ಬಿಜೆಪಿಗೆ ರಾಜ್ಯದ ಅಭಿವೃದ್ಧಿ ಸಹಿಸಲಾರದು; ಟೀಕೆಯಲ್ಲಿ ನಿರತರಾಗಿದ್ದಾರೆ – ಸಂಸದ ಸುನಿಲ್ ಬೋಸ್ ವ್ಯಂಗ್ಯ

ಟಿ.ನರಸೀಪುರ ತಾಲೂಕಿನ ಸೋಸಲೆ ಗ್ರಾಮದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಂಸದ ಸುನಿಲ್ ಬೋಸ್, “ಖಜಾನೆಯಲ್ಲಿ ಹಣವಿಲ್ಲ ಎಂದರೆ ಸಾವಿರ ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಬಹುದು? ಬಿಜೆಪಿಗೆ ರಾಜ್ಯದ ಅಭಿವೃದ್ಧಿ ಸಹಿಸಲಾಗುತ್ತಿಲ್ಲ” ಎಂದು ವ್ಯಂಗ್ಯವಾಡಿದರು.