ಬೇಲೂರು: ಅಚಾನಕ್ಕಾಗಿ ಗ್ರಾಮದೊಳಗೆ ನುಗ್ಗಿ ನಾಯಿಗಳ ದಾಳಿಗೊಳಗಾದ ಜಿಂಕೆಯನ್ನು ಬೇಲೂರು ತಾಲೂಕು ಅರೇಹಳ್ಳಿ ಹೋಬಳಿ
ಹಿರಿಗರ್ಜೆಯ ಯುವಕರು ರಕ್ಷಣೆ ಮಾಡಿದ್ದಾರೆ.
ಹಿರಿಗರ್ಜೆ ಬಳಿಯ ಸಫಿ ರೆಹಮಾನ್ ಎಂಬುವವರ ಕಾಫಿ ತೋಟದಿಂದ ಜಿಂಕೆಯು ಹಿರಿಗರ್ಜೆ ಗ್ರಾಮದೊಳಗೆ ಬಂದಿತ್ತು. ಜಿಂಕೆಯನ್ನು ಕಂಡ ನಾಯಿಗಳು ಬೊಗಳುತ್ತಾ ಜಿಂಕೆ ಮೇಲೆ ದಾಳಿ ನಡೆಸಿದ್ದವು. ಇದನ್ನು ಗಮನಿಸಿದ ಯುವಕರು ನಾಯಿಗಳನ್ನು ಓಡಿಸಿ ಜಿಂಕೆ ಮರಿಯನ್ನು ರಕ್ಷಿಸಿ ತಮ್ಮ ಬೈಕ್ನಲ್ಲೆ ಅರೇಹಳ್ಳಿ ಪಟ್ಟಣಕ್ಕೆ ತಂದಿದ್ದಾರೆ. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಗಾಯಗೊಂಡ ಜಿಂಕೆಯನ್ನು ಇಲಾಖೆ ಸುಪರ್ದಿಗೆ ಒಪ್ಪಿಸಿದ್ದಾರೆ.
ಈ ವೇಳೆ ಶಿವ ಕುಮಾರ್, ರಾಜ,ರವಿ ಕುಮಾರ್, ಮಿಥುನ್ ಇದ್ದರು.
– ದಿನೇಶ್ ಬೆಳ್ಳವಾರ
