ಭಗವದ್ಗೀತೆ (ಕರ್ಮ ಯೋಗ) ಅಧ್ಯಾಯ – 3 ಶ್ಲೋಕ – 30

ಈ ಶ್ಲೋಕದಲ್ಲಿ “ಸಂನ್ಯಸ್ಯ” ಎಂಬ ಪದವು ಅತ್ಯಂತ ಗಂಭೀರವಾದ ಅರ್ಥವನ್ನು ಹೊತ್ತಿದೆ. ಕರ್ಮವನ್ನು ತ್ಯಜಿಸು ಎಂದಲ್ಲ, ಅದರ ಫಲಾಭಿಲಾಷೆಯನ್ನೇ ತ್ಯಜಿಸು. ಇದು ಸಂನ್ಯಾಸ ಎಂಬುದಕ್ಕಿಂತಲೂ ಸಮರ್ಪಣೆಯ ಭಾವನೆ.