ಬೆಂಗಳೂರು, ಸೆಪ್ಟೆಂಬರ್ 06: ಇಂದು ಆಗಸದಲ್ಲಿ ರಕ್ತಚಂದ್ರಗ್ರಹಣ (Blood Moon Eclipse) ಗೋಚರವಾಗಲಿದೆ. ಸುಮಾರು ಐದು ಗಂಟೆಗಳ ಕಾಲ ಚಂದ್ರನು ಭೂಮಿಯ ಛಾಯೆಯಲ್ಲಿರಲಿದೆ. ಭಾರತದಲ್ಲೂ ರಕ್ತಚಂದಿರದ ದೃಶ್ಯವು ಕಾಣಿಸಲಿದೆ. ಈ ಹಿನ್ನೆಲೆಯಲ್ಲಿ ಹಲವಾರು ಪ್ರಮುಖ ದೇಗುಲಗಳು ನಾಳೆ ಬಂದ್ ಆಗಲಿದ್ದು, ಪೂಜೆ ಮತ್ತು ದರ್ಶನ ಸಮಯದಲ್ಲಿ ಬದಲಾವಣೆ ಸಂಭವಿಸಿದೆ.
ಪ್ರಮುಖ ದೇಗುಲಗಳ ಬ್ಲಾಕ್ ವಿವರಗಳು
- ಮೈಸೂರು ಚಾಮುಂಡೇಶ್ವರಿ ದೇವಸ್ಥಾನ: ರಾತ್ರಿ 9 ಗಂಟೆಗೆ ಬಂದ್, ಗ್ರಹಣ ಆರಂಭ-ಅಂತ್ಯ ಸಮಯದಲ್ಲಿ ವಿಶೇಷ ಪೂಜೆ, ಭಕ್ತರ ಪ್ರವೇಶ ನಿರ್ಬಂಧ.
- ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ: ರಾತ್ರಿ 8 ಗಂಟೆಗೆ ಬಂದ್.
- ಕೊಪ್ಪಳ ಹುಲಿಗೆಮ್ಮ ಮತ್ತು ಅಂಜನಾದ್ರಿ: ಸಂಜೆ 5 ಗಂಟೆ ನಂತರ ದರ್ಶನವಿಲ್ಲ.
- ಹೊರನಾಡು ಅನ್ನಪೂರ್ಣೇಶ್ವರಿ ಗುಡಿ: ಮಧ್ಯಾಹ್ನ 3 ಗಂಟೆಗೆ ಅನ್ನದಾನ ಸ್ಥಗಿತ.
- ಉಡುಪಿ ಕೃಷ್ಣ ಮಠ: ಬೆಳಿಗ್ಗೆ 10:30–12:00 ಪ್ರಸಾದ ವ್ಯವಸ್ಥೆ ಮುಕ್ತಾಯ.
- ಚಿಕ್ಕಬಳ್ಳಾಪುರದ ಪ್ರಮುಖ ದೇಗುಲಗಳು: ಸಂಜೆ 4 ಗಂಟೆಗೆ ಬಂದ್.
- ಕೋಲಾರ ಜಿಲ್ಲೆ: ಮಧ್ಯಾಹ್ನದ ಬಳಿಕ ದೇಗುಲ ಬಾಗಿಲಿಗೆ ಬೀಗ.
- ಬೇಲೂರ ಚನ್ನಕೇಶವ ದೇಗುಲ: ಮಧ್ಯಾಹ್ನ 3:30ಕ್ಕೆ ಕ್ಲೋಸ್.
- ಮಡಿಕೇರಿ ಓಂಕಾರೇಶ್ವರ ದೇಗುಲ, ತಲಕಾವೇರಿ ಸನ್ನಿಧಿ: ಸಂಜೆ 5 ಗಂಟೆಗೆ ಬಂದ್.
ವಿಶಿಷ್ಟ ಪರಂಪರೆ: ಮಲೆ ಮಹದೇಶ್ವರ
ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಮದಪ್ಪಗೆ ಗ್ರಹಣ ತಟ್ಟಲ್ಲ; ನಾಳೆ ಎಂದಿನಂತೆಯೇ ದರ್ಶನ ಇರಲಿದೆ. ಈ ವೇಳೆ ತ್ರಿಕಾಲ ಪೂಜೆ ಹಾಗೂ ಭಕ್ತರಿಗೆ ದರ್ಶನ ಸಿಗಲಿದೆ.
ಗೋಕರ್ಣ ಆತ್ಮಲಿಂಗ ದರ್ಶನ
- ರಾತ್ರಿಃ 9:45 PM – 1:26 AM ಮಾತ್ರ ಆತ್ಮಲಿಂಗದ ದರ್ಶನ.
- ಬೆಳಗ್ಗೆ 10:45 AM ವರೆಗೆ ಆತ್ಮಲಿಂಗ ಸ್ಪರ್ಶ ದರ್ಶನ.
- ರಾತ್ರಿ ಪ್ರಸಾದ ವ್ಯವಸ್ಥೆ ಇಲ್ಲ.
ಬಾದಾಮಿ ಬನಶಂಕರಿ ದೇಗುಲ
ಬಂದ್ ಅಲ್ಲ; ಚಂದ್ರಗ್ರಹಣದ ವೇಳೆ ದೇವರಿಗೆ ನಿರಂತರ ಜಲಾಭಿಷೇಕ ನಡೆಯಲಿದೆ.
ಇಂದು ನಡೆಯುವ ರಕ್ತಚಂದ್ರಗ್ರಹಣದ ವೇಳೆ ಹಲವು ದೇವಾಲಯಗಳಲ್ಲಿ ದರ್ಶನ ಮತ್ತು ಪೂಜೆ ಸಮಯದಲ್ಲಿ ಬದಲಾವಣೆ ಇರುವುದರಿಂದ ಭಕ್ತರು ಈ ಮಾಹಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು.
