ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIAL) ವಾಹನ ಸಂಚಾರ ನಿಯಂತ್ರಣ ಹಾಗೂ ಟ್ರಾಫಿಕ್ ಕಷ್ಟ ನಿವಾರಣೆಗೆ ಡಿಸೆಂಬರ್ 8ರಿಂದ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ. ದಿನಕ್ಕೆ ಸರಾಸರಿ 1.3 ಲಕ್ಷ ಪ್ರಯಾಣಿಕರು ಹಾಗೂ 1 ಲಕ್ಷದಷ್ಟು ವಾಹನಗಳ ಸಂಚಾರ ಇರುವ ಹಿನ್ನೆಲೆಯಲ್ಲಿ ಕ್ರಮ ಕಡ್ಡಾಯವಾಗಿದೆ.
ಖಾಸಗಿ (ಬಿಳಿ ಬೋರ್ಡ್) ವಾಹನಗಳಿಗೆ ಹೊಸ ನಿಯಮಗಳು
-
ಮೊದಲ 8 ನಿಮಿಷ ಉಚಿತ
-
8–13 ನಿಮಿಷ: ₹150 ಶುಲ್ಕ
-
13–18 ನಿಮಿಷ: ₹300 ಶುಲ್ಕ
-
18 ನಿಮಿಷ ಮೀರಿದರೆ: ವಾಹನ ಜಪ್ತಿ – ಪೊಲೀಸ್ ಠಾಣೆಗೆ ರವಾನೆ, ದಂಡ + ಟೋಯಿಂಗ್ ಶುಲ್ಕ

ವಾಣಿಜ್ಯ (ಹಳದಿ ಬೋರ್ಡ್) ವಾಹನಗಳಿಗೆ ನಿಯಮಗಳು
-
ಮೊದಲ 10 ನಿಮಿಷ ಉಚಿತ
-
ಕಾಯುವ ಸ್ಥಳ:
-
T1 – P4 ಮತ್ತು P3
-
T2 – P2
-
-
ನಿಗದಿತ ಪಾರ್ಕಿಂಗ್ ವಲಯದಲ್ಲೇ ವಾಹನ ನಿಲ್ಲಿಸುವುದು ಅನಿವಾರ್ಯ.

ಈ ನಿಯಮ ಯಾರಿಗೆ ಅನ್ವಯಿಸಲ್ಲ?
ಪ್ರಯಾಣಿಕರನ್ನು ಡ್ರಾಪ್ ಮಾಡುವ ವಾಹನಗಳಿಗೆ (ನಿರ್ಗಮನ ಗೇಟ್) ಈ ಶುಲ್ಕ ಅನ್ವಯಿಸುವುದಿಲ್ಲ.
ಅಧಿಕೃತ ಕ್ಯಾಬ್ ಬಳಕೆ ಕಡ್ಡಾಯ
ಪ್ರಯಾಣಿಕರ ಸುರಕ್ಷತೆಗೆ #BeCabWise ಅಭಿಯಾನದಡಿಯಲ್ಲಿ ಏರ್ಪೋರ್ಟ್ ಟ್ಯಾಕ್ಸಿ, ಉಬರ್, ಓಲಾ, ಕ್ವಿಕ್ ರೈಡ್, OHM ಎಲೆಕ್ಟ್ರಿಕ್, WTI ಸೇವೆಗಳನ್ನು ಮಾತ್ರ ಬಳಸುವಂತೆ ಎಚ್ಚರಿಕೆ.
ಬಿಐಎಎಲ್ ಎಂಡಿ ಹರಿ ಮರಾರ್ ಹೇಳುವಂತೆ:
“ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವುದರಿಂದ ಪಿಕ್-ಅಪ್ ವಲಯಗಳಲ್ಲಿ ಶಿಸ್ತು ಕಾಪಾಡುವುದು ಅನಿವಾರ್ಯ. ಇದು ಕೇವಲ ನಿಯಮವಲ್ಲ; ಸುರಕ್ಷತೆ ಮತ್ತು ಸಮಯ ಉಳಿಸುವ ಕ್ರಮ. ಎಲ್ಲರೂ ಸಹಕರಿಸಿದರೆ ಅನುಭವ ಇನ್ನಷ್ಟು ಉತ್ತಮವಾಗುತ್ತದೆ.”
