ನವದೆಹಲಿ, ಮೇ 5: ಭಾರತದ ಕಾರ್ಪೊರೇಟ್ ಜಗತ್ತಿನ ದೊಡ್ಡ ಹಗರಣ ಸದ್ದು ಮಾಡುತ್ತಿದೆ. ಭೂಷಣ್ ಪವರ್ ಅಂಡ್ ಸ್ಟೀಲ್ ಲಿಮಿಟೆಡ್ ) ಕಂಪನಿಯ ಸಾಲ ತೀರಿಸುವಿಕೆ ಯೋಜನೆಯನ್ನು ಸುಪ್ರಿಂಕೋರ್ಟ್ ರದ್ದು ಮಾಡಿದೆ. ಇದರೊಂದಿಗೆ ಜೆಎಸ್ಡಬ್ಲ್ಯು ಸ್ಟೀಲ್ ಸಂಸ್ಥೆಗೆ ನೀರಲ್ಲಿ ಹೋಮ ಮಾಡಿದಂತಾದ ಪರಿಸ್ಥಿತಿ ಉದ್ಭವಿಸಬಹುದು. ಸಜ್ಜನ್ ಜಿಂದಾಲ್ ಮಾಲಕತ್ವದ ಜೆಎಸ್ಡಬ್ಲ್ಯು ಸ್ಟೀಲ್ ಸಂಸ್ಥೆ 2021ರಲ್ಲಿ ಬಿಪಿಎಸ್ಎಲ್ ಅನ್ನು 19,350 ಕೋಟಿ ರೂಗೆ ಖರೀದಿ ಮಾಡಿತ್ತು. ಬಳಿಕ ಸಾವಿರಾರು ಕೋಟಿ ರೂ ಹೂಡಿಕೆ ಮಾಡಿ ಬಿಪಿಎಸ್ಎಲ್ನ ಇನ್ಫ್ರಾಸ್ಟ್ರಕ್ಚರ್ ಅನ್ನು ಅಭಿವೃದ್ಧಿಪಡಿಸಿತು. ಈಗ ಒಮ್ಮೆಲೇ ಈ ಒಪ್ಪಂದವನ್ನು ಅಸಿಂಧುಗೊಳಿಸಿರುವುದು ಜಿಂದಾಲ್ಗೆ 5,000 ಕೋಟಿ ರೂಗೂ ಅಧಿಕ ಮೊತ್ತದ ನಷ್ಟದ ಅಪಾಯ ತೆರೆದಿಟ್ಟಿದೆ.
ಬಿಪಿಎಸ್ಎಲ್ ಪ್ರಕರಣದಲ್ಲಿ ಸುಪ್ರೀಂ ತಗಾದೆ ಏನು?
ಭೂಷಣ್ ಪವರ್ ಅಂಡ್ ಸ್ಟೀಲ್ ಲಿಮಿಟೆಡ್ ಸಂಸ್ಥೆ ವಿವಿಧ ವಂಚನೆ ಮೂಲಕ ದಿವಾಳಿಯಾಗುವ ಹಂತದಲ್ಲಿತ್ತು. 40,000-50,000 ಕೋಟಿ ರೂ ಸಾಲದ ಸುಳಿಯಲ್ಲಿದ್ದ ಬಿಪಿಎಸ್ಎಲ್ ವಿರುದ್ಧ ತನಿಖೆ ನಡೆಯುತ್ತಿದೆ. ಅದರ ಮಧ್ಯೆ ಐಬಿಸಿ ಅಥವಾ ದಿವಾಳಿ ತಡೆ ಪ್ರಕ್ರಿಯೆ ನಡೆಸಲಾಗಿದೆ. ವಂಚನೆಯ ಆರೋಪ ಸಂಬಂಧ ತನಿಖೆ ನಡೆಯುತ್ತಿರುವ ಮಧ್ಯೆ ಈ ಮಾರಾಟ ಮಾಡಲಾಗಿದ್ದಕ್ಕೆ ಸರ್ವೋಚ್ಚ ನ್ಯಾಯಾಲಯ ಪ್ರಮುಖವಾಗಿ ತಗಾದೆ ತೆಗೆದಿದೆ.
ಬಿಪಿಎಸ್ಎಲ್ ಮಾರಾಟ ವಿಚಾರದಲ್ಲಿ ಇನ್ಸಾಲ್ವೆನ್ಸಿ ಅಡ್ಮಿನಿಸ್ಟ್ರೇಟರ್ ಮತ್ತು ಕಮಿಟಿ ಆಫ್ ಕ್ರೆಡಿಟರ್ಸ್ ಅವರು ನ್ಯಾಯಸಮ್ಮತವಾಗಿ

[…] […]