ಶ್ಲೋಕ – 18
ಯದಾ ವಿನಿಯತಂ ಚಿತ್ತಮಾತ್ಮನ್ಯೇವಾವತಿಷ್ಠತೇ ।
ನಿಸ್ಪೃಹಃ ಸರ್ವಕಾಮೇಭ್ಯೋ ಯುಕ್ತ ಇತ್ಯುಚ್ಯತೇ ತದಾ ॥೧೮॥
ಚನ್ನಾಗಿ ಹದಗೊಂಡ ಒಳಬಗೆ ಭಗವಂತನಲ್ಲೆ ನೆಲೆಗೊಂಡಾಗ, ಎಲ್ಲ ಕಾಮಗಳ ಆಸೆ ಅಳಿದಾಗ ‘ಧ್ಯಾನಯೋಗಿ’ ಎನ್ನಿಸಿಕೊಳ್ಳುತ್ತಾನೆ.
ಯೋಗಾಭ್ಯಾಸದಿಂದ ಯೋಗಿಯ ಸ್ಥುಪ್ತಪ್ರಜ್ಞೆ ನಿಯಂತ್ರಣವಾಗುತ್ತದೆ.
ಸಾಮಾನ್ಯವಾಗಿ ನಮ್ಮ ಚಿತ್ತದಲ್ಲಿರುವ ಹಿಂದಿನ ಕೆಟ್ಟ ನೆನಪುಗಳು ಸದಾ ನಮ್ಮನ್ನು ಕಾಡುತ್ತಿರುತ್ತವೆ.
ಯಾವುದೋ ಹಗೆ, ಯಾವುದೋ ಪ್ರೀತಿ ಇವೆಲ್ಲವನ್ನೂ ಬದಿಗೊತ್ತಿ ಯೋಗಿ ತನ್ನ ಅಂತರಂಗದ ಪೀಠದಲ್ಲಿ ಕೇವಲ ಭಗವಂತನನ್ನು ಕೂರಿಸಬಲ್ಲ.
ಹೀಗೆ ಮಾಡಿದಾಗ ಸದಾ ಅಂತರಂಗದಲ್ಲಿ ಭಗವಂತನ ದರ್ಶನವಾಗುತ್ತದೆ.
ಆ ಭಗವಂತನನ್ನು ಕಂಡಮೇಲೆ ಇನ್ನೇನೂ ಬೇಕು ಎನ್ನಿಸುವುದಿಲ್ಲ.
ಏಕೆಂದರೆ ಭಗವಂತ ನಾವು ಬಯಸುವ ಸಂಗತಿಗಳಲ್ಲೇ ಅತ್ಯಂತ ಶ್ರೇಷ್ಠ ವಾದ ಸಂಗತಿ.
ಅಂತರಂಗದ ಆನಂದದ ಚಿಲುಮೆ ತೆರೆದುಕೊಂಡಾಗ ಕ್ಷುದ್ರವಾದ ಬಾಹ್ಯ ಕಾಮನೆಗಳು ಅಳಿದುಹೋಗಿ ಆತ ಧ್ಯಾನಯೋಗಿ ಎನ್ನಿಸಿಕೊಳ್ಳುತ್ತಾನೆ.
ಅರ್ಥ:-
ಯಾವಾಗ ಯೋಗಿಯ ಮನಸ್ಸು ಸಂಪೂರ್ಣ ನಿಯಂತ್ರಿತವಾಗಿ, ಹೊರಗಿನ ವಿಷಯಗಳಲ್ಲಿ ತಿರುಗಾಡದೆ,
ಆತ್ಮನಲ್ಲೇ ನೆಲೆಗೊಳ್ಳುತ್ತದೆ ಮತ್ತು ಎಲ್ಲ ಕಾಮನೆಗಳಿಂದ ಮುಕ್ತನಾಗಿರುತ್ತದೆ — ಅಂದಾಗ ಅವನನ್ನು ‘ಧ್ಯಾನಯೋಗಿ’,
‘ಯುಕ್ತ’ ಅಥವಾ ‘ಸ್ಥಿತಪ್ರಜ್ಞ’ ಎಂದು ಕರೆಯುತ್ತಾರೆ.

[…] […]
[…] […]