ಬೆಂಗಳೂರು : ಭಾರತ ತನ್ನ ಸ್ವದೇಶಿ ರಕ್ಷಣಾ ತಂತ್ರಜ್ಞಾನದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಆಂಡ್ ಏರೋಸ್ಪೇಸ್ (Flying Wedge Defence and Aerospace) ಸಂಸ್ಥೆಯು ಅಭಿವೃದ್ಧಿಪಡಿಸಿದ ಮೀಡಿಯಂ ಆಲ್ಟಿಟ್ಯೂಡ್ ಲಾಂಗ್ ಡಿಸ್ಟೆನ್ಸ್ (MAL) ಯುದ್ಧವಿಮಾನ ‘ಎಫ್ಡಬ್ಲ್ಯೂಡಿ ಕಾಲಭೈರವ’ (FWD Kaalbhairava) ದೇಶದ ಮೊದಲ ಸ್ವದೇಶಿ ನಿರ್ಮಿತ AI ಆಧಾರಿತ ಯುದ್ಧವಿಮಾನವಾಗಿ ಸೇನಾ ಪಡೆಗೆ ಸೇರ್ಪಡೆಯಾಗಿದೆ.
ಈ ಯುದ್ಧವಿಮಾನವನ್ನು ಸಂಪೂರ್ಣವಾಗಿ ಭಾರತೀಯ ತಾಂತ್ರಿಕ ತಜ್ಞರು, ವಿಜ್ಞಾನಿಗಳು ಹಾಗೂ ಸಂಶೋಧಕರು ವಿನ್ಯಾಸಗೊಳಿಸಿದ್ದು, ಕೃತಕ ಬುದ್ಧಿಮತ್ತೆ (Artificial Intelligence) ಆಧಾರಿತವಾಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ಪೈಲಟ್ರ ಅವಲಂಬನೆ ಕಡಿಮೆಯಾಗುತ್ತಿದ್ದು, ಅಪಾಯಕಾರಿ ಯುದ್ಧ ಪರಿಸ್ಥಿತಿಗಳಲ್ಲಿ ಸ್ವಯಂ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನೂ ಹೊಂದಿದೆ.
ವಿಶೇಷತೆಗಳು:
- ಮೀಡಿಯಂ ಆಲ್ಟಿಟ್ಯೂಡ್ (ಮಧ್ಯಮ ಎತ್ತರ)ದಲ್ಲಿ ದೀರ್ಘಾವಧಿಯ ಯುದ್ಧ ಕಾರ್ಯಾಚರಣೆಗೆ ವಿನ್ಯಾಸ.
- ಅತ್ಯಾಧುನಿಕ AI ಆಧಾರಿತ ಹಾರಾಟ ನಿಯಂತ್ರಣ ವ್ಯವಸ್ಥೆ.
- ದೀರ್ಘ ದೂರದ ಗುರಿ ಪತ್ತೆಹಚ್ಚಿ ನಿಖರ ದಾಳಿ ಮಾಡುವ ಸಾಮರ್ಥ್ಯ.
- ಭಾರತೀಯ ಸೇನೆಗೆ ತಕ್ಕಂತೆ ಅತಿದೊಡ್ಡ ತಂತ್ರಜ್ಞಾನಿ ಬಲವರ್ಧನೆ.
ರಕ್ಷಣಾ ವಲಯದಲ್ಲಿ ಮೈಲಿಗಲ್ಲು:
‘ಕಾಲಭೈರವ’ ಸೇರ್ಪಡೆಯಿಂದ ಭಾರತವು ಸ್ವದೇಶಿ ರಕ್ಷಣಾ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ವಿದೇಶಿ ತಂತ್ರಜ್ಞಾನ ಅವಲಂಬನೆಯನ್ನು ಕಡಿಮೆ ಮಾಡುವುದರ ಜೊತೆಗೆ, ಭಾರತವನ್ನು ಜಾಗತಿಕ ಮಟ್ಟದಲ್ಲಿ ಸ್ವಾವಲಂಬಿ ರಕ್ಷಣಾ ಶಕ್ತಿಯ ರಾಷ್ಟ್ರವೆಂದು ಗುರುತಿಸಲಿದೆ.

[…] […]