ಬೆಂಗಳೂರು/ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಾರಿಯಲ್ಲಿರುವ ಚಾಲಕ ವಿರೋಧ ನೀತಿಗಳನ್ನು ವಿರೋಧಿಸಿ ಕರ್ನಾಟಕ ಚಾಲಕರ ಒಕ್ಕೂಟದ ವತಿಯಿಂದ ದೇವನಹಳ್ಳಿ ಪ್ರದೇಶದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಚಾಲಕರು, ವಿಮಾನ ನಿಲ್ದಾಣದಲ್ಲಿ ಕ್ಯಾಬ್ ಹಾಗೂ ವಾಣಿಜ್ಯ ವಾಹನ ಚಾಲಕರ ಪ್ರಯಾಣಿಕರನ್ನು ಪಿಕ್ ಆಪ್ ಮಾಡುಲು ಮಾಡಲು ಮತ್ತು ಡ್ರಾಪ್ ಮಾಡುಲು ಕೇವಲ 8 ನಿಮಿಷ ಸಮಯ ನಿಗಧಿಪಡಿಸಿದ್ದು, ಹಾಗೂ ಹೆಚ್ಚುವರಿ ಶುಲ್ಕ , ನಿರ್ಬಂಧಿತ ಪ್ರವೇಶ ವ್ಯವಸ್ಥೆ, ಹಾಗೂ ಅನ್ಯಾಯಕರ ನಿಯಮಗಳು ತಮ್ಮ ಜೀವನೋಪಾಯಕ್ಕೆ ತೀವ್ರ ಹೊಡೆತ ನೀಡುತ್ತಿವೆ ಎಂದು ಆರೋಪಿಸಿದರು. ಈ ನೀತಿಗಳನ್ನು ತಕ್ಷಣವೇ ಹಿಂಪಡೆಯಬೇಕು ಹಾಗೂ ಚಾಲಕರೊಂದಿಗೆ ಚರ್ಚಿಸಿ ನ್ಯಾಯಸಮ್ಮತ ನಿಯಮಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.

ಒಕ್ಕೂಟದ ಮುಖಂಡರು, ಬೇಡಿಕೆಗಳಿಗೆ ಸ್ಪಂದನೆ ಸಿಗದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆ ಶಾಂತಿಯುತವಾಗಿ ನಡೆದಿದ್ದು, ಸ್ಥಳದಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು.

ಈ ಸಂಬಂಧ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲ್ವಾಚರಕರು ಸ್ಥಳಕ್ಕಾಗಮಿಸಿ, ಪ್ರತಿಭಟನಾಕಾರರ ಮನವೋಲಿಸುವಲ್ಲಿ ಯಶಸ್ವಿಯಾಗಿದ್ದು, ಎರಡು ದಿನ ಗಡವು ಕೇಳಿದ್ದು, ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ.

[…] […]