ಬೆಂಗಳೂರು, ನವೆಂಬರ್ 5: ಕರ್ನಾಟಕ ಜನತೆಗೆ ಕೆಎಂಎಫ್ (KMF) ಮತ್ತೊಮ್ಮೆ ದರ ಏರಿಕೆಯ ಶಾಕ್ ನೀಡಿದೆ. ನಂದಿನಿ ತುಪ್ಪದ ದರವನ್ನು ಪ್ರತಿ ಲೀಟರ್ಗೆ ₹90 ಏರಿಕೆ ಮಾಡಲಾಗಿದೆ. ಇತ್ತೀಚಿಗಷ್ಟೇ ಜಿಎಸ್ಟಿ ಇಳಿಕೆಯ ಬಳಿಕ ದರ ಕಡಿತ ಮಾಡಿದ್ದ ಕೆಎಂಎಫ್ ಇದೀಗ ತುಪ್ಪದ ಬೆಲೆಯಲ್ಲಿ ದಿಢೀರ್ ಏರಿಕೆ ಘೋಷಿಸಿದೆ.
ಹಿಂದಿನ ದರ ₹610 ಆಗಿದ್ದರೆ, ಈಗ ಪ್ರತಿ ಲೀಟರ್ ನಂದಿನಿ ತುಪ್ಪಕ್ಕೆ ₹700 ನಿಂದ ₹720 ವರೆಗೆ ಹೊಸ ದರ ನಿಗದಿಯಾಗಿದೆ. ಜಾಗತಿಕ ಮಾರುಕಟ್ಟೆಯ ದರ ಏರಿಕೆ ಹಾಗೂ ತುಪ್ಪದ ಬೇಡಿಕೆಯ ಏರಿಕೆ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೆಎಂಎಫ್ ಸ್ಪಷ್ಟಪಡಿಸಿದೆ.
ಕೆಎಂಎಫ್ ಪ್ರಕಟಿಸಿದ ಹೊಸ ದರಪಟ್ಟಿ ಪ್ರಕಾರ:
-
50 ಎಂಎಲ್ – ₹47
-
100 ಎಂಎಲ್ – ₹75
-
200 ಎಂಎಲ್ – ₹155–165
-
500 ಎಂಎಲ್ – ₹350–360
-
1000 ಎಂಎಲ್ (1 ಲೀಟರ್) – ₹700–720
ನಂದಿನಿ ತುಪ್ಪದ ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ.
ಇದನ್ನು ಓದಿ: ಆರೋಗ್ಯದ ಅಚ್ಚರಿಯ ಅಸ್ತ್ರ – ನುಗ್ಗೆಕಾಯಿ ನೀರಿನ ಅದ್ಭುತ ಪ್ರಯೋಜನಗಳು!
ಗಮನಾರ್ಹವಾಗಿ, ಸೆಪ್ಟೆಂಬರ್ನಲ್ಲಿ ಕೇಂದ್ರ ಸರ್ಕಾರ ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್ಟಿ ಪ್ರಮಾಣವನ್ನು ಶೇಕಡಾ 12ರಿಂದ 5ಕ್ಕೆ ಇಳಿಸಿದ್ದಿತ್ತು. ಇದರ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ರಾಜ್ಯಗಳಿಗೆ ಸೂಚನೆ ನೀಡಲಾಗಿತ್ತು. ಅದರಿಂದಲೇ ಕೆಎಂಎಫ್ ಅಂದಿನಂತೆ ದರ ಇಳಿಕೆ ಮಾಡಿತ್ತು. ಆದರೆ ಈಗ ಮತ್ತೊಮ್ಮೆ ತುಪ್ಪದ ಬೆಲೆ ಏರಿಕೆಗೊಂಡಿದ್ದು, ಹಬ್ಬದ ಮುನ್ನ ಗ್ರಾಹಕರಿಗೆ ಇದು “ಬೆಣ್ಣೆ ಬದಲು ಬೆಂಕಿ”ಯಂತಾಗಿದೆ.

[…] […]