ಟಿ.ನರಸೀಪುರ : ರಾಜ್ಯ ಹಾಗೂ ಜನರ ಅಭಿವೃದ್ಧಿ ನೋಡಿ ಬಿಜೆಪಿಯವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ.ಹಾಗಾಗಿ ಏನಾದರೊಂದು ವಿಷಯ ಮುಂದಿಟ್ಚು ಟೀಕೆ ಮಾಡುವುದರಲ್ಲಿ ನಿಸ್ಸೀಮರು.ಖಜಾನೆಯಲ್ಲಿ ಹಣ ವಿಲ್ಲದಿದ್ದರೆ ಇಡೀ ರಾಜ್ಯದ ಎಲ್ಲಾ ವಿಧಾನ ಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲು ಸಾಧ್ಯವಾಗುತ್ತಿತ್ತೇ… ಎಂದು ಸಂಸದ ಸುನಿಲ್ ಬೋಸ್ ಕುಟುಕಿದರು.
ತಾಲ್ಲೂಕಿನ ಸೋಸಲೆ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ 1140 ಸಂಖ್ಯೆಯ ನಲ್ಲಿ ಸಂಪರ್ಕ, ಹೊಸ ಟ್ಯಾಂಕ್ ನಿರ್ಮಾಣ ಹಾಗೂ ಹಳೆಯ ಎರೆಡು ಟ್ಯಾಂಕ್ ರಿಪೇರಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.ಮೈಸೂರಿನ ಮಹಾರಾಜ ಮೈದಾನದಲ್ಲಿ ನಡೆಯುವ ಸಾಧನಾ ಸಮಾವೇಶಕ್ಕಾಗಿ ಮುಖ್ಯಮಂತ್ರಿಗಳು ಸೇರಿದಂತೆ ಮಂತ್ರಿ ಮಂಡಲ ಹಾಜರಿದ್ದು ಕಾಂಗ್ರೆಸ್ ಪಕ್ಷವು ಸದಾಕಾಲ ಜನರ ಹಾಗೂ ರಾಜ್ಯದ ಅಭಿವೃದ್ಧಿ ಪರವಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಸಮಾವೇಶದಲ್ಲಿ ತಿಳಿಸಲಾಗುತ್ತದೆ.ಇದನ್ನು ಸಹಿಸಿಕೊಳ್ಳಲಾಗದ ಬಿಜೆಪಿಯವರು ಕಾಲೆಳೆಯುವ ಕೆಲಸ ಮಾಡುತ್ತಿದ್ದು ಇದು ಅವರಿಗೆ ಕರಗತವಾಗಿಬಿಟ್ಟಿದೆ ಎಂದು ವ್ಯಂಗ್ಯವಾಡಿದರು.
ಟಿ.ನರಸೀಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ ಒಂದು ಸಾವಿರ ಕೋಟಿಗೂ ಹೆಚ್ಚು ಅನುದಾನ ಬಳಕೆಯಾಗುತ್ತಿದ್ದು ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲದಿದ್ದರೆ ಅನುದಾನ ಹೇಗೆ ಬಿಡುಗಡೆ ಆಗುತ್ತದೆ ಎಂಬುದನ್ನು ಅವರೇ ಅರ್ಥ ಮಾಡಿಕೊಳ್ಳಲಿ ಎಂದರು.
ಇದನ್ನು ಓದಿ: Watch Video:- ಟಿ.ನರಸೀಪುರ: ರಾಜ್ಯದ ಸಾಧನೆಗೆ ಭಿತಿಗೊಳಗಾದ ಬಿಜೆಪಿಯವರು ಕೇವಲ ಟೀಕೆಗೆ ಸೀಮಿತ – ಸಂಸದೆ ಸುನಿಲ್ ಬೋಸ್
ಸರ್ಕಾರದ ಗ್ಯಾರೆಂಟಿ ಯೋಜನೆಗಳು ದೇಶದೆಲ್ಲೆಡೆ ಸದ್ದು ಮಾಡಿ ನಮ್ಮ ರಾಜ್ಯದ ಯೋಜನೆಗಳನ್ನು ಬೇರೆ ರಾಜ್ಯಕ್ಕೂ ವಿಸ್ತರಿಸಿ ಯಶಸ್ವಿಯಾಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ.ನಮ್ಮ ಯೋಜನೆಗಳನ್ನು ಬಿಜೆಪಿಯು ಕಾಪಿ ಮಾಡಿ ಜಾರಿಗೊಳಿಸಿದೆ.ಸಿದ್ದರಾಮಯ್ಯರವರ ದೂರದೃಷ್ಟಿಯಿಂದ ರಾಜ್ಯದ ಜನತೆ ಹಾಗೂ ರಾಜ್ಯ ಅಭಿವೃದ್ಧಿ ಪಥದತ್ತ ಸಾಗಿದೆ.ನಮ್ಮದು ಅತ್ಯಂತ ಯಶಸ್ವಿ ಸರ್ಕಾರವಾಗಿದ್ದು ಮುಂದೆಯೂ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ಭವಿಷ್ಯ ನುಡಿದರು.

ಇದೇ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಶಿವರಾಜು ಸೇರಿದಂತೆ ಸಿಬ್ಬಂದಿ ವರ್ಗ ಸಂಸದರಿಗೆ ಮೈಸೂರು ಪೇಟ ತೊಡಿಸಿ ಮಾಲಾರ್ಪಣೆ ಮಾಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಸೋಸಲೆ ಎಂ.ಪರಶಿವಮೂರ್ತಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎಸ್.ಎನ್.ಶೈಲಜಾಮಹೇಶ್,ನಿಂಗಯ್ಯ,ತಾಲ್ಲೂಕು ಪಂಚಾಯತಿ ನಾಮ ನಿರ್ದೇಶನ ಸದಸ್ಯ ಮೋಹಿನ್ ಖಾನ್,ಮಹೇಶ್ ಕುಮಾರ್,ರೇಖಾಪ್ರಭಾ ಲಿಂಗರಾಜು,ಪಿಕಾರ್ಡ್ ಸದಸ್ಯರಾದ ಮಹದೇವಸ್ವಾಮಿ,ಪುಟ್ಟಸ್ವಾಮಿ,ಸಿದ್ದರಾಜು,ಮಹೇಶ್,ಉಕ್ಕಲಗೆರೆ ಬಸವಣ್ಣ,ರಾಜು ಸೇರಿದಂತೆ ಇತರೆ ಮುಖಂಡರು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಶಿವರಾಜು ಸೇರಿದಂತೆ ಇತರರಿದ್ದರು.
- ಎಂ.ನಾಗೇಂದ್ರ ಕುಮಾರ್

[…] ಇದನ್ನು ಓದಿ: ಬಿಜೆಪಿಗೆ ರಾಜ್ಯದ ಅಭಿವೃದ್ಧಿ ಸಹಿಸಲಾರದು;… […]