ಪೊಲೀಸರು ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ನೋಟಿಸ್ ನೀಡಬಾರದು: ಸುಪ್ರೀಂ ಕೋರ್ಟ್
ನವದೆಹಲಿ: ಸೋಮವಾರ ಸಂಜೆ ದೆಹಲಿಯ ಕೆಂಪು ಕೋಟೆ (Delhi Blast) ಪ್ರದೇಶದಲ್ಲಿ ನಡೆದ ಕಾರ್ ಬಾಂಬ್ ದಾಳಿಯ ನಂತರ, ಸುಪ್ರೀಂಕೋರ್ಟ್ (Supreme Court) ಮಹತ್ವದ ಸೂಚನೆಯನ್ನ ನೀಡಿದೆ.
ಆರೋಪಿಗಳಿಗೆ ಜಾಮೀನು ನಿರಾಕರಿಸಿದ ಸುಪ್ರೀಂ
ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧನ ಮಾಡಲಾಗಿರುವ ಹಾಗೂ ಆರೋಪ ಎದುರಿಸುತ್ತಿರುವ ಆರೋಪಿಗಳನ್ನ ಜಾಮೀನುನನ್ನ ಸುಪ್ರೀಂ ಕೋರ್ಟ್ ನಿರಾಕರಣೆ ಮಾಡಿದ್ದು, ಈ ಮೂಲಕ ಖಡಕ್ ಸಂದೇಶ ನೀಡಿದೆ.
ಪ್ರಚೋದನಕಾರಿ ವಸ್ತುಗಳ ಜೊತೆ ಸಿಕ್ಕಿ ಬಿದ್ದಿದ್ದ ಆರೋಪಿ ಒಬ್ಬ ಜಾಮೀನು ನೀಡುವಂತೆ ಸುಪ್ರೀಂಕೋರ್ಟ್ಗೆ ಮನವಿ ಮಾಡಿದ್ದ, ಈ ಪ್ರಕರಣ ವಿಚಾರಣೆ ಮಾಡಿದೆ. ಈ ಸಮಯದಲ್ಲಿ ಆರೋಪಿ ಪರ ವಕೀಲರು ಸಹ ನ್ಯಾಯಾಲಯಕ್ಕೆ, ನಿನ್ನೆ ಸಂಜೆಯ ಘಟನೆಗಳ ನಂತರ ಈ ಪ್ರಕರಣವನ್ನು ವಾದಿಸಲು ಇದು ಅತ್ಯುತ್ತಮ ಬೆಳಗ್ಗೆ ಅಲ್ಲದಿರಬಹುದು ಎಂದು ಹೇಳಿದ್ದರು. ಇದಕ್ಕೆ, ಪ್ರತಿಯಾಗಿ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು, ಈ ರೀತಿಯ ವಿಚಾರಗಳಲ್ಲಿ ಸ್ಪಷ್ಟ ಸಂದೇಶವನ್ನು ಕಳುಹಿಸಲು ಇದು ಅತ್ಯುತ್ತಮ ಬೆಳಗ್ಗೆ ಎಂದು ಅಭಿಪ್ರಾಯಪಟ್ಟಿದೆ.
ಇದನ್ನು ಓದಿ: ಐತಿಹಾಸಿಕ ಹೆಜ್ಜೆ: ಮಹಾರಾಷ್ಟ್ರದಲ್ಲಿ ದೇಶದ ಮೊದಲ ಸಹಕಾರಿ ಬಹು-ಫೀಡ್ ಜೈವಿಕ ಅನಿಲ ಸ್ಥಾವರ ಉದ್ಘಾಟನೆ!
ಸ್ಪಷ್ಟ ಸಂದೇಶ ಕೊಟ್ಟ ಸುಪ್ರೀಂಕೋರ್ಟ್
ಆರೋಪಿಯು ಇಸ್ಲಾಮಿಕ್ ಸ್ಟೇಟ್ ಧ್ವಜಕ್ಕೆ ಹೋಲಿಕೆ ಆಗುವ ಧ್ವಜವನ್ನು ಡಿಪಿಯಾಗಿ ಹಾಕಿಕೊಂಡಿದ್ದ ವಾಟ್ಸಾಪ್ ಗುಂಪಿನ ಸದಸ್ಯನಾಗಿದ್ದು, ಇಸ್ಲಾಮಿಕ್ ಬುಕ್ಗಳನ್ನ ಮಾತ್ರ ವಶಪಡಿಸಿಕೊಳ್ಳಲಾಗಿದೆ ಎಂಬ ವಾದವನ್ನ ಸುಪ್ರೀಂ ನಿರಾಕರಿಸಿದ್ದು, ವಶಪಡಿಸಿಕೊಂಡ ವಸ್ತುಗಳ ಸ್ವರೂಪ ಮತ್ತು ಆರೋಪಿಗಳ ಆನ್ಲೈನ್ ಗ್ರೂಪ್ ಕಠಿಣ ಭಯೋತ್ಪಾದನಾ ವಿರೋಧಿ ಕಾನೂನಿನ ಅಡಿಯಲ್ಲಿ ಬರುತ್ತದೆ. ಹಾಗಾಗಿ ಪೊಲೀಸ್ ಕಸ್ಟಡಿಯಲ್ಲಿ ಇರಲು ಅರ್ಹ ಎಂದು ಹೇಳಿದೆ. ಈ ಮೂಲಕ ಭಯೋತ್ಪಾದಕ ಆರೋಪಿಗಳಿಗೆ ಜಾಮೀನು ನಿರಾಕರಣೆ ಮಾಡಿದೆ.
ದೆಹಲಿ ಸ್ಫೋಟ, ಸಂಚುಕೋರರನ್ನು ಸುಮ್ಮನೆ ಬಿಡಲ್ಲ- ಭೂತಾನ್ನಲ್ಲಿ ಮೋದಿ ಪ್ರತಿಜ್ಞೆ
ದೆಹಲಿಯ ಕೆಂಪು ಕೋಟೆಯ ಸಮೀಪ ನಡೆದ ಕಾರ್ ಬಾಂಬ್ ಸ್ಫೋಟದ ಸಂಚುಕೋರರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಲ್ಲ ಎಂದು ಪ್ರಧಾನಿ ಮೋದಿ ಪ್ರತಿಜ್ಞೆ ಮಾಡಿದ್ದಾರೆ.
ಪ್ರಧಾನಿ ಮೋದಿ ಎರಡು ದಿನಗಳ ರಾಜ್ಯ ಭೇಟಿಗಾಗಿ ನೆರೆಯ ಭೂತಾನ್ಗೆ ಪ್ರಯಾಣ ಬೆಳೆಸಿದ್ದಾರೆ. ಇಂದು (ನ.11) ಅವರು ರಾಜಧಾನಿ ಥಿಂಫುವಿನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದರು. ಭೂತಾನ್-ಭಾರತ ಸಂಬಂಧಗಳ ಕುರಿತು ಮಾತನಾಡುತ್ತಾ, ಪ್ರಧಾನಿ ಮೋದಿ ದೆಹಲಿಯಲ್ಲಿ ನಡೆದ ಕಾರು ಬಾಂಬ್ ಸ್ಫೋಟದ ಬಗ್ಗೆಯೂ ಪ್ರಸ್ತಾಪಿಸಿದರು.
ಘಟನೆಯ ಹಿಂದಿನ ಪಿತೂರಿಗಾರರನ್ನು ಬಿಡಲಾಗುವುದಿಲ್ಲ ಮತ್ತು ಇದರ ಹಿಂದೆ ಇರುವ ಎಲ್ಲರನ್ನೂ ನ್ಯಾಯದ ಮುಂದೆ ತರಲಾಗುವುದು. ಈ ಘಟನೆಯ ತನಿಖೆ ನಡೆಸುತ್ತಿರುವ ಎಲ್ಲಾ ಸಂಸ್ಥೆಗಳೊಂದಿಗೆ ನಾನು ನಿನ್ನೆ ರಾತ್ರಿಯಿಡೀ ಸಂಪರ್ಕದಲ್ಲಿದ್ದೆ. ನಮ್ಮ ಸಂಸ್ಥೆಗಳು ಈ ಪಿತೂರಿಯ ಆಳವನ್ನು ಭೇದಿಸುತ್ತವೆ. ಇದರ ಹಿಂದಿನ ಅಪರಾಧಿಗಳನ್ನು ಬಿಡಲಾಗುವುದಿಲ್ಲ. ಎಲ್ಲ ಹೊಣೆಗಾರರನ್ನು ನ್ಯಾಯದ ಕಟಕಟೆಗೆ ತರಲಾಗುವುದು ಎಂದು ಅವರು ಹೇಳಿದರು.

[…] […]