ಬೆಂಗಳೂರು, ಜೂನ್ 29: ಜುಲೈ 1ರಿಂದ ದೇಶಾದ್ಯಂತ ಹಲವು ಪ್ರಮುಖ ಹೊಸ ನಿಯಮಗಳು ಜಾರಿಗೆ ಬರಲಿದ್ದು, ಇದರ ಪರಿಣಾಮ ನೇರವಾಗಿ ಸಾರ್ವಜನಿಕರ ಹಣಕಾಸು, ಬಿಲ್ಲುಗಳು ಮತ್ತು ದಿನಚರಿಯ ಮೇಲೆ ಬೀಳಲಿದೆ. ರೈಲು ಟಿಕೆಟ್ ದರ ಹೆಚ್ಚಳದಿಂದ ಹಿಡಿದು ಎಟಿಎಂ, ಕ್ರೆಡಿಟ್ ಕಾರ್ಡ್, ಎಲ್ಪಿಜಿ ಬೆಲೆ ಪರಿಷ್ಕರಣೆ ಸೇರಿದಂತೆ ಪ್ಯಾನ್-ಆಧಾರ್ ಲಿಂಕ್ ಕೂಡ ಕಡ್ಡಾಯವಾಗಲಿದೆ.
ಮುಖ್ಯ ಬದಲಾವಣೆಗಳು:
-
ರೈಲು ಟಿಕೆಟ್ ದರ ಏರಿಕೆ – ಸ್ಲೀಪರ್ ಕೋಚ್ಗಳಿಗೆ ಪ್ರತಿ ಕಿ.ಮೀ.ಗೆ ₹0.01 ಮತ್ತು ಎಸಿ ಕೋಚ್ಗಳಿಗೆ ₹0.02 ಹೆಚ್ಚಳ.
-
ಪ್ಯಾನ್–ಆಧಾರ್ ಲಿಂಕ್ ಕಡ್ಡಾಯ – ಹೊಸ ಪ್ಯಾನ್ಗೆ ಅರ್ಜಿ ಸಲ್ಲಿಸುವವರು ಆಧಾರ್ ಕಡ್ಡಾಯವಾಗಿ ನೀಡಬೇಕು.
-
ಎಲ್ಪಿಜಿ ಬೆಲೆ ಪರಿಷ್ಕರಣೆ – ಜುಲೈ 1ರಂದು ತೈಲ ಕಂಪನಿಗಳು ಬೆಲೆ ನವೀಕರಿಸಲಿವೆ. ಇಳಿಕೆ ಅಥವಾ ಏರಿಕೆ ಸಾಧ್ಯತೆ.
-
ICICI ಎಟಿಎಂ ವಹಿವಾಟು ಶುಲ್ಕ – ಉಚಿತ ಮಿತಿ ಮೀರಿ, ಹಣ ಡ್ರಾ ಮಾಡಲು ₹23 ಶುಲ್ಕ.
-
HDFC ಕ್ರೆಡಿಟ್ ಕಾರ್ಡ್ ಪಾವತಿಗೆ ಶುಲ್ಕ – Paytm, GPay, PhonePe ಮೂಲಕ ಪಾವತಿಗೆ ಶೇ.1ರಷ್ಟು ಹೆಚ್ಚುವರಿ ಶುಲ್ಕ.
-
ತತ್ಕಾಲ್ ಟಿಕೆಟ್ ಬುಕ್ಕಿಂಗ್ನಲ್ಲಿ ಆಧಾರ್ ಲಿಂಕ್ ಕಡ್ಡಾಯ – Tatkal ಬುಕ್ಕಿಂಗ್ಗಾಗಿ IRCTC ಖಾತೆಯ ಆಧಾರ್ ಲಿಂಕ್ ಅಗತ್ಯ.
ಸಾರ್ವಜನಿಕರಿಗೆ ಸಲಹೆ:
ಹೊಸ ನಿಯಮಗಳ ಪರಿಣಾಮಗಳನ್ನು ತಪ್ಪಿಸಿಕೊಳ್ಳಲು ಪ್ಯಾನ್-ಆಧಾರ್ ಲಿಂಕ್, ಬ್ಯಾಂಕ್ ನಿಯಮಗಳ ಪರಿಶೀಲನೆ ಮತ್ತು ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಗಳ ಪ್ರಸ್ತುತಗೊಳಿಸುವುದು ಅಗತ್ಯ.
