ಭಗವದ್ಗೀತೆಯ ಶ್ಲೋಕ ಪಾಠ: ನಿತ್ಯ ಜೀವನದ ಗೀತೋಪದೇಶ

ನಾನು ಕರ್ಮ ಮಾಡದೆ ಇದ್ದರೆ ಈ ಜನರೆಲ್ಲಾ ದಾರಿ ತಪ್ಪಿ ಹಾಳಾಗುತ್ತಾರೆ. ಧರ್ಮದ ಕಲಬೆರೆಕೆಗೆ ಕಾರಣನಾಗಿ, ಈ ಎಲ್ಲ ಜನತೆಯನ್ನು ನಾನೆ ಕೈಯಾರ ಕೆಡವಿದಂತಾದೀತು ಎಂಬುದು ಶ್ರೀಕೃಷ್ಣನ ಉಪದೇಶ. ಭಗವದ್ಗೀತೆಯ ಶ್ಲೋಕ 3.24ನಲ್ಲಿ ಕರ್ಮದ ಅವಶ್ಯಕತೆಯನ್ನೂ, ಜ್ಞಾನಿಯ ಕರ್ತವ್ಯವನ್ನೂ ಸ್ಪಷ್ಟಪಡಿಸಲಾಗಿದೆ.