ಬೆಂಗಳೂರು:ಸಡನ್ ಹೃದಯಾಘಾತ ತಡೆಗೆ ತಜ್ಞರಿಂದ ಎಚ್ಚರಿಕೆ: ಡಾ. ದೇವಿಪ್ರಸಾದ್ ಶೆಟ್ಟಿಯರಿಂದ ಹೃದಯಪೂರ್ವ ಪರೀಕ್ಷೆಗಳ ಅಗತ್ಯ ತಿಳುವಳಿಕೆ

ಹೃದಯಾಘಾತವು ಈಗ ದಿನದಿಂದ ದಿನಕ್ಕೆ ಜ್ವರದಂತೆ ಸಾಮಾನ್ಯವಾಗಿ ಕಾಣಿಸುತ್ತಿದೆ. ಖ್ಯಾತ ಹೃದ್ರೋಗ ತಜ್ಞ ಡಾ. ದೇವಿಪ್ರಸಾದ್ ಶೆಟ್ಟಿ ಅವರು 40 ವರ್ಷ ಮೇಲ್ಪಟ್ಟವರು ಪ್ರತಿ 10 ವರ್ಷಕ್ಕೊಮ್ಮೆ ECG ಮತ್ತು ಆಂಜಿಯೋಗ್ರಾಮ್ ಮಾಡಿಸಿಕೊಳ್ಳಬೇಕು ಎಂಬ ಅಮೂಲ್ಯ ಸಲಹೆ ನೀಡಿದ್ದಾರೆ. ಈ ಪರೀಕ್ಷೆಗಳ ಮೂಲಕ ಸಡನ್ ಹೃದಯಾಘಾತ ತಪ್ಪಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.