ಅಧ್ಯಾಯ-1
ಶ್ಲೋಕ – 39
ಕಥಂ ನ ಜ್ಞೇಯಮಸ್ಮಾಭಿಃ ಪಾಪಾದಸ್ಮಾನ್ನಿವರ್ತಿತುಮ್ ।
ಕುಲಕ್ಷಯಕೃತಂ ದೋಷಂ ಪ್ರಪಶ್ಯದ್ಭಿರ್ಜನಾರ್ದನ ॥೩೯॥
ಕುಲಕ್ಷಯಕೃತಂ ದೋಷಂ ಪ್ರಪಶ್ಯದ್ಭಿರ್ಜನಾರ್ದನ ॥೩೯॥
ಕಥಮ್ ನ ಜ್ಞೇಯಮ್ ಅಸ್ಮಾಭಿಃ ಪಾಪಾತ್ ಅಸ್ಮಾತ್ ನಿವರ್ತಿತುಮ್ ಕುಲಕ್ಷಯ ಕೃತಮ್ ದೋಷಮ್ ಪ್ರಪಶ್ಯದ್ಭಿ ಜನಾರ್ದನ- ಓ ಜನಾರ್ದನ, ಕುಲದ ಅಳಿವಿನಿಂದಾಗುವ ಕೇಡನ್ನು ಮುಂಗಾಣಬಲ್ಲ ನಾವು ಇಂಥ ತಪ್ಪಿನಿಂದ ದೂರವಿರಬೇಕು ಎಂದರಿಯದಿದ್ದರೆ ಹೇಗೆ?
ಇಂಥಹ ಮಹಾಪಾಪವನ್ನು ಮಾಡಬಾರದು ಎಂದು ನಾವು ತಿಳಿದುಕೊಳ್ಳದಿದ್ದರೆ, ದುರ್ಯೋಧನನಿಗೂ ನಮಗೂ ಇರುವ ವೆತ್ಯಾಸವಾದರೂ ಏನು? ಹುಟ್ಟು ಸಾವುಗಳ ಬಂಧದಿಂದ ಪಾರುಮಾಡುವ ಓ ಜನಾರ್ದನನೇ, ಒಂದು ಕುಲವನ್ನು ನಾಶ ಮಾಡುವಂತಹ ದೋಷ ಸ್ಪಷ್ಟವಾಗಿ ನನ್ನ ಕಣ್ಣಿಗೆ ಕಾಣುತ್ತಿದೆ.
ಯುದ್ಧೋತ್ತರ ಭಾರತದ ಚಿತ್ರ ನನ್ನ ಕಣ್ಣಿಗೆ ಕಟ್ಟುತ್ತಿದೆ. ಯುದ್ಧದಿಂದಾಗುವ ಅನಿಷ್ಟ ಗೊತ್ತಿದ್ದೂ ಕೂಡಾ, ಯುದ್ಧಕ್ಕೆ ಕಾಲು ಕೆದಕುವ ಬುದ್ಧಿಯನ್ನು ನಾವು ತೋರಿಸಿದರೆ ದುರ್ಯೋಧನನಂತೆ ನಾವು ಕೀಳು ಮಟ್ಟಕ್ಕಿಳಿದಂತಾಗುವುದಿಲ್ಲವೇ? ಇದು ಅರ್ಜುನನ ಪ್ರಶ್ನೆ.

[…] 1.https://vicharavisthara.com/bhagavadgeethe-shloka-39/ ಭಗವದ್ಗೀತೆ – ದಿನಕ್ಕೊಂದು ಶ್ಲೋಕ –39 […]