Bangalore (ಭಾರತ), ಫೆಬ್ರವರಿ 20, 2026 – ಕ್ಲೌಡ್ ಸೆಕ್ಯೂರಿಟಿಯಲ್ಲಿ ಮುಂಚೂಣಿಯಲ್ಲಿರುವ ಝಡ್ಸ್ಕೇಲರ್, ಇಂಕ್. ಸಂಸ್ಥೆ ಮತ್ತು ಭಾರತದ ಅತಿದೊಡ್ಡ ದೂರಸಂಪರ್ಕ ಸೇವಾ ಪೂರೈಕೆದಾರರಲ್ಲಿ ಒಂದಾದ ಭಾರ್ತಿ ಏರ್ಟೆಲ್ (“ಏರ್ಟೆಲ್”) ಸಂಸ್ಥೆಯ ಸಹಭಾಗಿತ್ವದಲ್ಲಿ ಇಂದು ಭಾರತದಲ್ಲಿ ಎಐ & ಸೈಬರ್ ಥ್ರೆಟ್ ರಿಸರ್ಚ್ ಸೆಂಟರ್ ಅನ್ನು ಪ್ರಾರಂಭಿಸಲಾಗಿದೆ.
ಈ ಬಹು-ಪಾಲುದಾರರು ಭಾಗಿಯಾಗಿರುವ ಡಿಜಿಟಲ್ ಯೋಜನೆಯು ರಾಷ್ಟ್ರೀಯ ಸೈಬರ್ ದೃಢತೆಯನ್ನು ಬಲಪಡಿಸಲು, ಭಾರತದ ಆರ್ಥಿಕ ಮತ್ತು ರಾಷ್ಟ್ರೀಯ ಭದ್ರತೆಗೆ ಅಗತ್ಯವಿರುವ ದೂರಸಂಪರ್ಕ, ಬ್ಯಾಂಕಿಂಗ್ ಮತ್ತು ಇಂಧನದಂತಹ ಕ್ಷೇತ್ರಗಳಿಗೆ ರಕ್ಷಣೆ ಒದಗಿಸಲು ಮತ್ತು ಭಾರತದ ವೇಗವಾಗಿ ವಿಸ್ತರಿಸುತ್ತಿರುವ ಡಿಜಿಟಲ್ ಪರಿಸರ ವ್ಯವಸ್ಥೆಯಲ್ಲಿ ವಿಶ್ವಾಸಾರ್ಹ ಎಐ ಅಳವಡಿಕೆಯನ್ನು ಹೆಚ್ಚಿಸಲು ರೂಪಿಸಲಾಗಿದೆ.
ಝಡ್ಸ್ಕೇಲರ್ ನ ತಾಂತ್ರಿಕ ಆವಿಷ್ಕಾರ ಮತ್ತು ಸೈಬರ್ ಸಂಶೋಧನೆಗೆ ಭಾರತವು ದೀರ್ಘಕಾಲದ ಪ್ರಮುಖ ಕೇಂದ್ರವಾಗಿದ್ದು, ಝಡ್ಸ್ಕೇಲರ್ ನ ಸಂಶೋಧನಾ ಪ್ರತಿಭೆಯ ಗಮನಾರ್ಹ ಪಾಲು ಭಾರತದಲ್ಲಿದೆ. ಈ ಸಂಶೋಧನಾ ಕೇಂದ್ರವು ಝಡ್ಸ್ಕೇಲರ್ ನ ಕಾರ್ಯಾಚರಣೆಗಳ ವಿಸ್ತರಣೆಯಾಗಿದ್ದು, ಖಾಸಗಿ ವಲಯ, ಸಾರ್ವಜನಿಕ ವಲಯ, ಶಿಕ್ಷಣ ಕ್ಷೇತ್ರ ಮತ್ತು ಸರ್ಕಾರದ ನಡುವಿನ ಸಹಯೋಗಕ್ಕಾಗಿ ರಾಷ್ಟ್ರೀಯ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ. ಈ ಕೇಂದ್ರವನ್ನು “ಭಾರತದಲ್ಲಿ, ಭಾರತಕ್ಕಾಗಿ” ಎಂಬ ಪರಿಕಲ್ಪನೆಯಡಿ ವಿನ್ಯಾಸಗೊಳಿಸಲಾಗಿದ್ದು, ಈ ಯೋಜನೆಯು ರಾಷ್ಟ್ರದ ಸೈಬರ್ ರಕ್ಷಣೆಯನ್ನು ಬಲಪಡಿಸುವುದು ಮತ್ತು ವಿಕಸಿತ ಭಾರತ ಹಾಗೂ ಶಾಂತಿಯುತ, ಸುರಕ್ಷಿತ ಮತ್ತು ಡಿಜಿಟಲ್ ಸ್ವಾವಲಂಬಿ ಭವಿಷ್ಯದತ್ತ ಭಾರತವನ್ನು ಮುನ್ನಡೆಸಲು ಭವಿಷ್ಯ ಸಿದ್ಧ ಪ್ರತಿಭೆಗಳನ್ನು ಸಿದ್ಧಪಡಿಸುವ ಗುರಿಯನ್ನು ಹೊಂದಿದೆ.
ಭಾರತವು ಅತ್ಯಂತ ಮಹತ್ವದ ಡಿಜಿಟಲ್ ಬದಲಾವಣೆಯ ಕೇಂದ್ರಭಾಗದಲ್ಲಿದೆ, ಕೇವಲ ಉದ್ಯಮದ ಮಟ್ಟದಲ್ಲಲ್ಲದೆ, ನಿರ್ಣಾಯಕ ಕ್ಷೇತ್ರಗಳಲ್ಲಿ ವಿನೂತನ ವ್ಯವಸ್ಥೆಗಳನ್ನು ನಿರ್ಮಿಸಲಾಗುತ್ತಿದೆ. ಅದರಲ್ಲೂ ರಾಷ್ಟ್ರೀಯ ಸೈಬರ್ ದಾಳಿಯ ವ್ಯಾಪ್ತಿಯನ್ನು ಕೂಡ ವಿಸ್ತರಿಸಲಾಗುತ್ತಿದೆ. ಅದೇ ಸಮಯದಲ್ಲಿ, ಸೈಬರ್ ಭೀತಿಗಳು ಭಾರಿ ವೇಗದಲ್ಲಿ ಜಾಸ್ತಿಯಾಗುತ್ತಿದ್ದು, ರಾಷ್ಟ್ರ-ಪ್ರೇರಿತ ಮತ್ತು ಆರ್ಥಿಕ ಪ್ರೇರಿತ ದಾಳಿಕೋರರು ದುರ್ಬಲತೆಗಳನ್ನು ನಿಮಿಷ ಮಾತ್ರದಲ್ಲಿ ಪತ್ತೆಹಚ್ಚಲು ಮತ್ತು ಅವಕಾಶ ಬಳಸಿಕೊಳ್ಳಲು ಎಐ ಅನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಝಡ್ಸ್ಕೇಲರ್ ನ ಸಂಶೋಧನಾ ವಿಭಾಗವಾದ ಥ್ರೆಟ್ ಲ್ಯಾಬ್ಸ್ ಇಂಡಿಯಾ, ಪ್ರತೀ ತಿಂಗಳು ಲಕ್ಷಾಂತರ ಅಕ್ರಮ ನುಸುಳುವಿಕೆ ಪ್ರಯತ್ನಗಳನ್ನು ಗಮನಿಸಿದೆ, ಅವುಗಳಲ್ಲಿ ಪ್ರಮುಖವಾದವುಗಳೆಂದರೆ:
• ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳನ್ನು ಬಳಸಿಕೊಂಡು ಭಾರತೀಯ ಸಂಸ್ಥೆಗಳ ಮೇಲೆ ಸೈಬರ್ ಗೂಢಚಾರಿಕೆ ಪ್ರಯತ್ನಗಳು.
• 58 ಭಾರತೀಯ ಡಿಜಿಟಲ್ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು 20,000 ಮೂಲಗಳಿಂದ 12 ಲಕ್ಷ ನುಸುಳುವಿಕೆ ಪ್ರಯತ್ನಗಳು.
• ವಿವಿಧ ಕೈಗಾರಿಕೆಗಳ ಮೇಲೆ ‘ಝೀರೋ-ಡೇ ಎಕ್ಸ್ ಪ್ಲಾಯ್ಟ್’ ದಾಳಿಗಳ ಏರಿಕೆ.
ಸೈಬರ್ ಅಪಾಯಗಳು ಸಂಕೀರ್ಣಗೊಳ್ಳುತ್ತಿದ್ದಂತೆ, ಸಾಂಪ್ರದಾಯಿಕ ಗಡಿ-ಆಧಾರಿತ ಭದ್ರತಾ ಮಾದರಿಗಳು ಇನ್ನು ಮುಂದೆ ಸಾಕಾಗುವುದಿಲ್ಲ. ಅಗತ್ಯ ಸೇವೆಗಳಿಗೆ ಅಡ್ಡಿಯುಂಟಾದರೆ ಅದು ರಾಷ್ಟ್ರೀಯ ಆರ್ಥಿಕ ಸ್ಥಿರತೆಗೆ ಧಕ್ಕೆ ತರಬಹುದು ಮತ್ತು ಇದರಿಂದ ಗಡಿಯಿಲ್ಲದ, ಎಐ-ಚಾಲಿತ ಪರಿಸರದಲ್ಲಿ ರಾಷ್ಟ್ರೀಯ ಡಿಜಿಟಲ್ ವ್ಯವಸ್ಥೆಗಳನ್ನು ರಕ್ಷಿಸಲು ‘ಸೆಕ್ಯೂರ್-ಬೈ-ಡಿಸೈನ್’ ಅಡಿಪಾಯ ಮತ್ತು ಆಧುನಿಕ ವಾಸ್ತುಶಿಲ್ಪದ ಬದಲಾವಣೆ ಅನಿವಾರ್ಯವಾಗುತ್ತದೆ.
ಎಐ & ಸೈಬರ್ ಥ್ರೆಟ್ ರಿಸರ್ಚ್ ಸೆಂಟರ್ ಇಂಡಿಯಾದ ಉದ್ದೇಶಗಳನ್ನು ನಾಲ್ಕು ಕಾರ್ಯತಂತ್ರದ ಸ್ತಂಭಗಳಲ್ಲಿ ರೂಪಿಸಲಾಗಿದೆ, ಅವುಗಳೆಂದರೆ:
1. ರಕ್ಷಿಸಿ: ಭಾರತದ ರಾಷ್ಟ್ರೀಯ ಸೈಬರ್ ದೃಢತೆ ಮತ್ತು ಡಿಜಿಟಲ್ ವ್ಯವಹಾರಗಳನ್ನು ಬಲಪಡಿಸಲು ನೈಜ-ಸಮಯದ, ಕಾರ್ಯರೂಪಕ್ಕೆ ತರಬಹುದಾದ ಮಾಹಿತಿಯನ್ನು ಒದಗಿಸುವುದು.
2. ಪರಿಹರಿಸಿ: ಸೈಬರ್ ದಾಳಿಗಳನ್ನು ನಿಷ್ಕ್ರಿಯಗೊಳಿಸಲು ಮತ್ತು ತಡೆಯಲು ಸರ್ಕಾರಿ ಏಜೆನ್ಸಿಗಳೊಂದಿಗೆ ನೇರವಾಗಿ ಪಾಲುದಾರಿಕೆ ಮಾಡಿಕೊಳ್ಳುವುದು.
3. ಸುಗಮಗೊಳಿಸಿ: ಆಧುನಿಕ ಭದ್ರತಾ ಚೌಕಟ್ಟುಗಳ ಅಳವಡಿಕೆಯನ್ನು ಹೆಚ್ಚಿಸುವುದು, ವಿಶೇಷವಾಗಿ ಎಐ-ಚಾಲಿತ ರಕ್ಷಣೆ ಮತ್ತು ಝೀರೋ ಟ್ರಸ್ಟ್ ವಾಸ್ತುಶಿಲ್ಪದ ಮೇಲೆ ಗಮನ ಕೇಂದ್ರೀಕರಿಸುವುದು.
4. ನಿರ್ಮಿಸಿ: ರಾಷ್ಟ್ರೀಯ ಕೌಶಲ್ಯದ ಕೊರತೆಯನ್ನು ನೀಗಿಸಲು ವಿಶೇಷ ಎಐ ಮತ್ತು ಝೀರೋ ಟ್ರಸ್ಟ್ ಪ್ರಮಾಣೀಕರಣಗಳ ಮೂಲಕ ಸೈಬರ್ ಭದ್ರತಾ ಪ್ರತಿಭೆಗಳನ್ನು ಬಲಪಡಿಸುವುದು.
ಸ್ಥಾಪಕ ಸದಸ್ಯರಾಗಿರುವ ಝಡ್ಸ್ಕೇಲರ್ ಮತ್ತು ಏರ್ ಟೆಲ್ ಜಾಗತಿಕ ಮಾಹಿತಿ ಮತ್ತು ಸ್ಥಳೀಯ ಕಾರ್ಯಾಚರಣೆಯ ವ್ಯಾಪ್ತಿಯನ್ನು ಸಂಯೋಜಿಸಿ ಭಾರತಕ್ಕಾಗಿ ಬಲಿಷ್ಠವಾದ ‘ಸಂಶೋಧನೆಯಿಂದ ಪ್ರತಿಕ್ರಿಯೆ’ ವ್ಯವಸ್ಥೆಯನ್ನು ರಚಿಸಲಿವೆ. ಝಡ್ಸ್ಕೇಲರ್ ಭಾರತದ ಮೇಲೆ ಗಮನ ಕೇಂದ್ರೀಕರಿಸಿದ ವಿಶೇಷ ಸೈಬರ್ ಭೀತಿ ಸಂಶೋಧನಾ ತಂಡವನ್ನು ನಿಯೋಜಿಸಲಿದೆ. ಈ ತಂಡವು ಪ್ರತಿ ದಿನ 500 ಬಿಲಿಯನ್ ಗಿಂತಲೂ ಹೆಚ್ಚು ವಹಿವಾಟುಗಳನ್ನು ಪ್ರಕ್ರಿಯೆಗೊಳಿಸುವ ಝಡ್ಸ್ಕೇಲರ್ ಜೀರೋ ಟ್ರಸ್ಟ್ ಎಕ್ಸ್ ಚೇಂಜ್™ ಪ್ಲಾಟ್ಫಾರ್ಮ್ ಅನ್ನು ಬಳಸಿಕೊಂಡು ಭಾರತದ ಸಾರ್ವಜನಿಕ ಮತ್ತು ಖಾಸಗಿ ವಲಯಗಳನ್ನು ಸುರಕ್ಷಿತಗೊಳಿಸಲು ಸೈಬರ್ ಮಾಹಿತಿಯನ್ನು ಹೊರತೆಗೆಯಲಿದೆ. ಏರ್ಟೆಲ್ ಐಓಟಿ ಮತ್ತು ಮೊಬೈಲ್ ಟ್ರಾಫಿಕ್ ನಲ್ಲಿ ಗಾಢವಾದ ಒಳನೋಟವನ್ನು ನೀಡಲಿದ್ದು, ನೆಟ್ ವರ್ಕ್ ಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಹೊಸ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಝಡ್ಸ್ಕೇಲರ್ ನೊಂದಿಗೆ ಸಹಯೋಗ ಮಾಡಿಕೊಂಡಿದೆ. ಮುಂದೆ, ಸಹಯೋಗವನ್ನು ವಿಸ್ತರಿಸಲು ಭಾರತದ ನಿರ್ಣಾಯಕ ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಹೆಚ್ಚುವರಿ ಸದಸ್ಯರನ್ನು ಈ ಕೇಂದ್ರಕ್ಕೆ ಸೇರಲು ಆಹ್ವಾನಿಸಲಾಗುತ್ತದೆ.
ಈ ಕುರಿತು ಮಾತನಾಡಿರುವ ಭಾರ್ತಿ ಏರ್ಟೆಲ್ ನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಗೋಪಾಲ್ ವಿಟ್ಟಲ್ ಅವರು, “ಏರ್ ಟೆಲ್ನಲ್ಲಿ, ನಮ್ಮ ಗ್ರಾಹಕರನ್ನು ಮತ್ತು ರಾಷ್ಟ್ರದ ಡಿಜಿಟಲ್ ವ್ಯವಸ್ಥೆಯನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ. ಝಡ್ಸ್ಕೇಲರ್ ನೊಂದಿಗಿನ ಈ ಪಾಲುದಾರಿಕೆಯು ಆ ಬದ್ಧತೆಗೆ ಸಾಕ್ಷಿಯಾಗಿದ್ದು, ಈ ಸಹಭಾಗಿತ್ವವು ನಮ್ಮ ಎಐ ಸಾಮರ್ಥ್ಯಗಳನ್ನು ಮತ್ತು ಸೈಬರ್ ಭದ್ರತಾ ಸಂಶೋಧನೆಯನ್ನು ಸಂಯೋಜಿಸಿ ದೇಶದ ವಿಸ್ತರಿಸುತ್ತಿರುವ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ರಕ್ಷಿಸುತ್ತದೆ. ಪ್ರತಿಯೊಬ್ಬ ನಾಗರಿಕ ಮತ್ತು ಉದ್ಯಮವು ಆತ್ಮವಿಶ್ವಾಸದಿಂದ ಸಂಪರ್ಕ ಸಾಧಿಸಲು ಮತ್ತು ಅಭಿವೃದ್ಧಿ ಹೊಂದಲು ಅನುಕೂಲವಾಗುವಂತೆ ಸುರಕ್ಷಿತ, ಹೆಚ್ಚು ದೃಢವಾದ ಡಿಜಿಟಲ್ ಭಾರತವನ್ನು ನಿರ್ಮಿಸಲು ನಾವು ನಮ್ಮ ಮಾರುಕಟ್ಟೆಗೆ ವಿಶಿಷ್ಟವಾದ ಸವಾಲುಗಳನ್ನು ಎದುರಿಸುವತ್ತ ಗಮನ ಹರಿಸುತ್ತೇವೆ” ಎಂದು ಹೇಳಿದರು.
ಝಡ್ಸ್ಕೇಲರ್ ನ ಸಿಇಓ, ಅಧ್ಯಕ್ಷ ಮತ್ತು ಸ್ಥಾಪಕ ಜಯ್ ಚೌಧರಿ ಅವರು ಮಾತನಾಡಿ, “ಭಾರತವು ಅಪಾರ ಜನಸಂಖ್ಯೆಯ ಪ್ರಮಾಣದಲ್ಲಿ ಡಿಜಿಟಲ್ ವ್ಯವಸ್ಥೆಗಳನ್ನು ನಿರ್ಮಿಸುತ್ತಿದೆ. ಹಳೆಯ ಕಾಲದ ಫೈರ್ ವಾಲ್ ಗಳು ಮತ್ತು ವಿಪಿಎನ್ ಗಳ ಮೂಲಕ ನೀವು ಈ ಮಟ್ಟದ ವ್ಯವಸ್ಥೆಯನ್ನು ಸುರಕ್ಷಿತವಾಗಿರಿಸಲು ಸಾಧ್ಯವಿಲ್ಲ. ಇದಕ್ಕೆ ಆಧುನಿಕ ಝೀರೋ ಟ್ರಸ್ಟ್ ವಾಸ್ತುಶಿಲ್ಪದ ಅಗತ್ಯವಿದೆ. “ಎಐ & ಸೈಬರ್ ಥ್ರೆಟ್ ರಿಸರ್ಚ್ ಸೆಂಟರ್ ಇಂಡಿಯಾ” ಮೂಲಕ, ರಾಷ್ಟ್ರದ ಸಾರ್ವಜನಿಕ ಮತ್ತು ಖಾಸಗಿ ವಲಯಗಳನ್ನು ರಕ್ಷಿಸಲು ನಾವು ವಿಶ್ವದ ಅತಿದೊಡ್ಡ ಭದ್ರತಾ ಕ್ಲೌಡ್ ನ ಸಂಪೂರ್ಣ ಶಕ್ತಿಯನ್ನು ಬಳಸುತ್ತೇವೆ. ದಿನಕ್ಕೆ 500 ಬಿಲಿಯನ್ ಗಿಂತಲೂ ಹೆಚ್ಚು ವಹಿವಾಟುಗಳಿಂದ ಪಡೆದ ಮಾಹಿತಿ ಮತ್ತು ಸ್ಥಳೀಯ ಪರಿಣತಿಯನ್ನು ಸಂಯೋಜಿಸುವ ಮೂಲಕ, ನಾವು ಕೇವಲ ಭದ್ರತೆ ಮಾತ್ರ ಒದಗಿಸುತ್ತಿಲ್ಲ; ಬದಲಿಗೆ ನಾವು ಹೊಸ ಪೀಳಿಗೆಯ ರಕ್ಷಕರನ್ನು ಸಬಲೀಕರಣಗೊಳಿಸುತ್ತಿದ್ದೇವೆ” ಎಂದು ಹೇಳಿದರು.
ಹೆಚ್ಚಿನ ಮಾಹಿತಿಗಾಗಿ, ಎಐ & ಸೈಬರ್ ಥ್ರೆಟ್ ರಿಸರ್ಚ್ ಸೆಂಟರ್ ಗೆ ಭೇಟಿ ನೀಡಿ ಮತ್ತು ಭಾರತದ ಹೆಚ್ಚುತ್ತಿರುವ ಸೈಬರ್ ಆತಂಕದ ಕುರಿತು ಆಳವಾದ ಒಳನೋಟಗಳಿಗಾಗಿ ‘ಸೆಕ್ಯೂರಿಂಗ್ ಡಿಜಿಟಲ್ ಇಂಡಿಯಾ ಅಗೇನ್ಸ್ಟ್ ಸೈಬರ್ ಥ್ರೆಟ್ಸ್’ ಇ-ಬುಕ್ ಅನ್ನು ಡೌನ್ಲೋಡ್ ಮಾಡಿ.
ಲಿಂಕ್ಡ್ ಇನ್, ಇನ್ ಸ್ಟಾಗ್ರಾಮ್ ಮತ್ತು ಎಕ್ಸ್ ನಲ್ಲಿ ಝಡ್ಸ್ಕೇಲರ್ ಅನ್ನು ಫಾಲೋ ಮಾಡಿ.
ಮುನ್ಸೂಚನಾ ಹೇಳಿಕೆ
ಈ ಪತ್ರಿಕಾ ಪ್ರಕಟಣೆಯು ನಮ್ಮ ಮ್ಯಾನೇಜ್ ಮೆಂಟ್ ನ ನಂಬಿಕೆಗಳು ಮತ್ತು ಊಹೆಗಳ ಮೇಲೆ ಹಾಗೂ ಪ್ರಸ್ತುತ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಸಿದ್ಧಪಡಿಸಲಾದ ‘ಮುನ್ಸೂಚನಾ ಹೇಳಿಕೆಗಳನ್ನು’ ಒಳಗೊಂಡಿದೆ. ಈ ಹೇಳಿಕೆಗಳು ಭಾರತದಲ್ಲಿ ‘ಎಐ & ಸೈಬರ್ ಥ್ರೆಟ್ ರಿಸರ್ಚ್ ಸೆಂಟರ್’ ಸ್ಥಾಪನೆ ಮತ್ತು ಅದರಿಂದ ನಿರೀಕ್ಷಿಸಲಾದ ಪ್ರಯೋಜನಗಳನ್ನು ಒಳಗೊಂಡಿವೆ. ಈ ಮುನ್ಸೂಚನಾ ಹೇಳಿಕೆಗಳು 1995ರ ‘ಪ್ರೈವೇಟ್ ಸೆಕ್ಯೂರಿಟೀಸ್ ಲಿಟಿಗೇಷನ್ ರಿಫಾರ್ಮ್ ಆಕ್ಟ್’ ಅಡಿಯಲ್ಲಿ ರಚಿಸಲಾದ ‘ಸೇಫ್ ಹಾರ್ಬರ್’ ನಿಬಂಧನೆಗಳಿಗೆ ಒಳಪಟ್ಟಿವೆ. ಹಲವಾರು ಅಂಶಗಳು ಈ ಪತ್ರಿಕಾ ಪ್ರಕಟಣೆಯಲ್ಲಿ ಮಾಡಲಾದ ಹೇಳಿಕೆಗಳಿಗಿಂತ ಭಿನ್ನವಾದ ಫಲಿತಾಂಶಗಳಿಗೆ ಕಾರಣವಾಗಬಹುದು. ಇದರಲ್ಲಿ ಭಾರತದ ‘ಎಐ & ಸೈಬರ್ ಥ್ರೆಟ್ ರಿಸರ್ಚ್ ಸೆಂಟರ್’ ಅನ್ನು ಯಶಸ್ವಿಯಾಗಿ ಸ್ಥಾಪಿಸುವ ಮತ್ತು ಕಾರ್ಯಗತಗೊಳಿಸುವ ನಮ್ಮ ಸಾಮರ್ಥ್ಯಕ್ಕೆ ಸಂಬಂಧಿಸಿದ ಅಂಶಗಳೂ ಸೇರಿವೆ. ಹೆಚ್ಚುವರಿ ಅಪಾಯಗಳು ಮತ್ತು ಅನಿಶ್ಚಿತತೆಗಳ ಬಗ್ಗೆ ನವೆಂಬರ್ 25, 2025 ರಂದು ‘ಸೆಕ್ಯೂರಿಟೀಸ್ ಆಂಡ್ ಎಕ್ಸ್ ಚೇಂಜ್ ಕಮಿಷನ್’ (ಎಸ್ಇಸಿ)ಗೆ ಸಲ್ಲಿಸಲಾದ ನಮ್ಮ ಇತ್ತೀಚಿನ ತ್ರೈಮಾಸಿಕ ವರದಿ (ಫಾರ್ಮ್ 10-ಕ್ಯೂ) ಯಲ್ಲಿ ವಿವರಿಸಲಾಗಿದೆ. ಇದು ನಮ್ಮ ವೆಬ್ಸೈಟ್ ir.zscaler.com ಮತ್ತು ಎಸ್ಇಸಿ ವೆಬ್ಸೈಟ್ www.sec.gov ನಲ್ಲಿ ಲಭ್ಯವಿದೆ. ಈ ಪ್ರಕಟಣೆಯಲ್ಲಿರುವ ಯಾವುದೇ ಮುನ್ಸೂಚನಾ ಹೇಳಿಕೆಗಳು ಇಂದಿನ ದಿನಾಂಕದವರೆಗೆ ಝಡ್ಸ್ಕೇಲರ್ ಗೆ ಲಭ್ಯವಿರುವ ಸೀಮಿತ ಮಾಹಿತಿಯನ್ನು ಆಧರಿಸಿವೆ ಮತ್ತು ಇವು ಬದಲಾವಣೆಗೆ ಒಳಪಟ್ಟಿವೆ. ಭವಿಷ್ಯದಲ್ಲಿ ಹೊಸ ಮಾಹಿತಿ ಲಭ್ಯವಾದರೂ, ಝಡ್ಸ್ಕೇಲರ್ ಈ ಮಾಹಿತಿಯನ್ನು ಕಡ್ಡಾಯವಾಗಿ ಅಪ್ಡೇಟ್ ಮಾಡಬೇಕೆಂದೇನಿಲ್ಲ.
