Bhagavad Gita
ಶ್ಲೋಕ – 16
ಆ ಬ್ರಹ್ಮಭುವನಾಲ್ಲೋಕಾಃ ಪುನರಾವರ್ತಿನೋರ್ಜುನ ।
ಮಾಮುಪೇತ್ಯ ತು ಕೌಂತೇಯ ಪುನರ್ಜನ್ಮ ನ ವಿದ್ಯತೇ ॥೧೬॥
ಆ ಬ್ರಹ್ಮಭುವನಾತ್ ಲೋಕಾಃ ಪುನಃ ಆವರ್ತಿನಃ ಅರ್ಜುನ ।
ಮಾಮ್ ಉಪೇತ್ಯ ತು ಕೌಂತೇಯ ಪುನಃ ಜನ್ಮ ನ ವಿದ್ಯತೇ –
ಅರ್ಜುನ, ಬ್ರಹ್ಮ ಲೋಕದ ತನಕದ ಎಲ್ಲ ಲೋಕಗಳಿಂದಲೂ ಮರಳಿ ಬರಲೇಬೇಕು. ಕೌಂತೇಯ, ನನ್ನನ್ನು ಪಡೆದಾಗ ಮಾತ್ರ ಮರುಹುಟ್ಟು ಇಲ್ಲ.
ಬ್ರಹ್ಮ ಲೋಕದಿಂದ ಹಿಡಿದು ಇತರ ಎಲ್ಲಾ ಲೋಕಗಳಿಗೂ ಒಂದು ದಿನ ನಾಶವಿದೆ. ಚತುರ್ಮುಖ ಬ್ರಹ್ಮನ ಆಯಸ್ಸು 31,104,000,0000000(ಮೂವತ್ತೊಂದು ಸಾವಿರದ ನೂರಾ ನಾಲ್ಕು ಸಾವಿರ ಕೋಟಿ) ವರ್ಷ.
ಇದು ಭಗವಂತನಿಗೆ ಒಂದು ಹಗಲಿನಂತೆ! ಭಗವಂತ ಕಾಲಾತೀತ. ಆದ್ದರಿಂದ ಕೃಷ್ಣ ಹೇಳುತ್ತಾನೆ “ನನ್ನನ್ನು ಪಡೆದಾಗ ಮಾತ್ರ ಮರುಹುಟ್ಟು ಇಲ್ಲ” ಎಂದು.

[…] ಇದನ್ನು ಓದು: ಭಗವದ್ಗೀತೆ ಅಧ್ಯಾಯ-8, ಶ್ಲೋಕ -16 […]