ಬೆಂಗಳೂರು: ಕರ್ನಾಟಕದ ರಾಜ್ಯಪಕ್ಷಿ ಹಾಗೂ ಅತ್ಯಂತ ಸುಂದರವಾದ ಪಕ್ಷಿ ಎಂದೇ ಖ್ಯಾತಿಯ ನೀಲಕಂಠ (Indian Roller) ಪಕ್ಷಿ ಅಳಿವಿನ ಅಂಚಿನಲ್ಲಿದೆ ಎಂದು ವರದಿಯಾಗಿದೆ.
2003ರಲ್ಲಿ ಕರ್ನಾಟಕದ ರಾಜ್ಯಪಕ್ಷಿಯಾಗಿ ಘೋಷಿಸಲ್ಪಟ್ಟ ನೀಲಕಂಠ ಪಕ್ಷಿಗೆ ವನ್ಯಜೀವಿ (ರಕ್ಷಣೆ) ಕಾಯ್ದೆ, 1972ರ ವೇಳಾಪಟ್ಟಿ II ಅಡಿಯಲ್ಲಿ ಕಾನೂನು ರಕ್ಷಣೆಯು ದೊರೆತಿದೆ.
ಆದಾಗ್ಯೂ, “ಸ್ಟೇಟ್ ಆಫ್ ಇಂಡಿಯಾ’ಸ್ ಬರ್ಡ್ಸ್ 2023” ವರದಿ ಪ್ರಕಾರ ಕಳೆದ ದಶಕದಲ್ಲಿ ಈ ಪಕ್ಷಿಯ ಜನಸಂಖ್ಯೆಯಲ್ಲಿ ಶೇ.30ರಷ್ಟು ಆತಂಕಕಾರಿ ಕುಸಿತ ಕಂಡುಬಂದಿದೆ. ಪರಿಸರ ಹಾನಿ, ಕೃಷಿ ರಾಸಾಯನಿಕಗಳ ಅತಿಯಾಗಿ ಬಳಕೆ ಮತ್ತು ವಾಸಸ್ಥಳ ನಾಶವು ಇದರ ಪ್ರಮುಖ ಕಾರಣಗಳೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

[…] ಇದನ್ನು ಓದಿ: ಬೆಂಗಳೂರು: ಅಳಿವಿನ ಅಂಚಿನಲ್ಲಿರುವ ಕರ್ನಾಟ… […]
[…] ಇದನ್ನು ಓದಿ: ಬೆಂಗಳೂರು: ಅಳಿವಿನ ಅಂಚಿನಲ್ಲಿರುವ ಕರ್ನಾಟ… […]