
ಬೇಲೂರು ಪಟ್ಟಣದಲ್ಲಿ ಇಂದು ಪಾಳುಬಿದ್ದ ಕಟ್ಟಡವೊಂದು ದಿಢೀರ್ ಕುಸಿದು ದೊಡ್ಡ ಅನಾಹುತ ಸಂಭವಿಸಿದೆ. ಈ ಘಟನೆಯಲ್ಲಿ ಇಬ್ಬರು ಬೀದಿ ಬದಿ ವ್ಯಾಪಾರಿಗಳು ಮೃತಪಟ್ಟಿದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹಾಸನದ ಆಸ್ಪತ್ರೆಗೆ ರವಾನಿಸಲಾಗಿದೆ ಜಿಲ್ಲಾ
ಅಮರ್ ನಾಥ್ ಹಾಗೂ ನಜೀರ್ ಮೃತರು. ಪ್ರಾಥಮಿಕ ಮಾಹಿತಿಯಂತೆ, ಪಾಳುಬಿದ್ದ ಈ ಕಟ್ಟಡದ ಕೆಳಗೆ ಬೀದಿ ಬದಿ ವ್ಯಾಪಾರಿಗಳು ತಮ್ಮ ವ್ಯಾಪಾರ ಮಾಡುತ್ತಿದ್ದರು. ದಿಢೀರ್ ಎಂದು ಈ ಕಟ್ಟಡ ಕುಸಿದು ಬಿದ್ದಿದೆ. ನಾಲ್ವರು ಮಹಿಳೆಯರು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದರು. ಅದರಲ್ಲೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಲವರಿಗೆ ಗಂಭೀರ ಗಾಯಗಳಾಗಿವೆ. ಸ್ಥಳೀಯರು ತಕ್ಷಣವೇ ಪೊಲೀಸರಿಗೂ ಅಗ್ನಿಶಾಮಕ ದಳಕ್ಕೂ ಮಾಹಿತಿ ನೀಡಿದ್ದು. ರಕ್ಷಣಾ ಕಾರ್ಯಾಚರಣೆ ಮುಂದುವರಿಯುತ್ತಿದೆ.
ರಕ್ಷಣೆಗಾಗಿ ಬೇಲೂರು ಪೊಲೀಸರ ತ್ವರಿತ ಕ್ರಮ ಘಟನೆ ಕುರಿತು ಮಾಹಿತಿ ಪಡೆದ ಬೆನ್ನಲ್ಲೇ ಬೇಲೂರು ಪೊಲೀಸ್ ಅಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಒಳಗೆ ಸಿಲುಕಿರುವವರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ