ಬೆಂಗಳೂರು, ಆಗಸ್ಟ್ 4, 2025: ಭಾರತದ ಅತಿದೊಡ್ಡ ವಾಣಿಜ್ಯ ಆಸ್ತಿ ಹೂಡಿಕೆ ಟ್ರಸ್ಟ್ಗಳಲ್ಲಿ ಒಂದಾದ ನಾಲೆಡ್ಜ್ ರಿಯಾಲ್ಟಿ ಟ್ರಸ್ಟ್ (Knowledge Realty Trust) ₹4,800 ಕೋಟಿ ಮೌಲ್ಯದ ಪ್ರಾಥಮಿಕ ಹೂಡಿಕೆ (IPO) ಯೋಜನೆಗೆ ಚಾಲನೆ ನೀಡಿದೆ. ಪ್ರತಿ ಯೂನಿಟ್ಗೆ ₹95 ರಿಂದ ₹100ರ ಬೆಲೆ ಬೌಂಡ್ ನಿಗದಿಪಡಿಸಲಾಗಿದೆ.
IPOಯ ಬಿಡ್ ಪ್ರಕ್ರಿಯೆ ಆಗಸ್ಟ್ 5ರಿಂದ ಆರಂಭವಾಗಿ ಆಗಸ್ಟ್ 7ರವರೆಗೆ ನಡೆಯಲಿದೆ. ಕನಿಷ್ಠ ₹15,000 ಹೂಡಿಕೆ ಬೇಕು ಹಾಗೂ ಹೂಡಿಕೆದಾರರು ಕನಿಷ್ಠ 150 ಯೂನಿಟ್ಗಳ ಗುಣಿತದಲ್ಲಿ ಬಿಡ್ ಮಾಡಬಹುದಾಗಿದೆ.
ಸತ್ಯ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಬ್ಲ್ಯಾಕ್ಸ್ಟೋನ್ ಆಫ್ಶೋರ್ ಕಂಪನಿಗಳು ಟ್ರಸ್ಟ್ನ ಪ್ರಾಯೋಜಕರು. ಟ್ರಸ್ಟ್ನ ಆಸ್ತಿ ಮೌಲ್ಯವು 46.3 ಮಿಲಿಯನ್ ಚದರ ಅಡಿಗಳ Grade-A ಕಚೇರಿ ಜಾಗಗಳ ಸಮೂಹವನ್ನು ಒಳಗೊಂಡಿದ್ದು, ಮುಂಬೈ, ಬೆಂಗಳೂರು, ಹೈದರಾಬಾದ್, ಗುರುಗಾಂವ್ ಮೊದಲಾದ ನಗರಗಳಲ್ಲಿ ಕೇಂದ್ರಿತವಾಗಿದೆ.
ನಾಲೆಡ್ಜ್ ರಿಯಾಲ್ಟಿ ಟ್ರಸ್ಟ್ನ CEO ಶಿರೀಷ್ ಗಡ್ಬೋಲೆ ಅವರು, “ಭಾರತದ ಕಚೇರಿ ಆಸ್ತಿ ವಲಯದಲ್ಲಿ ಇದು ಮಹತ್ತರ ಮೈಲಿಗಲ್ಲು. ನಾವು ಹೊಸ ತರದ ಕಾರ್ಯಕ್ಷಮ, ಎಐ ಆಧಾರಿತ ಪ್ಲಾಟ್ಫಾರ್ಮ್ ಮೂಲಕ ಬಡಿಗೆದಾರರ ಅಗತ್ಯಗಳಿಗೆ ಸ್ಪಂದಿಸುತ್ತೇವೆ” ಎಂದು ತಿಳಿಸಿದ್ದಾರೆ
ಹೆಚ್ಚಿನ ವಿವರಗಳಿಗೆ:
📧 ajith.s@conceptpr.com | 📞 +91 98864 04895
📧 shekarb@conceptpr.com | 📞 +91 95387 57922
📧 nupur@conceptpr.com | 📞 +91 92845 69590
