ಬೆಂಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಡಿ. ಸತ್ಯ ಪ್ರಕಾಶ್ ಅವರ ನಿರೀಕ್ಷಿತ ನೂತನ ಚಲನಚಿತ್ರ ‘X & Y’ ಇದೇ ಗುರುವಾರ, ಜೂನ್ 26, 2025 ರಂದು ರಾಜ್ಯಾದ್ಯಾಂತ ಬಿಡುಗಡೆಯಾಗುತ್ತಿದೆ. ವಿಶಿಷ್ಟ ವೈಜ್ಞಾನಿಕ ಹಿನ್ನಲೆಯಲ್ಲಿ ರೂಪುಗೊಂಡ ಈ ಚಿತ್ರ, ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗವಾಗಿ ಗಮನ ಸೆಳೆಯುತ್ತಿದೆ.
ಈ ಚಿತ್ರವು ಒಂದು ಹುಟ್ಟದೇ ಇರುವ ಮಗುವಿನ ಕತೆಯಾಗಿ ಸಾಗುತ್ತದೆ – ಅದು ತನ್ನ ಅಸ್ತಿತ್ವಕ್ಕಾಗಿ X ಮತ್ತು Y ಕ್ರೊಮೊಸೋಮ್ಗಳನ್ನು ಸೇರಿಸಲು ಭೂಮಿಗೆ ಬರುವ ಒಂದು ರೂಪಕಾತ್ಮಕ ಪ್ರಯತ್ನ. ಸತ್ಯ ಪ್ರಕಾಶ್ ಅವರ ಅಭಿನವ ದೃಷ್ಟಿಕೋಣ ಮತ್ತು ತತ್ತ್ವವಿಚಾರ ಈ ಚಿತ್ರದ ಪ್ರತಿಯೊಂದು ದೃಶ್ಯದಲ್ಲಿಯೂ ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.
ಇದನ್ನು ಓದಿ: ಸತ್ಯ ಪಿಕ್ಚರ್ ಬ್ಯಾನರ್ ಅಡಿ ತಯಾರಾಗಿರುವ ಎಕ್ಸ್ ಅಂಡ್ ವೈ ಚಿತ್ರ ಜೂ.26 ಬಿಡುಗಡೆ
ಬೃಂದಾ ಆಚಾರ್ಯ ನಾಯಕಿಯಾಗಿ, ಹಾಗೂ ಆಯನ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಮಾನವ ಸಂಬಂಧಗಳು, ಆಯ್ಕೆಗಳು ಮತ್ತು ಜೀವನದ ಮಜಲುಗಳನ್ನು ಮನರಂಜನೆಯ ಲಹರಿಯಲ್ಲಿ ಚಿತ್ರವು ಅನಾವರಣಗೊಳಿಸುತ್ತದೆ. ಚಿತ್ರವು ತಾಂತ್ರಿಕವಾಗಿ ಪ್ರೌಢವಾಗಿದ್ದು, ಸತ್ಯ ಪ್ರಕಾಶ್ ಅವರ ನಿರ್ದೇಶನದಲ್ಲಿನ ಭಾವಪೂರ್ಣ ದೃಶ್ಯಕಟ್ಟಣೆ ಈಕಾಲದ ಕನ್ನಡ ಸಿನಿಮಾ ಪ್ರೇಮಿಗಳಿಗೆ ವಿಶೇಷ ಅನುಭವ ನೀಡಲಿದೆ.
ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಸ್ನೇಹಿತೆಯಾದಂತ ದೀಪಶ್ರೀ ಪ್ರಮೋದ್ ಅವರು ಸಾರ್ವಜನಿಕರಿಗೆ ಮನವಿಯೊಂದನ್ನು ನೀಡಿದ್ದು,
“ದಯವಿಟ್ಟು ಕನ್ನಡದ ಚಲನಚಿತ್ರಗಳನ್ನು ಸಿನಿಮಾ ಮಂದಿರಗಳಲ್ಲಿ ವೀಕ್ಷಿಸಿ, ಪ್ರೋತ್ಸಾಹಿಸಿ, ‘X & Y’ ಚಿತ್ರವನ್ನು ಗೆಲ್ಲಿಸಿ.” ಎಂದಿದ್ದಾರೆ.
