ರಾಷ್ಟ್ರದ ನಾಗರಿಕರ ನೋಂದಣಿ ಜನನ ಮತ್ತು ಮರಣ ಅಧಿನಿಯಮ–1960 ಹಾಗೂ ಅದರನ್ವಯ ಕರ್ನಾಟಕ ಜನನ ಮತ್ತು ಮರಣ ನೋಂದಣಿ ಕಾಯ್ದೆ–1970 ಮತ್ತು ಪುನರ್ ರಚಿತ ಕರ್ನಾಟಕ ಜನನ–ಮರಣ ನೋಂದಣಿ ನಿಯಮಗಳು–1990ರ ಪ್ರಕಾರ ಜನನ ಮತ್ತು ಮರಣ ನೋಂದಣಿ ಕಡ್ಡಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ 2015ರ ಏಪ್ರಿಲ್ 1ರಿಂದ ಜನನ ಮತ್ತು ಮರಣ ನೋಂದಣಿಯನ್ನು ಆನ್ಲೈನ್ ಮೂಲಕ ನಿರ್ವಹಿಸಲಾಗುತ್ತಿದ್ದು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಜನ್ಮ ತಂತ್ರಾಂಶದ ಮೂಲಕ ನೋಂದಣಿ ಪ್ರಕ್ರಿಯೆ ಜಾರಿಯಲ್ಲಿದೆ.
ಇತ್ತೀಚೆಗೆ ಜಾರಿಗೆ ಬಂದ ಜನನ–ಮರಣ ನೋಂದಣಿ (ತಿದ್ದುಪಡಿ–2023) ಅಧಿನಿಯಮ–1960 ಹಾಗೂ ಕರ್ನಾಟಕ ಜನನ–ಮರಣ ನೋಂದಣಿ (ತಿದ್ದುಪಡಿ–2024) ನಿಯಮಗಳ ಪ್ರಕಾರ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಅವುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಇದನ್ನು ಓದಿ: ಕರುನಾಡಿಗೆ ತೀವ್ರ ಚಳಿ; 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಜನನ–ಮರಣ ನೋಂದಣಿಯಲ್ಲಿ ಪಾಲಿಸಬೇಕಾದ ಪ್ರಮುಖ ಅಂಶಗಳು
-
ಜನನ ಪ್ರಮಾಣಪತ್ರ (ನಮೂನೆ–1):
ಕಾಲಂ 4 ಮತ್ತು 5ರಲ್ಲಿ ತಂದೆ–ತಾಯಿಗಳ ಆಧಾರ್ ಸಂಖ್ಯೆ ಲಭ್ಯವಿಲ್ಲದಿದ್ದಲ್ಲಿ, ಮೊಬೈಲ್ ಸಂಖ್ಯೆ ಮತ್ತು ಇ–ಮೇಲ್ ವಿಳಾಸವನ್ನು ನಮೂದಿಸುವುದು ಕಡ್ಡಾಯ. -
ಮರಣ ಪ್ರಮಾಣಪತ್ರ (ನಮೂನೆ–2):
ಕಾಲಂ 6ರಲ್ಲಿ ಆಧಾರ್ ಸಂಖ್ಯೆ, ಜನನ ದಿನಾಂಕ ಅಥವಾ ವಯಸ್ಸು ಲಭ್ಯವಿಲ್ಲದಿದ್ದಲ್ಲಿ, ಮೊಬೈಲ್ ಸಂಖ್ಯೆ ಮತ್ತು ಇ–ಮೇಲ್ ವಿಳಾಸವನ್ನು ನಮೂದಿಸಬೇಕು.
21 ದಿನಗಳೊಳಗೆ ಪ್ರಮಾಣಪತ್ರ ವಿತರಣೆ
ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು ಹಾಗೂ ಮನೆಯಲ್ಲಿ ಸಂಭವಿಸುವ ಎಲ್ಲಾ ಜನನ ಮತ್ತು ಮರಣ ಪ್ರಕರಣಗಳಿಗೆ ಸಂಬಂಧಿಸಿದ ಪ್ರಮಾಣಪತ್ರಗಳನ್ನು 21 ದಿನಗಳೊಳಗೆ ಕಡ್ಡಾಯವಾಗಿ ವಿತರಿಸಬೇಕು ಎಂದು ಕೊಡಗು ಜಿಲ್ಲೆಯ ಕುಶಾಲನಗರ ಪುರಸಭೆಯ ಜನನ–ಮರಣ ನೋಂದಣಿ ಅಧಿಕಾರಿ ತಿಳಿಸಿದ್ದಾರೆ.
ನಿಯಮ ಉಲ್ಲಂಘನೆ ನಡೆದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

[…] […]