ಹಾಸನ, ಜೂನ್ 24: ಬೇಲೂರು ತಾಲ್ಲೂಕಿನ ಹಳೇಬೀಡು ಬಳಿ ಇರುವ ದ್ವಾರಸಮುದ್ರ ಕೆರೆಯಲ್ಲಿ ಈಜಲು ಹೋಗಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.
ಮೃತರನ್ನು ಸುರೇಶ್ (35) ಎಂದು ಗುರುತಿಸಲಾಗಿದ್ದು, ಅವರು ಪಿರಿಯಾಪಟ್ಟಣ ಮೂಲದವರಾಗಿದ್ದಾರೆ. ಹಳೇಬೀಡಿನಲ್ಲಿ ಒಂದು ಸಲೂನ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ರಾಮನಾಥಪುರ-ಸಾಲಬಾಧೆ ತಾಳಲಾರದೆ ರೈತರ ಆತ್ಮಹತ್ಯೆ: ಸಂಸದ ಶ್ರೇಯಸ್ ಪಟೇಲ್ ಸಂತಾಪ ಸೂಚನೆ
ಸುರೇಶ್ ಅವರು ಸ್ನಾನಕ್ಕಾಗಿ ಕೆರೆಗೆ ಇಳಿದ ವೇಳೆ ಅಚಾನಕ್ ಬಳಲಿಕೆಯಿಂದ ಈಜಲಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಘಟನೆ ನಡೆದ ಬಳಿಕ ಸ್ಥಳೀಯ ಈಜುಗಾರರು ಮತ್ತು ಪೊಲೀಸರು ಶವವನ್ನು ಕೆರೆಯಿಂದ ಹೊರತೆಗೆದಿದ್ದಾರೆ.
ಘಟನೆಯ ಮಾಹಿತಿ ಪಡೆದ ಹಳೇಬೀಡು ಪೊಲೀಸ್ ಠಾಣಾ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಸಂಬಂಧ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

[…] […]