ಬೆಂಗಳೂರು : ರಾಜ್ಯದಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಅಗತ್ಯವಾದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಸೆಟ್-2025) ನಡೆಸಲು ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಸರ್ಕಾರದ ಆದೇಶ ಹಾಗೂ ಯುಜಿಸಿ-ನೆಟ್ ಬ್ಯೂರೋ, ನವದೆಹಲಿಯ ನಿರ್ದೇಶನದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈ ಪರೀಕ್ಷೆಯನ್ನು 2025ರ ನವೆಂಬರ್ 2ರಂದು (ಭಾನುವಾರ) ನಡೆಸಲಿದೆ.
ಅರ್ಜಿಸಲ್ಲಿಕೆಯ ವೇಳಾಪಟ್ಟಿ ಹೀಗಿದೆ:
- ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ: ಆಗಸ್ಟ್ 28, 2025
- ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: ಸೆಪ್ಟೆಂಬರ್ 18, 2025
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 19, 2025
- ಪ್ರವೇಶ ಪತ್ರ (Hall Ticket) ಬಿಡುಗಡೆ: ಅಕ್ಟೋಬರ್ 24, 2025
- ಪರೀಕ್ಷಾ ದಿನಾಂಕ: ನವೆಂಬರ್ 2, 2025
ಅರ್ಹ ಅಭ್ಯರ್ಥಿಗಳು ಸಮಯಮಿತಿಯೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಕಟಣೆಯಲ್ಲಿ ತಿಳಿಸಿದೆ.
ಕ್ಯಾನ್ಸರ್’ಗೆ ಕಾರಣವಾಗುವ 3 ಸಾಮಾನ್ಯ ಅಡುಗೆ ಸಾಮಗ್ರಿಗಳಿವು, ನಿಮ್ಮ ಆಹಾರ ವಿಷವಾಗುತ್ತೆ!
