ಮೇಲೆ ಆಧರಿಸಿದೆ. ಇದು ಜಾಗತಿಕ ಅತ್ಯುತ್ತಮ ಅಭ್ಯಾಸಗಳಿಂದ ಕಲಿಯುವುದರಿಂದ ಹಿಡಿದು ಹೆಚ್ಚು ಸುಸ್ಥಿರ ನಗರ ಭವಿಷ್ಯವನ್ನು ನಿರ್ಮಿಸುವುದನ್ನು ಸಹ ಒಳಗೊಂಡಿದೆ.
ಲೇಖಕಿ : ಶಿಲ್ಪಾಶ್ರೀ ವೆಂಕಟೇಶ್
ಸಹಾಯಕ ಉಪಾಧ್ಯಕ್ಷೆ – ಸಂಶೋಧನೆ
ನೈಟ್ ಫ್ರಾಂಕ್ ಇಂಡಿಯಾ
