BIG NEWS: ಕೆಇಎ ಪರಿಷ್ಕೃತ ‘ಕರಡು ಸೀಟ್ ಮ್ಯಾಟ್ರಿಕ್ಸ್’ ಪ್ರಕಟ – 64,000 ಇಂಜಿನಿಯರಿಂಗ್ ಸೀಟು ಲಭ್ಯ!

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) 2025-26ನೇ ಸಾಲಿಗೆ ಇಂಜಿನಿಯರಿಂಗ್ ಪ್ರವೇಶಾತಿಗೆ ಸಂಬಂಧಿಸಿದ ಕರಡು ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸಿದೆ. ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕಾಲೇಜುಗಳಲ್ಲಿನ ಎಂಜಿನಿಯರಿಂಗ್ ಸೀಟುಗಳನ್ನು ಒಳಗೊಂಡಿರುವ ಈ ಮ್ಯಾಟ್ರಿಕ್ಸ್‌ನಲ್ಲಿ ಈ ಬಾರಿ ಸುಮಾರು 64,000 ಸೀಟುಗಳು ಲಭ್ಯವಿದ್ದು, ಹೊಸ ಕೋರ್ಸ್‌ಗಳ ಪ್ರಾರಂಭ ಮತ್ತು ಪ್ರವೇಶಾತಿ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಸಾರ್ವಜನಿಕರು ಮತ್ತು ಸಂಸ್ಥೆಗಳು ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳನ್ನು 7 ದಿನಗಳ ಒಳಗಾಗಿ ಸಲ್ಲಿಸಬಹುದು ಎಂದು ಕೆಇಎ ಅಧಿಕಾರಿಗಳು ತಿಳಿಸಿದ್ದಾರೆ.