ನವದೆಹಲಿ, ಮೇ 14: ಭಾರತದ ರಕ್ಷಣಾ ತಂತ್ರಜ್ಞಾನ ಮತ್ತೊಂದು ಮುನ್ನಡೆಯತ್ತ ಹೆಜ್ಜೆ ಇಟ್ಟಿದ್ದು, ಡ್ರೋನ್ ಸಮೂಹದ ಬೆಳೆಯುತ್ತಿರುವ ಬೆದರಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಸ್ವದೇಶಿ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಲಾದ ‘ಭಾರ್ಗವಸ್ತ್ರ’ ಎಂಬ ನೂತನ ಕೌಂಟರ್ ಡ್ರೋನ್ ವ್ಯವಸ್ಥೆಯ ಪರೀಕ್ಷೆ ಯಶಸ್ವಿಯಾಗಿದೆ.
ಸೋಲಾರ್ ಡಿಫೆನ್ಸ್ ಅಂಡ್ ಏರೋಸ್ಪೇಸ್ ಲಿಮಿಟೆಡ್ (SDAL) ಸಂಸ್ಥೆ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರುವ ಈ ಕಡಿಮೆ ವೆಚ್ಚದ ಪ್ರತಿದಾಳ ಶಸ್ತ್ರವು ಹಾರ್ಡ್ ಕಿಲ್ ಮೋಡ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಗೋಪಾಲಪುರದ ಸೀವರ್ಡ್ ಫೈರಿಂಗ್ ರೇಂಜ್ ನಲ್ಲಿ ನಡೆದ ತೀವ್ರ ಪರೀಕ್ಷೆಗಳಲ್ಲಿ ಈ ವ್ಯವಸ್ಥೆ ಬಳಸುವ ಮೈಕ್ರೋ ರಾಕೆಟ್ಗಳು ಎಲ್ಲ ನಿರ್ಧಿಷ್ಟ ಗುರಿಗಳನ್ನು ಸಾಧಿಸಿದವು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಮೇ 13, 2025 ರಂದು ಗೋಪಾಲಪುರದಲ್ಲಿ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮೂರು ಹಂತಗಳಲ್ಲಿ ಟ್ರಯಲ್ಸ್ ನಡೆಯಿದ್ದು, ಎರಡು ಬಾರಿ ಪ್ರತ್ಯೇಕವಾಗಿ ಒಂದು ಒಂದು ರಾಕೆಟ್ಗಳು ಮತ್ತು ಮೂರನೇ ಬಾರಿ 2 ಸೆಕೆಂಡುಗಳಲ್ಲಿ ಎರಡು ರಾಕೆಟ್ಗಳನ್ನು ಸಾಲ್ವೋ ಮೋಡ್ ನಲ್ಲಿ ಬಿಡುಗಡೆ ಮಾಡುವ ಪ್ರಯೋಗಗಳು ನಡೆದವು. ಎಲ್ಲ ನಾಲ್ಕು ರಾಕೆಟ್ಗಳೂ ನಿರೀಕ್ಷಿತವಾಗಿ ಕಾರ್ಯನಿರ್ವಹಿಸಿ ಅಗತ್ಯವಿರುವ ಉಡಾವಣಾ ಗುಣಮಟ್ಟವನ್ನು ತಲುಪಿದೆ.
ಡ್ರೋನ್ ಸ್ವಾರ್ಮ್ ದಾಳೆಗಳ ತೀವ್ರತೆಯನ್ನು ಲಘುಮಾಡುವ ದಿಕ್ಕಿನಲ್ಲಿ ಭಾರ್ಗವಸ್ತ್ರವು ಪ್ರಮುಖ ತಂತ್ರಜ್ಞಾನಿಯಾಗಲಿದೆ ಎಂಬ ನಂಬಿಕೆಯನ್ನು SDAL ವ್ಯಕ್ತಪಡಿಸಿದೆ. ಈ ಸಾಧನೆಯು ಭಾರತದ ಸ್ವಾವಲಂಬಿ ರಕ್ಷಣಾ ಉತ್ಪಾದನೆಗೆ ಮತ್ತೊಂದು ಘಟ್ಟವನ್ನೂ ಸೂಚಿಸುತ್ತದೆ.
