ಬೆಂಗಳೂರು: ಸುಳ್ಳು ಸುದ್ದಿ ಮತ್ತು ದ್ವೇಷ ಭಾಷಣ ತಡೆಗೆ ಕರ್ನಾಟಕ ಸರ್ಕಾರದಿಂದ ಕಠಿಣ ವಿಧೇಯಕ: ಏಳು ವರ್ಷ ಜೈಲು, ₹10 ಲಕ್ಷ ದಂಡಕ್ಕೆ ತಯಾರಿ

ಕರ್ನಾಟಕ ಸರ್ಕಾರ ಸುಳ್ಳು ಸುದ್ದಿ ಮತ್ತು ದ್ವೇಷ ಭಾಷಣ ತಡೆಗೆ 2025ರ ವಿಧೇಯಕವನ್ನು ತರಲು ಮುಂದಾಗಿದೆ. ಈ ಮಸೂದೆ ಅಡಿಯಲ್ಲಿ ತಪ್ಪು ಮಾಹಿತಿ ಹಂಚಿದರೆ ಏಳು ವರ್ಷ ಜೈಲು ಅಥವಾ 10 ಲಕ್ಷ ದಂಡ, ದ್ವೇಷ ಭಾಷಣಕ್ಕೆ ಮೂರು ವರ್ಷ ಜೈಲು ಮತ್ತು 5 ಸಾವಿರ ದಂಡದ ವ್ಯವಸ್ಥೆ ಇರಲಿದೆ.